ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿಯರಿಂದ ಮತದಾನದ ಜಾಗೃತಿ

Last Updated 21 ಮಾರ್ಚ್ 2014, 10:47 IST
ಅಕ್ಷರ ಗಾತ್ರ

ಚಿಂಚೋಳಿ: ಮತದಾನದ ಕುರಿತು ಸಾರ್ವ­ಜನಿಕರಲ್ಲಿ ಅರಿವು ಮೂಡಿಸಿ, ಮತದಾ­ನದ ಪ್ರಕ್ರಿಯೆಯಲ್ಲಿ ಪ್ರತಿ­ಯೊಬ್ಬರು ಪಾಲ್ಗೊಂಡು  ಕಡ್ಡಾಯ ಮತದಾನ ಮಾಡುವಂತೆ ಮನವೊಲಿ­ಸಲು ಇಲ್ಲಿನ ಸರ್ಕಾರಿ ಕನ್ಯಾ ಪ್ರೌಢ ಶಾಲೆಯ ಬಾಲಕಿಯರು ಈಚೆಗೆ ಜಾಥಾ ನಡೆಸಿದರು.

ಜಾಥಾದಲ್ಲಿ ಕ್ಷೇತ್ರ ಸಮನ್ವಯ ಕೇಂದ್ರದ ಸಮನ್ವಯಾಧಿಕಾರಿ ವೀರಣ್ಣ ಬೊಮ್ಮನಳ್ಳಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಶಿಶು ಅಭಿವೃದ್ಧಿ ಯೋಜ­ನಾ­­ಧಿಕಾರಿ ಮಹಮದ್‌ ರಫಿ ಶಕಾಲೆ,  ದೈಹಿಕ ಶಿಕ್ಷಕ ಎಸ್‌.ಎ.ಮುನಾಫ್‌, ರೇವಣಸಿದ್ದಪ್ಪ ದಂಡಿನ್‌­ ಇದ್ದರು.

ನಂತರ ಶಾಲೆ ಆವರಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ತಹಶೀಲ್ದಾರ್‌ ಮೋಹನ ಜೋಷಿ ಮಾತನಾಡಿ, ‘ಮತದಾನ ಒಂದು ಪವಿತ್ರ ಕಾರ್ಯ. ಪ್ರತಿಯೊಬ್ಬರೂ ಕಡ್ಡಾಯವಾಗಿ ತಮ್ಮ ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವ ಬಲ ಪಡಿಸಲು ನೆರವಾಗಬೇಕು’ ಎಂದರು.

ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳ ಮಹತ್ವ ಕುರಿತ ಪ್ರಬಂಧ ಸ್ಪರ್ಧೆ ನಡೆ­ಯಿತು. ಅಶೋಕ, ಮಂಜುಳಾ, ಸರ್ವರ್‌ ಮಹಾಜಬಿನ್‌, ವಿಜಯ­ಲಕ್ಷ್ಮಿ, ಸುನೀತಾ ಪಾಲ್ಗೊಂಡಿದ್ದರು. ಮುಖ್ಯಗುರು ನರಸಿಂಗರಾವ್‌ ಸಿಂಧೆ ಅಧ್ಯಕ್ಷತೆ ವಹಿಸಿದ್ದರು. ನಂದಕುಮಾರ ನಾಯನೂರು ಸ್ವಾಗತಿಸಿ ನಿರೂಪಿ­ಸಿ­ದರು. ಎಸ್‌.ಎ.ಮುನಾಫ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT