ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯವಿವಾಹ ತಡೆಗಟ್ಟಿದ ಅಧಿಕಾರಿಗಳು

Last Updated 11 ಜೂನ್ 2011, 6:40 IST
ಅಕ್ಷರ ಗಾತ್ರ

ಸಿಂದಗಿ: ಅಪ್ರಾಪ್ತ ಬಾಲಕಿಯ ವಿವಾಹವನ್ನು ಅಧಿಕಾರಿಗಳು ಸಕಾಲದಲ್ಲಿ ತಡೆದ ಘಟನೆ ಸಿಂದಗಿ ಪಟ್ಟಣದ ವಿದ್ಯಾನಗರ ಆಶ್ರಯ ಕಾಲೋನಿಯಲ್ಲಿ ಶುಕ್ರವಾರ ನಡೆದಿದೆ.

ಇಲ್ಲಿಯ ಶಿವಪ್ಪಗೌಡ ಪದ್ಮಪ್ಪಗೌಡ ಬಿರಾದಾರ ಅವರ ಪುತ್ರಿ ಪದ್ಮಾವತಿ (15) ಅವರನ್ನು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಹಳ್ಳಿ ಗ್ರಾಮದ ದಿವಂಗತ ಕುಡ್ಲಪ್ಪ ಚಿನ್ನಪ್ಪ ಸತ್ತಿ ಅವರ ಪುತ್ರ ಹಣಮಂತ (22) ಎಂಬಾತನೊಂದಿಗೆ ವಿವಾಹ ಮಾಡಿ ಕೊಡಲು ಸಕಲ ಸಿದ್ಧತೆ ನಡೆದಿತ್ತು. ಅಷ್ಟರಲ್ಲಿಯೇ ಯಾರಿಂದಲೋ ಮಾಹಿತಿ ಪಡೆದು ಕೊಂಡಿದ್ದ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ದಿ ಯೋಜನಾಧಿಕಾರಿ ಆರ್.ಎಸ್. ಆಲಗೂರ, ಇಲಾಖೆ ಮೇಲ್ವಿಚಾರಕಿ ಸಿಂಧೂ ಬಡಿಗೇರ ವಿವಾಹ ಮಂಟಪಕ್ಕೆ ಬಂದು ವಿವಾಹ ನಿಲ್ಲಿಸುವಂತೆ ತಿಳಿಸಿದರು.

ಉಪ ತಹಸೀಲ್ದಾರ ಡಿ.ಎಸ್. ನಾಗಠಾಣ, ಸಬ್ ಇನ್ಸ್‌ಪೆಕ್ಟರ್ ರಮೇಶ ರೊಟ್ಟಿ ಅವರೂ ಸ್ಥಳಕ್ಕೆ ಧಾವಿಸಿ ಪೋಷಕರು ಮತ್ತು ಅಪ್ರಾಪ್ತ ಬಾಲಕಿ ತಂದೆಯ ಮನವೊಲಿಸಿ ಅವರಿಂದ ಬಾಲಕಿಗೆ 18 ವರ್ಷ ಪೂರ್ಣಗೊಳ್ಳುವವರೆಗೆ ವಿವಾಹ ಮಾಡುವುದಿಲ್ಲ. ಇದಕ್ಕೆ ತಪ್ಪಿದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಬಾಂಡ್ ಮೇಲೆ ಲಿಖಿತವಾಗಿ ಬರೆಸಿಕೊಂಡು ಅದಕ್ಕೆ ಐದು ಜನ ಪಂಚರು ಸಹಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT