ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಾರ್ಮಿಕ ಪದ್ಧತಿ ಜೀವಂತ: ವಿಷಾದ

Last Updated 18 ಡಿಸೆಂಬರ್ 2013, 9:10 IST
ಅಕ್ಷರ ಗಾತ್ರ

ಬಂಗಾರಪೇಟೆ-: ದೇಶದಲ್ಲಿ ಕೋಟ್ಯಂತರ ಮಕ್ಕಳು ಬಾಲಕಾರ್ಮಿಕರಾಗಿ ದುಡಿ­ಯು­ತ್ತಿದ್ದು, ಕಾನೂನು ಬಿಗಿ­ಗೊಳಿಸಿದ್ದರೂ ಬಾಲಕಾರ್ಮಿಕ ಪದ್ಧತಿ ಜೀವಂತವಾಗಿರುವುದು ಪೋಷಕ­ರಿಂದಲೇ ಎಂದು ಕೆಜಿಎಫ್ ಜೆಎಂ­ಎಫ್‌ಸಿ ನ್ಯಾಯಾಧೀಶ ಕೆ.ಎಂ.ಬಸವ­ರಾಜಪ್ಪ ಹೇಳಿದರು.

ಪಟ್ಟಣದಲ್ಲಿ ಕಾರ್ಮಿಕ ಇಲಾಖೆ. ವಕೀಲರ ಸಂಘ, ಕಾನೂನು ಸೇವಾ ಸಮಿತಿ ಹಾಗೂ ಜಾಗೃತಿ ಸಂಸ್ಥೆ ಸಹಯೋಗದೊಂದಿಗೆ ಮಂಗಳವಾರ ಏರ್ಪಡಿಸಿದ್ದ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕಾರ್ಯಕ್ರಮದಲ್ಲಿ ಮಾತ­ನಾಡಿ, ಜಗತ್ತಿನಲ್ಲಿ ಕೆಟ್ಟ ತಾಯಂದಿರು ಇರುವುದಿಲ್ಲ, ಆದರೆ ಕೆಟ್ಟ ಮಕ್ಕಳು ಇರುತ್ತಾರೆ. ಆದ್ದರಿಂದ ತಾಯಂದಿರೇ ಮಕ್ಕಳನ್ನು ವಿದ್ಯಾ­ಭ್ಯಾಸದ ಕಡೆ ಗಮನಹರಿಸುವಂತೆ ಮಾಡಬೇಕು, ದುಡಿಮೆಗೆ ದೂಡ­ಬಾರದು ಎಂದರು.

ಪಟ್ಟಣದ ಜೆಎಂಎಫ್‌ಸಿ ನ್ಯಾಯಾ­ಧೀಶ­ರಾದ ಸಿ.ಜಿ.ವಿಶಾಲಕ್ಷಿ ಕಾರ್ಯ­ಕ್ರಮ ಉದ್ಘಾಟಿಸಿ ಮಾತನಾಡಿ, ಬಾಲ­ಕಾರ್ಮಿಕ ಪದ್ದತಿ ಒಂದು ಶೋಷಣೆ. ಸಮಾಜದಲ್ಲಿ ಉತ್ತಮವಾಗಿ ಬದು­ಕುವ ಹಕ್ಕನ್ನೇ ಮಕ್ಕಳಿಂದ ಕಸಿದು­ಕೊಂಡು ದುಡಿಸಿಕೊಳ್ಳುವ ಮೂಲಕ ಶೋಷಣೆ ಮಾಡುತ್ತಿರುವುದು ಸರಿ­ಯಲ್ಲ. ಮಕ್ಕಳಿಗೆ ಹೇಗೆ ಬದುಕ-­ಬೇಕೆನ್ನುವ ಪರಿಜ್ಞಾನ ಇರುವುದಿಲ್ಲ, ಅವರ ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡು ದುಡಿಸಿಕೊಳ್ಳುವ ಯಾರೇ ಆಗಲಿ ಕಾನೂನು ದೃಷ್ಟಿಯಲ್ಲಿ ಅಪರಾಧ ಮಾಡಿದಂತೆ ಎಂದು ಎಚ್ಚರಿಸಿದರು.

ಕೆಜಿಎಫ್ ಸಿವಿಲ್ ನ್ಯಾಯಾಧೀಶ ನಂದೀಶ್, ಸಂವಿಧಾನದಲ್ಲಿ ಪ್ರತಿ­ಯೊಬ್ಬ­­-­ರಿಗೂ ಹಕ್ಕುಗಳನ್ನು ಕೊಟ್ಟಿ­ದ್ದಾರೆ, ಅದೇ ರೀತಿ ಮಕ್ಕಳಿಗೂ 14 ವರ್ಷದೊಳಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು, ಜತೆಗೆ ಉಚಿತವಾಗಿ ವಿದ್ಯಾಭ್ಯಾಸ ನೀಡಬೇಕು. ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿಗೆ ದೂಡು­ತ್ತಿರುವುದು ಸರಿ ಅಲ್ಲ ಎಂದರು.

ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ರಾಜಗೋಪಾಲ್ ಅಧ್ಯಕ್ಷತೆ ವಹಿಸಿ­ದ್ದರು. ವಕೀಲರ ಸಂಘದ ಅದ್ಯಕ್ಷ ಶಿವರಾಮಸುಬ್ರಮಣ್ಯ, ಕಾರ್ಯದರ್ಶಿ ಎಸ್.ನಾರಾಯಣಪ್ಪ, ಖಜಾಂಚಿ ಎಸ್.­ರಾಜಗೋಪಾಲ್, ಜಯಪ್ರಕಾಶ್, ಕಾರ್ಮಿಕ ಮುಖಂಡರಾದ ಮೇಸ್ತ್ರಿ ಶ್ರಿನಿವಾಸ್, ಕಾರ್ಮಿಕ ಇಲಾಖೆ ಅಧಿ­ಕಾರಿ ಚೇತನ್‌ಪ್ರಕಾಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT