ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯ ವಿವಾಹ ಸಲ್ಲದು: ಉಮಾಶ್ರೀ

Last Updated 8 ಜುಲೈ 2013, 6:44 IST
ಅಕ್ಷರ ಗಾತ್ರ

ಜಮಖಂಡಿ: ಮಹಿಳೆಯರಿಗೆ ಶಿಕ್ಷಣ ಕೊಡಿಸಬೇಡಿ ಎಂದು ಇಸ್ಲಾಂ ಧರ್ಮ ಎಂದೂ ಹೇಳಿಲ್ಲ. ಸಮಾಜದ ದೋಷ ಗಳನ್ನು ತಿದ್ದಿಕೊಳ್ಳಬೇಕು. ಮಹಿಳೆಯ ರಿಗೆ ಹೆಚ್ಚಿನ ಶಿಕ್ಷಣ ಕೊಡಿಸಬೇಕು. ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಬೇಡಿ ಎಂದು ಮಹಿಳಾ ಮತ್ತು ಮಕ್ಕಳ  ಕಲ್ಯಾಣ ಸಚಿವೆ ಉಮಾಶ್ರೀ ಮನವಿ ಮಾಡಿದರು.

ಇಲ್ಲಿನ ದಾನಮ್ಮದೇವಿ ಸಮುದಾಯ ಭವನದಲ್ಲಿ ರಾಜ್ಯ ನದಾಫ-ಪಿಂಜಾರ್ ಸಂಘದ ತಾಲ್ಲೂಕು ಘಟಕ ಭಾನುವಾರ ಏರ್ಪಡಿಸಿದ್ದ ಸಚಿವರ ಹಾಗೂ ಶಾಸಕರ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಂಘಟನೆಗಳು ಕೂಡ ವಿಶಾಲ ಅರ್ಥದಲ್ಲಿ ಹಾಗೂ ಸಮಾನತೆಯ ತಳಹದಿಯ ಮೇಲೆ ಕೆಲಸ ಮಾಡಬೇಕು. ಎಲ್ಲರಿಗೂ ಸಮಾನ ಹಕ್ಕುಗಳನ್ನು ಕೊಡಲಾಗಿದೆ. ಆರ್ಥಿಕ ಅಭಿವೃದ್ಧಿಗಾಗಿ, ರಾಜಕೀಯ ಹಕ್ಕುಗಳಿಗಾಗಿ ಹಾಗೂ ಸಾಮಾಜಿಕ ಸ್ಥಾನಮಾನಗಳಿಗಾಗಿ ಸಂಘಟನೆಗಳು ಕೆಲಸ ಮಾಡಬೇಕು ಸಲಹೆ ನೀಡಿದರು.

ಶಾಸಕ ಸಿದ್ದು ನ್ಯಾಮಗೌಡ ಸಮಾ ರಂಭ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿ, ಬಿಪಿಎಲ್ ಪಡಿತರ ಚೀಟಿ ವಿತರಣೆ, ವೃದ್ಧಾಪ್ಯ ವೇತನ ಮಂಜೂರಿ ಹಾಗೂ ನಿವೇಶನ ಹಂಚಿಕೆಯಲ್ಲಿ ಆಗಿ ರುವ ಅನ್ಯಾಯವನ್ನು ಆದಷ್ಟು ಬೇಗ ಸರಿಪಡಿಸಿ ಅರ್ಹರಿಗೆ ಈ ಸೌಲಭ್ಯಗಳು ಸಿಗುವಂತೆ ಮಾಡುವುದಾಗಿ ಭರವಸೆ ನೀಡಿದರು.

ರಾಜ್ಯ ನದಾಫ-ಪಿಂಜಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮೌಲಾಸಾಬ ನದಾಫ ಮಾತನಾಡಿ, ರಾಜ್ಯ ನದಾಫ- ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸ ಬೇಕು. ಶ್ರೀಕೃಷ್ಣ ಪಾರಿಜಾತ ಕಲಾವಿದ ಅಪ್ಪಾಲಾಲ ನದಾಫ ಸ್ಮರಣಾರ್ಥ ನಗರದಲ್ಲಿ ರಂಗಮಂದಿರ ನಿರ್ಮಿಸ ಬೇಕು. ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ದೊರಕಿಸಬೇಕು ಎಂದರು.

ರಾಜ್ಯ ನದಾಫ-ಪಿಂಜಾರ್ ಸಂಘದ ರಾಜ್ಯ ಪ್ರತಿನಿಧಿ ಯಾಕೂಬ ನದಾಫ ಮಾತನಾಡಿದರು. ತಾಲ್ಲೂಕು ಘಟಕದ ಉಪಾಧ್ಯಕ್ಷ ಬಾಬು ನದಾಫ ಪ್ರಾಸ್ತಾ ವಿಕವಾಗಿ ಮಾತನಾಡಿದರು. ತಾಲ್ಲೂಕು ಘಟಕದ ಅಧ್ಯಕ್ಷ ಸಾಹೇಬಲಾಲ ನದಾಫ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯ ರಾಜು ಪಿಸಾಳ, ಜೆ.ಎ. ನದಾಫ ವೇದಿಕೆ ಯಲ್ಲಿದ್ದರು. ಪ್ರತಿಭಾವಂತ ವಿದ್ಯಾರ್ಥಿ ಗಳನ್ನು ಸಹ ಸನ್ಮಾನಿಸಲಾಯಿತು. ಆರ್.ಬಿ.ನಾಯಿಕ ವಾಡಿ ಕುರಾನ ಪಠಿಸಿದರು. ಸಲೀಂ ನದಾಫ ಪ್ರಾರ್ಥನೆ ಗೀತೆ ಹಾಡಿ ದರು. ಎಚ್.ಬಿ.ನದಾಫ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT