ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯ ವಿವಾಹ: ಮೋಸಗಾರರೇ ಹೆಚ್ಚು

Last Updated 1 ಜೂನ್ 2011, 19:30 IST
ಅಕ್ಷರ ಗಾತ್ರ

ಡಾ.ಟಿ.ಆರ್.ಚಂದ್ರಶೇಖರ್ ರವರ ಬಾಲ್ಯವಿವಾಹಗಳು ಮತ್ತು ಸಾಮೂಹಿಕ ಮದುವೆಗಳು ( ಮೇ 25) ಲೇಖನಕ್ಕೆ ಪ್ರತಿಕ್ರಿಯೆ.

ರಾಯಚೂರು ಜಿಲ್ಲೆಯಲ್ಲಿ ಸರ್ಕಾರೇತರ ಸಂಸ್ಥೆಯಲ್ಲಿ ಸಹಾಯಕ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದೆೀನೆ. ಕಳೆದ ಎರಡು ವರ್ಷಗಳಲ್ಲಿ ಸುಮಾರು 12 ಸಾಮೂಹಿಕ ವಿವಾಹಗಳಲ್ಲಿ ಭಾಗವಹಿಸಿ 75 ಕ್ಕೂ ಅಧಿಕ ಅಪ್ರಾಪ್ತ ಜೊಡಿಗಳನ್ನು ವಿವಿಧ ಇಲಾಖೆಗಳ ಸಹಕಾರದೊಂದಿಗೆ ತಡೆ ಹಿಡಿಯಲಾಗಿದೆ.
 
ವರ್ಷದಿಂದ ವರ್ಷಕ್ಕೆ ಸಾಮೂಹಿಕ ವಿವಾಹಗಳನ್ನು ಮಾಡುವ ಸಂಘ ಸಂಸ್ಥೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಡಾ. ಚಂದ್ರಶೇಖರ್‌ರವರು ಬಡತನ ಕಾರಣದಿಂದ ಬಾಲ್ಯವಿವಾಹ ಜಾಸ್ತಿಯಾಗುತ್ತಿದೆ ಎಂದಿದ್ದಾರೆ. ಇದು ಕಾರಣವಾಗಿದ್ದರು ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ಅಲ್ಲಿ ನಡೆಯುವ ವ್ಯವಹಾರವೇ ಬೇರೆ.

1.ಸಾಮೂಹಿಕ ವಿವಾಹ ಮಾಡುವುದು ಒಂದು ಹಣ ಮಾಡುವ ದಂಧೆಯಾಗಿ ಮಾರ್ಪಟ್ಟಿದೆ.
2.ಸಾಮೂಹಿಕ ವಿವಾಹಗಳಲ್ಲಿ ಭಾಗವಹಿಸುವ ಜೋಡಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ರೂ. 20,000- ನೀಡಲಾಗುತ್ತದೆ. 101 ಜೋಡಿ ಸಾಮೂಹಿಕ ವಿವಾಹ ಎಂದು ಪ್ರಕಟಣೆಯಲ್ಲಿ ತಿಳಿಸಿ ಮದುವೆ ದಿನ 60-70 ಜೊಡಿ ಮದುವೆ ನಡೆದರೆ, ಇಲಾಖೆಗೆ ಸಲ್ಲಿಸುವುದು 101 ಜೋಡಿಯ ದಾಖಲೆಗಳು.
3.ಸಾಮೂಹಿಕ ವಿವಾಹದ ಹೆಸರಿನಲ್ಲಿ ಸಾರ್ವಜನಿಕರಿಂದ ವಂತಿಗೆಯನ್ನು ಸ್ವೀಕರಿಸಲಾಗುತ್ತದೆ.
4.ರಾಜಕೀಯ ನಾಯಕರಿಗೆ ಮಠ ಮಾನ್ಯಗಳಿಗೆ ಇದು ಉತ್ತಮ ವೇದಿಕೆಗಳಾಗಿ ಮಾರ್ಪಾಟಾಗುತ್ತಿದೆ.
5.ವೈದ್ಯರಿಂದ ವಯಸ್ಸಿನ ದೃಢೀಕರಣ ಪತ್ರಗಳನ್ನು ಪಡೆದು, 16, 17 ವಯಸ್ಸಿನ ಹುಡುಗಿಯರಿಗೆ ಮದುವೆಯನ್ನು ಎಲ್ಲ ಗಣ್ಯರ ಮುಂದೆ ಮಾಡಲಾಗುತ್ತಿದೆ. ಇಂತಹ ವೈದ್ಯರೇ ಪ್ರಮಾಣ ಪತ್ರ ನೀಡಬೇಕೆಂದಿದ್ದರೂ ಬೇರೆ ಬೇರೆ ವೈದ್ಯರು ನೀಡುತ್ತಿದ್ದಾರೆ. ಚುನಾಯಿತ ಪ್ರತಿನಿಧಿಗಳು ವಯಸ್ಸಿನ ಪ್ರಮಾಣ ಪತ್ರ ನೀಡುತ್ತಿದ್ದಾರೆ.ಅಂತಹ ತಪ್ಪುಗಳನ್ನು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವವರಿಲ್ಲ
6. ವಿಪರ್ಯಾಸವೆಂದರೆ 16-17 ವರ್ಷದ ಯುವತಿಯ ಪ್ರಮಾಣ ಪತ್ರವನ್ನು 20-21 ವರ್ಷದ ಯುವತಿಯರನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ವಯಸ್ಸು ಪ್ರಮಾಣ ಪತ್ರ ಮಾಡಿಸುತ್ತಿದ್ದಾರೆ. ಇದೊಂದು ಕಣ್ಣಿಗೆ ಕಾಣುವಂತೆ ಬಡತನದ ಕಾರಣದಿಂದ ನಡೆಯುತ್ತಿದೆ ಎಂದರೂ, ಇದರ ಹಿಂದೆ ಕಾಣದ ಕೈಗಳ ಕೈವಾಡ ಇದ್ದು, ಕಾನೂನಿಗೆ ಪ್ರತಿ ತಂತ್ರ ಹೂಡುವ ಉನ್ನಾರ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT