ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್ ಜೋಡಿ ಮೋಡಿ

Last Updated 22 ಜೂನ್ 2012, 19:30 IST
ಅಕ್ಷರ ಗಾತ್ರ

ಬಾಲಿವುಡ್‌ನಲ್ಲೆಗ ಸಿದ್ಧಸೂತ್ರಗಳನ್ನು ಹೊರತುಪಡಿಸಿ ಜನಪ್ರಿಯ ಚಿತ್ರಗಳನ್ನು ನೀಡುವ ಸೂತ್ರ ಯಾವುದು ಎಂಬುದರ ಬಗ್ಗೆ ಜಿಜ್ಞಾಸೆ ನಡೆದಿದೆ.

ಸದ್ಯದ ಸುದ್ದಿ ಎಂದರೆ ಅಸಾಧಾರಣ ಜೋಡಿಯೂ ಚಿತ್ರ ಜನಪ್ರಿಯವಾಗುವ ಸೂತ್ರವಾಗಬಲ್ಲದು. ತಬು ಮತ್ತು ಅಮಿತಾಬ್ ಬಚ್ಚನ್ ಆಗಿರಬಹುದು ಅಥವಾ ತೀರ ಹೋಲಿಸಲಾಗದ ರಾಹುಲ್ ಬೋಸ್ ಮತ್ತು ಮಲ್ಲಿಕಾ ಶೆರಾವತ್ ಆಗಿರಬಹುದು. `ದೇವ್-ಡಿ~ಯಲ್ಲಿ ಇದ್ದಂತೆ ಅಭಯ್ ದೇವನ್ ಹಾಗೂ ಕಲ್ಕಿ ಕೋಯ್ಲಿನ್ ಇರಬಹುದು... ಹೀಗೆ ಲೆಕ್ಕಾಚಾರಗಳು ಸಾಗಿವೆ.

ಅಜಯ್ ದೇವಗನ್ ಹಾಗೂ ಕೊಂಕಣಾ ಸೆನ್ ಅಭಿನಯದ `ಅತಿಥಿ ತುಮ್ ಕಬ್ ಜಾವೊಗೆ?~ ಒಂದು ಸಾಧಾರಣ ಚಿತ್ರಕತೆ ಇರುವ ಹಾಸ್ಯ ಚಿತ್ರ. ಆದರೆ ಅದು ಸಹ ಯಶಸ್ವಿ ಚಿತ್ರ ಆಯಿತು. ಅದಕ್ಕೂ ಈ ಜೋಡಿಯೇ ಕಾರಣ ಎಂಬುದು ಬಾಲಿವುಡ್ ವಿಶ್ಲೇಷಕರ ವಿವರಣೆಯಾಗಿದೆ.

ಈಗ ಚಿತ್ರಗಳು ಹಿಂದಿನಂತೆ ಪ್ರಸಿದ್ಧ ಜೋಡಿಗಳನ್ನು ಅವಲಂಬಿಸಿಲ್ಲ. ನಿರ್ಮಾಪಕರು, ನಿರ್ದೇಶಕರು ಪ್ರಯೋಗಕ್ಕೆ ತೆರೆದುಕೊಳ್ಳುತ್ತಿದ್ದಾರೆ. ಹೊಸ ಹೊಸ ಜೋಡಿಗಳನ್ನು ತಯಾರು ಮಾಡುತ್ತಿದ್ದಾರೆ.

ಅಕ್ಷಯ್‌ಕುಮಾರ್ ಜೊತೆಗೆ ಸೋನಾಕ್ಷಿ ಸಿನ್ಹಾ `ರೌಡಿ ರಾಥೋಡ್~ ಚಿತ್ರದಲ್ಲಿ ಹೆಸರಾದರು. ಸೋನಾಕ್ಷಿ ಬಹುತೇಕ ತಮ್ಮ ವಯಸ್ಸಿಗಿಂತ ಇಮ್ಮಡಿ ದೊಡ್ಡವರೊಂದಿಗೆ ನಟಿಸಿದ್ದಾರೆ. ಸೋನಾಕ್ಷಿ `ದಬಾಂಗ್~ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆಗೆ ನಟಿಸುತ್ತ ಚಿತ್ರರಂಗ ಪ್ರವೇಶಿಸಿದರು. ಚಿತ್ರದ ಪ್ರಿವ್ಯೆಗೆ ಮುನ್ನ `ಸಲ್ಮಾನ್ ಅಂಕಲ್~ ಎಂದು, ತುಟಿ ಕಚ್ಚಿಕೊಂಡ ಸೋನಾಕ್ಷಿ, `ಸಲ್ಮಾನ್ ಜಿ~ ಪ್ರೋತ್ಸಾಹಿಸಿದ ಬಗೆಯನ್ನು ನೆನಪಿಸಿಕೊಂಡಿದ್ದರು.

ಬಿಪಾಶಾ ಬಸು ನೀಳಕಾಯದ ಸುಂದರಿ. ಸೈಫ್ ಅಲಿ ಖಾನ್ ಜೊತೆಗೆ ಚಂದ ಕಾಣುತ್ತಾರೆ ಎಂದು ಬಾಲಿವುಡ್ ವಿಮರ್ಶಕರು ಹೇಳಿದ್ದರು. ಆದರೆ ಅವರ `ಜೋಡಿ ಬ್ರೇಕರ್ಸ್‌~ ಚಿತ್ರದಲ್ಲಿ ಮಾಧವನ್ ಜೊತೆಗೆ ಹಿಟ್ ಜೋಡಿ ಎನಿಸುವಂತಾದರು. ಕಂಗನಾ ರನೌತ್ ಜೊತೆಗೆ ಮಾಧವನ್ `ತನು ವೆಡ್ಸ್ ಮನು~ ಚಿತ್ರದಲ್ಲಿ ಮಿಂಚಿದರು. ಇದೂ ಅಸಾಮಾನ್ಯ ಜೋಡಿಯೇ ಆಗಿತ್ತು.

ಒಂದು ದಶಕದ ಹಿಂದೆ ಜಿಯಾ ಖಾನ್ ಜೊತೆಗೆ ಬಿಗ್ ಬಿ ನಟಿಸಿದಾಗಲೇ ಹುಬ್ಬು ಗಂಟಿಕ್ಕಿದ್ದವು. ಆದರೆ `ನಿಶ್ಶಬ್ದ್~ ಚಿತ್ರದಲ್ಲಿ ಅವರಿಬ್ಬರ ಜೋಡಿ ಎಲ್ಲವೂ ಅಸಂಬದ್ಧ ಎನಿಸಿರಲಿಲ್ಲ.

ಕೇವಲ ಅಸಾಮಾನ್ಯವೆನಿಸಬಹುದಾದ ಜೋಡಿಗಳಿಗೆ ಮಾತ್ರ ಪ್ರಾಶಸ್ತ್ಯ ಸಿಗುತ್ತಿಲ್ಲ. ಆ ಜೋಡಿಗೆ ತಕ್ಕುದಾದ ಸ್ಕ್ರಿಪ್ಟ್ ಸಹ ಮುಖ್ಯ ಎಂಬುದಕ್ಕೆ ಗಮನ ನೀಡಲಾಗುತ್ತಿದೆ. ಹಾಗಾಗಿ ಬಾಲಿವುಡ್‌ನಲ್ಲಿ ಈ ಅಸಾಮಾನ್ಯವೆನಿಸುವ ಜೋಡಿಗಳು ಮಿಂಚುತ್ತಿವೆ. `ಚೀನಿ ಕಂ~ ಚಿತ್ರದಲ್ಲಿ ಬಿಗ್‌ಬಿ ಅಮಿತಾಬ್ ಮತ್ತು ತಬೂ ಜೋಡಿ ಸಹ ಗಮನ ಸೆಳೆದಿತ್ತು.
ಈ ಥರದ ಟ್ರೆಂಡ್ ವಿಶ್ಲೇಷಕರಾಗಿರುವ ವಿನೋದ್ ಮಿರಾನಿ ಪ್ರಕಾರ `ಇದು ಜನಪ್ರಿಯ ಸಿದ್ಧ ಸೂತ್ರಗಳಲ್ಲಿ ಒಂದಾಗಲಿದೆ. ಸ್ಕ್ರಿಪ್ಟ್‌ಗೆ ಜೋಡಿ ಹೊಂದುವಂತಿರಬೇಕು, ಇಲ್ಲದಿದ್ದರೆ ಇದ್ಯಾವುದೂ ಫಲ ಕೊಡುವುದಿಲ್ಲ~.

`ಶಿರೀನ್ ಫರಾದ್ ಕಿ ನಿಕಲ್ ಪಡಿ~ ಚಿತ್ರದಲ್ಲಂತೂ ಬೊಮನ್ ಇರಾನಿ ಹಾಗೂ ಫರ‌್ಹಾ ಖಾನ್ ಜೋಡಿಯೂ ಮೋಡಿ ಮಾಡಿದೆ. ಕಾರಣ ಅದಕ್ಕೆ ಒಪ್ಪುವ ಕತೆ. ಆದರೆ ಕತೆಯ ಕಾರಣಕ್ಕೇ ಹೆಸರಾಗದ ಇನ್ನೊಂದು ಜೋಡಿ ಇದೆ. ಅದೇ ಇಮ್ರಾನ್‌ಖಾನ್-ಕರೀನಾ ಕಪೂರ್. `ಏಕ್ ಮೈ ಔರ್ ಏಕ್ ತೂ~ ಚಿತ್ರ ಹೇಳ ಹೆಸರಿಲ್ಲದಂತಾಯಿತು. ಇದರಲ್ಲಿ ಇಮ್ರಾನ್ ಖಾನ್, ಕರೀನಾ ಅವರ ಕನಸಿನ ಸುಂದರಿ. `ಶಾಲಾ ದಿನಗಳಲ್ಲಿ ಕರೀನಾ ಬಗ್ಗೆ ಕನಸು ಕಾಣುತ್ತಿದ್ದೆ. ಇದೀಗ ಅವರೊಡನೆ ನಟಿಸುವುದು ಸಂತಸ ತಂದಿದೆ~ ಎಂದು ಅವರು ಹೇಳಿಕೊಂಡಿದ್ದರು.

ಸಿದ್ಧಸೂತ್ರಗಳೊಂದಿಗೆ ಹೊಸ ಸೂತ್ರ ಸೇರ್ಪಡೆಯಾಗುವಾಗ, ಅದರೊಂದಿಗೆ `ಆದರೆ~ ಹಾಗೂ `ಆದರೂ~ ಶಬ್ದಗಳ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ ಎನ್ನುವುದು ವಿಶ್ಲೇಷಕರ ಅಭಿಪ್ರಾಯವಾಗಿದೆ.

ರಾಹುಲ್ ಬೋಸ್ ಅವರಂಥ ಕಲಾತ್ಮಕ ಚಿತ್ರದ ಹೀರೊ, ಗ್ಲಾಮರ್ ಬೆಡಗಿ ಮಲ್ಲಿಕಾ ಶೆರಾವತ್ ಜೋಡಿಯನ್ನು ತೆರೆಗೆ ತಂದಿದ್ದ ಪ್ರಿತಿಷ್ ನಂದಿ ಇದೀಗ ಫರ‌್ಹಾನ್ ಅಖ್ತರ್ ಹಾಗೂ ವಿದ್ಯಾಬಾಲನ್ ಅವರನ್ನು ಒಟ್ಟುಗೂಡಿಸಿದ್ದಾರೆ. ಅದು `ಪ್ಯಾರ್ ಕೆ ಸೈಡ್ ಎಫೆಕ್ಟ್ಸ್~ ಚಿತ್ರದ ಎರಡನೇ ಭಾಗ `ಶಾದಿ ಕೆ ಸೈಡ್ ಎಫೆಕ್ಟ್ಸ್~ ಚಿತ್ರಕ್ಕಾಗಿ.

ಈ ಚಿತ್ರದ ಯಶಸ್ಸಿನ ಮೇಲೆ ಅಸಮಾನಾನ್ಯ ಜೋಡಿಯ ಸೂತ್ರ ಸಿದ್ಧಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT