ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯದಲ್ಲೇ ಆಯುಷ್ಯ ಹೇಳುವ ಟೆಲೊಮರ್

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ತಮ್ಮ ಅಥವಾ ತಮ್ಮ ಮಕ್ಕಳ ಆಯುಷ್ಯ್, ಆರೋಗ್ಯ ವಿಚಾರಿಸಲು ಕೆಲವರು ಜ್ಯೋತಿಷಿಗಳ ಬಳಿ ದೌಡಾಯಿಸುತ್ತಾರೆ. ವ್ಯಕ್ತಿಗಳ ಆಯುಷ್ಯವನ್ನು ವಂಶವಾಹಿಗಳ ಮೂಲಕ ಚಿಕ್ಕ ವಯಸ್ಸಿನಲ್ಲೇ ಅಂದಾಜಿಸಲು ಸಾಧ್ಯ ಎಂದು ವಿಜ್ಞಾನಿಗಳು ಈಗ ಹೇಳುತ್ತಿದ್ದಾರೆ.

ವರ್ಣತಂತುಗಳ (ಕ್ರೋಮೊಸೋಮ್ಸ) ತುದಿಗಿರುವ ಟೆಲೊಮರ್ ಕ್ಯಾಪ್‌ಗಳ ಉದ್ದವನ್ನು ಬಾಲ್ಯದಲ್ಲೇ ಅಳೆದು ಈ ಅಂದಾಜು ಮಾಡಬಹುದಾಗಿದೆ ಎಂದು ಬ್ರಿಟನ್‌ನ ಗ್ಲಾಸ್ಗೊ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಹೇಳಿದೆ.

ಈ ಟೆಲೊಮರ್ ಕ್ಯಾಪ್‌ಗಳು ಒಂದೇ ರೀತಿಯ ಡಿಎನ್‌ಎ ಸರಣಿ ಹೊಂದಿರುತ್ತವೆ. ವಯಸ್ಸಾದಂತೆ ಇವು ಉದುರಿಹೋಗುತ್ತವೆ. ಜೆಬ್ರಾ ಫಿಂಚ್ ಪ್ರಭೇದದ 99 ಪುಟ್ಟ ಹಕ್ಕಿಗಳನ್ನು ಪ್ರಯೋಗಕ್ಕೆ ಆಯ್ದುಕೊಂಡು ಈ ಟೆಲೊಮರ್‌ಗಳನ್ನು ಅಳೆಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT