ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್ ಎ ಚಾಂಪಿಯನ್ಸ್

Last Updated 18 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ತುಮಕೂರು: ಉತ್ತಮ ಪ್ರದರ್ಶನ ನೀಡಿದ ಮೂಡುಬಿದ್ರೆಯ ಆಳ್ವಾಸ್ `ಎ~ ತಂಡದವರು ಇಲ್ಲಿ ನಡೆದ ರಾಜ್ಯ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ವಿಭಾಗದಲ್ಲಿ ಅಗ್ರಸ್ಥಾನ ಪಡೆದು ಚಾಂಪಿಯನ್ ಆಯಿತು.

ರೌಂಡ್ ರಾಬಿನ್ ಮಾದರಿಯ ಪಂದ್ಯದಲ್ಲಿ ಆಳ್ವಾಸ್ `ಎ~ ತಂಡ ಒಟ್ಟು 15 ಪಾಯಿಂಟ್ ಗಳಿಸಿ ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ಜಯಿಸಿತು. ಭಾನುವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಆಳ್ವಾಸ್ `ಎ~ ತಂಡ 29-16, 29-21ರಲ್ಲಿ ಆಳ್ವಾಸ್ `ಬಿ~ ತಂಡವನ್ನು ಮಣಿಸಿ ಅಗ್ರಸ್ಥಾನ ಪಡೆಯಿತು. ಆಳ್ವಾಸ್ `ಬಿ~ ತಂಡ (12) ಹಾಗೂ ಎಸ್‌ಬಿಬಿಸಿ ತುಮಕೂರು (11) ತಂಡಗಳು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದುಕೊಂಡವು.

ಇದೇ ಟೂರ್ನಿಯ ಪುರುಷರ ವಿಭಾಗದಲ್ಲಿ ಬೆಂಗಳೂರಿನ ಕೆನರಾಬ್ಯಾಂಕ್ ಮತ್ತು ಭದ್ರಾವತಿಯ ಸ್ಫುಟ್ನಿಕ್ ತಂಡಗಳು ಜಂಟಿಯಾಗಿ ಅಗ್ರಸ್ಥಾನ ಹಂಚಿಕೊಂಡವು. ಕೊನೆಯ ಲೀಗ್ ಪಂದ್ಯದಲ್ಲಿ 29-15, 12-12ರಲ್ಲಿ ಸಾಗಿದ್ದಾಗ ಮಂದ ಬೆಳಕಿನ ಕಾರಣ ಆಟವನ್ನು ಸ್ಥಗಿತಗೊಳಿಸಲಾಯಿತು. ಈ ವಿಭಾಗದಲ್ಲಿ ಡೀಲಕ್ಸ್ ತುಮಕೂರು (2ನೇ ಸ್ಥಾನ) ಹಾಗೂ ಮೈಸೂರು ಸ್ಟಾರ್ಸ್‌ (3ನೇ ಸ್ಥಾನ) ಪಡೆಯಿತು.

ಸನ್ಮಾನ: ವಿಧಾನ ಪರಿಷತ್ ಸದಸ್ಯ ಹುಲಿನಾಯ್ಕರ್, ಏಕಲವ್ಯ ಪ್ರಶಸ್ತಿ ಪುರಸ್ಕೃತ ಸುದರ್ಶನ್ ಮತ್ತು ಮಾದೇಗೌಡ, ಕೋಚ್ ಸತೀಶ್ ಅವರನ್ನು ಸನ್ಮಾನಿಸಲಾಯಿತು. ಅಸೋಸಿಯೇಷನ್ ಸದಸ್ಯರಾದ ಸುಧಾಕರಲಾಲ್, ಆರ್.ಶಿವಣ್ಣ, ಮಹದೇವ್, ಶೈಲಾ ನಾಗರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT