ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ ಭಿಕ್ಷಾಟನೆ ತಡೆ: ಮಕ್ಕಳ ಪುನರ್ವಸತಿ

Last Updated 7 ಸೆಪ್ಟೆಂಬರ್ 2013, 6:24 IST
ಅಕ್ಷರ ಗಾತ್ರ

ಕಾಸರಗೋಡು: ಜಿಲ್ಲೆಯಲ್ಲಿ ಮಕ್ಕಳ ಭಿಕ್ಷಾಟನೆ ನಿಯಂತ್ರಿಸಲು ಮತ್ತು ಅನ್ಯ ರಾಜ್ಯದಿಂದ ಬರುವ ವಲಸೆ ಕಾರ್ಮಿಕರ ಕುಟುಂಬದ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೇರಿದ ಚೈಲ್ಡ್‌ಲೈನ್ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಪ್ರತ್ಯೇಕ ಸಮಿತಿಯೊಂದನ್ನು ರಚಿಸಲಾಯಿತು.

ಆರೋಗ್ಯ, ಶಿಕ್ಷಣ, ಪೊಲೀಸ್, ಉದ್ಯೋಗ, ಸಾಮಾಜಿಕ ನ್ಯಾಯ ಇಲಾಖೆಗಳ ಸಹಿತ ಕುಟುಂಬಶ್ರೀ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಚೈಲ್ಡ್‌ಲೈನ್ ಒಳಗೊಂಡಂತೆ ಕೋರ್ ಸಮಿತಿಯನ್ನು ರಚಿಸಲಾಗಿದೆ. ಎಲ್ಲ ವಿದ್ಯಾಲಯಗಳು, ಶಾಲಾ ವಾಹನಗಳಲ್ಲಿ ಪೊಲೀಸ್ 100, ವನಿತಾ 1091, ಕ್ರೈಂ ಸ್ಟಾಪರ್ 1090, ಚೈಲ್ಡ್ ಲೈನ್ 1098 ಎಂಬ ಸಹಾಯಕ ಫೋನ್ ನಂಬರ್‌ಗಳನ್ನು ಪ್ರದರ್ಶಿಸಬೇಕು ಎಂದು ಸಭೆ ಸೂಚಿಸಿತು.

ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿ ತಿಂಗಳು ಒಂದು ಅವಧಿಯನ್ನು ವೈವಿಧ್ಯ ವಿಷಯಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಮೀಸಲಿಡಬೇಕು. ಶಾಲಾ ವಾಹನಗಳ ಚಾಲಕರು ನಿಗದಿತ ಅರ್ಹತೆ ಇರುವವರು ಮತ್ತು ಕೆಲಸದ ಸಮಯದಲ್ಲಿ ಮಾದಕ ವಸ್ತುಗಳನ್ನು ಬಳಸದವರಾಗಿರಬೇಕು ಎಂಬುದನ್ನು ಶಾಲಾ ಮುಖ್ಯಸ್ಥರು ಖಚಿತ ಪಡಿಸಿಕೊಳ್ಳಬೇಕು. ಹೆಣ್ಮಕ್ಕಳಲ್ಲಿ ಮೂತ್ರಾಶಯ ರೋಗಗಳು ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎ್ಲ್ಲಲ ಶಿಕ್ಷಣ ಸಂಸ್ಥೆಗಳಲ್ಲಿ ಶೌಚಾಲಯದ ವ್ಯವಸ್ಥೆ ಯೋಗ್ಯ ರೀತಿಯಲ್ಲಿದೆ ಎಂಬುದನ್ನು ಖಚಿತಪಡಿಸುವಂತೆ  ಸಭೆ ಮನವಿ ಮಾಡಿದೆ.

ಅಪಾಯಕಾರಿ ರೀತಿಯಲ್ಲಿ ರಿಕ್ಷಾಗಳಲ್ಲಿ ಶಾಲಾ ಮಕ್ಕಳನ್ನು ಸಾಗಿಸಬಾರದು. ರಿಕ್ಷಾದಲ್ಲಿ ಕುಳಿತು ಪ್ರಯಾಣ ಮಾಡುವಷ್ಟು ಮಕ್ಕಳನ್ನು ಮಾತ್ರ ಕರೆದೊಯ್ಯಬೇಕು. ಬಾಲ ಕಾರ್ಮಿಕರ ಬಳಕೆ ಗಮನಕ್ಕೆ ಬಂದರೆ ಸಾರ್ವಜನಿಕರು ಕ್ರೈಂ ಸ್ಟಾಪರ್ ಮತ್ತು ಚೈಲ್ಡ್ ಲೈನ್ ಸಂಪರ್ಕಿಸಬೇಕು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಎಡಿಎಂ ಎಚ್.ದಿನೇಶನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಥಾಮ್ಸನ್ ಜೋಸ್, ಅಬಕಾರಿ ಉಪ ಆಯುಕ್ತ ಟಿ.ಸತೀಶ್ ಕುಮಾರ್, ಜಿಲ್ಲಾ ವಾರ್ತಾಧಿಕಾರಿ ಕೆ.ಅಬ್ದುಲ್ ರಹಿಮಾನ್, ಮಹಿಳಾ ಸೆಲ್ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಶುಭವತಿ, ಜಿಲ್ಲಾ ವೈದ್ಯಕೀಯ ಅಧಿಕಾರಿ ಪಿ.ಗೋಪಿನಾಥನ್, ಮಹಿಳಾ ರಕ್ಷಣಾ ಅಧಿಕಾರಿ ಪಿ.ಸುಲಜಾ, ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಕೆ.ಕೆ.ಕಿಶೋರ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT