ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕನಿಗೆ ಸೃಷ್ಟಿಸಿದ ಕಿವಿ ಜೋಡಣೆ

Last Updated 24 ಫೆಬ್ರುವರಿ 2011, 16:20 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಇಲ್ಲಿನ  ಶಸ್ತ್ರ ಚಿಕಿತ್ಸಕ ವೈದ್ಯರು ಒಂಬತ್ತು ವರ್ಷದ ಬಾಲಕನಿಗೆ ಹೊಸದಾಗಿ ಕಿವಿಯನ್ನು ಸೃಷ್ಟಿಸಿದ್ದಾರೆ.

ಬಾಲಕನ ಪಕ್ಕೆಲಬುಗಳಿಂದ ಮೃದ್ವಸ್ಥಿಗಳನ್ನು ತೆಗೆದು ಹೊಸದಾಗಿಯೇ ಕಿವಿಯನ್ನು ಸೃಷ್ಟಿಸಲಾಗಿದೆ ಎಂದು ವೈದ್ಯರ ತಂಡ ಹೇಳಿದೆ.

ಲಂಡನ್‌ನ ರಾಯಲ್ ಫ್ರೀ ಆಸ್ಪತ್ರೆಯ ವೈದ್ಯರ ತಂಡವೊಂದು ಸತತ ಆರು ಗಂಟೆಗಳ ಕಾಲ ಬಾಲಕ ಎಥಾನ್ ಗಿಲ್ಸ್ ಬೌಮೆನ್‌ಗೆ  ಈ ಶಸ್ತ್ರ ಚಿಕಿತ್ಸೆಯನ್ನು ನಡೆಸಿದೆ. ಎಥಾನ್ ಗಿಲ್ಸ್ ಬೌಮೆನ್‌ಗೆ ಹುಟ್ಟುವಾಗಲೇ ಬಲಗಿವಿ ಇರಲಿಲ್ಲ.

ಜನ್ಮಗತವಾಗಿರುವ ಈ ಅಂಗವೈಕಲ್ಯವನ್ನು ‘ಹೆಮಿ-ಫೇಷಿಯಲ್ ಗೋಲ್ಡನ್ಹಾರ್ ಸಿಂಡ್ರೋಮ್’ ಎನ್ನುತ್ತಾರೆ ಎಂದು ಈ ಅಪರೂಪದ ಶಸ್ತ್ರಚಿಕಿತ್ಸೆ ಬಗ್ಗೆ ‘ಡೈಲಿ ಮೇಲ್’ ಪತ್ರಿಕೆ ವರದಿ ಮಾಡಿದೆ.

ಶಸ್ತ್ರಚಿಕಿತ್ಸೆಗೆ ಒಳಗಾದ ಬಾಲಕ ‘ನನ್ನ ಗೆಳೆಯರಂತೆ ನನಗೂ ಬಲಗಿವಿ ಬಂದಿದೆ’ ಎಂದು ಖುಷಿಯಿಂದ ಹೇಳಿಕೊಂಡಿದ್ದಾನೆ.

‘ಮಗನಿಗೆ ಕಿವಿ ಇಲ್ಲ ಎನ್ನುವುದು ವೇದನೆ ಉಂಟು ಮಾಡುತ್ತಿತ್ತು.. ಆದರೆ ಈಗ ಅವನಿಗೆ ಬಲಗಿವಿ ಬಂದಿದೆ. ಅದರಿಂದ ಎಥಾನ್ ಖುಷಿಯಾಗಿದ್ದಾನೆ’ ಎಂದು ಬಾಲಕನ ಪೋಷಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT