ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲನ್ಯಾಯ ಕಾಯ್ದೆ ತಿದ್ದುಪಡಿ?

Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ: ಹೀನ ಅಪರಾಧ ಎಸಗುವ 16ರಿಂದ 18 ವರ್ಷದೊಳಗಿನ ಬಾಲಾ­ರೋಪಿಗಳನ್ನು ಭಾರತೀಯ ದಂಡ ಸಂಹಿತೆ (ಐಪಿಸಿ)ಯಡಿ ಶಿಕ್ಷಿಸಲು ಬಾಲ ನ್ಯಾಯ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಕೇಂದ್ರ ಸರ್ಕಾರ ಚಿಂತಿಸಿದೆ.

ಈ  ಬಗೆಯ ಬಾಲಾಪರಾಧಿಗಳಿಗೆ ಮರಣ ದಂಡನೆ, ಜೀವಾವಧಿ ಶಿಕ್ಷೆ ವಿಧಿ­­ಸು­ವುದಕ್ಕೆ ಈ ತಿದ್ದುಪಡಿಯಲ್ಲಿ ಅವಕಾಶ ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಗುರುವಾರ ಸಂಪುಟದ ಪರಿಶೀಲನೆಗೆ ಕಳುಹಿಸಿರುವ ಈ ತಿದ್ದುಪಡಿ ಪ್ರಸ್ತಾವ­ವನ್ನು ಪ್ರಸಕ್ತ ಸಂಸತ್‌ ಅಧಿ­ವೇಶನದಲ್ಲಿ ಮಂಡಿಸಬಹುದಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ರಾಜ್ಯ ಸಚಿವೆ ಕೃಷ್ಣಾ ತೀರಥ್‌ ಸುದ್ದಿಗಾರರಿಗೆ ತಿಳಿಸಿದರು.

ಹೀನ ಅಪರಾಧಗಳ ವ್ಯಾಪ್ತಿಯಲ್ಲಿ ಕೊಲೆ, ಆಸಿಡ್‌ ದಾಳಿ, ಅತ್ಯಾಚಾರ ಮತ್ತಿತರ ಕೃತ್ಯಗಳು ಬರುತ್ತವೆ.  ಅಪರಾಧದ ಕಠೋ­ರತೆ, ಅಪರಾಧಿಯ ಹಿನ್ನೆಲೆ ಹಾಗೂ ಅಪ­ರಾಧ­ವನ್ನು ಯಾವ ಸನ್ನಿವೇಶದಲ್ಲಿ ನಡೆಸಲಾಗಿದೆ ಎಂಬುದರ ಬಗ್ಗೆ ಒಂದು ತಿಂಗಳ ಒಳಗಾಗಿ ಅವ­ಲೋಕಿ­ಸುವ ಅಧಿ­ಕಾರವನ್ನು ಬಾಲ ನ್ಯಾಯ ಮಂಡಳಿಗೆ ನೀಡಲಾಗುತ್ತದೆ.

ಸಂಬಂಧಿಸಿದ ಬಾಲಾಪರಾಧಿಯನ್ನು ಕಾನೂನು ಕಟ್ಟಳೆಗೆ ಒಳಪಡಿಸಬಹುದೇ ಮತ್ತು ಐಪಿಸಿಯ ವಿವಿಧ ಕಾನೂನಿನಡಿ ಆತನಿಗೆ ಯಾವ ಶಿಕ್ಷೆ ವಿಧಿಸ­ಬಹುದು ಮತ್ತು ಅಪ­ರಾಧದ ಸನ್ನಿವೇಶವನ್ನು ಅರಿಯುವ ಸಾಮರ್ಥ್ಯ,  ಶಿಕ್ಷಾರ್ಹತೆ­ಯನ್ನು ಮಂಡಳಿಯೇ ನಿರ್ಧರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT