ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳ ಸಂಗಾತಿಗಾಗಿ ಬಣ್ಣ ಬದಲಿಸುವ ಹಕ್ಕಿ

Last Updated 18 ಡಿಸೆಂಬರ್ 2010, 8:25 IST
ಅಕ್ಷರ ಗಾತ್ರ

ವಾಷಿಂಗ್ಟನ್(ಪಿಟಿಐ): ಪ್ರಣಯದಾಟಕ್ಕೆ ಸಂಗಾತಿಯನ್ನು ಆಕರ್ಷಿಸಲು  ಮನುಷ್ಯರಲ್ಲಿ ಹಲವಾರು ವಿಧಾನಗಳಿವೆ. ಆದರೆ ಇಲ್ಲಿನ ‘ಬರ್ಡ್ ಆಫ್ ಪ್ಯಾರಡೈಸ್’ ಹಕ್ಕಿ ತನ್ನ ದೇಹದ ಬಣ್ಣವನ್ನೇ ಬದಲಿಸಿ, ನೃತ್ಯದ ಮೂಲಕ ಸಂಗಾತಿಯನ್ನು ಸೆಳೆಯುತ್ತದೆ, ಮನವೊಲಿಸುತ್ತದೆ. ಇದು ಊಹಾಪೋಹವಲ್ಲ. ಕ್ವೀನ್ಸ್‌ಲೆಂಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ನೇತೃತ್ವದ ಅಂತರರಾಷ್ಟ್ರೀಯ ತಂಡ  ಈ ‘ದೇವ ಪಕ್ಷಿ’ಗಳ ಪ್ರತ್ಯೇಕತೆಯ ಬಗ್ಗೆ ಹೊಸ ಬೆಳಕನ್ನು ಚೆಲ್ಲಿದೆ. ಪ್ಯಾರಡೈಸ್ ಹಕ್ಕಿಗಳ ಪ್ರಣಯ ನೃತ್ಯ ಈ ಮೊದಲೇ ಎಲ್ಲೆಡೆ ಸುಪರಿಚಿತ. ಇದರ ಕಾರಣ ಈಗ ಪತ್ತೆಯಾಗಿದೆ.

 ನ್ಯೂಗಿನಿಯ ‘ಬರ್ಡ್ ಆಫ್ ಪ್ಯಾರಾಡೈಸ್’ ಜಾತಿಯ ಹಕ್ಕಿ ಈ ಪ್ರತ್ಯೇಕ ಪ್ರಣಯ ಚೇಷ್ಠೆಯನ್ನು ಮಾಡುತ್ತದೆ. ಸಂಗಾತಿಯನ್ನು ಕಂಡಾಗ ಇದು ನರ್ತಿಸುತ್ತದೆ, ಇದರ ಮೈಯ ಬಣ್ಣಕ್ಕೆ ನವಿಲಿನ ಹೋಲಿಕೆ  ಇದ್ದು, ಆಕರ್ಷಕ ವಿನ್ಯಾಸ ಹೊಳಪು ಇರುತ್ತದೆ ಎಂದು ವಿಜ್ಞಾನಿಗಳ ತಂಡ  ನೇತೃತ್ವ ವಹಿಸಿದ್ದ ಜಸ್ಟಿನ್ ಮಾರ್ಷಲ್ ಹೇಳಿದ್ದಾರೆ.

ಗಂಡು ಹಕ್ಕಿಯ ದೇಹದಲ್ಲಿರುವ ಮೂರು ವಿಧದ ಗರಿಗಳು ಬಾಗಿಕೊಂಡು ಕನ್ನಡಿಯಂತೆ ಬೆಳಕನ್ನು ಪ್ರತಿಫಲಿಸುತ್ತವೆ. ಇವುಗಳಿಂದ ಹಳದಿ ಮತ್ತು ನೀಲಿ ಬೆಳಕು ಮೂರು ಬದಿಗಳಿಗೆ ಪ್ರತಿಫಲಿಸುತ್ತವೆ. ಆದರೆ ಹೆಣ್ಣು ಹಕ್ಕಿಗೆ ಯಾವ ಸಂದೇಶ ರವಾನೆಯಾಗುತ್ತದೆ ಎಂಬುದು ಇನ್ನಷ್ಟೇ ಪತ್ತೆಯಾಗಬೇಕಿದೆ. ಪ್ರಣಯದಾಟದ ಪ್ರತ್ಯೇಕ ಸಂದರ್ಭದಲ್ಲಿ ಹಕ್ಕಿಗಳ ಗರಿಗಳ ಮೇಲೆ ಬೆಳಕು ಬಿದ್ದಾಗ ಹೊಳೆಯುವ ವರ್ಣ ಚಿತ್ತಾರವನ್ನು ನಿರ್ಮಿಸುತ್ತವೆ. ಲೋಹ ಪ್ರತಿಫಲಕದಂತೆ ಈ ಗರಿಗಳ ಬಣ್ಣ ಕಾರ್ಯನಿರ್ವಹಿಸುತ್ತವೆ.

ಇಂತಹ ಸಂದರ್ಭಗಳಲ್ಲಿ ಅವುಗಳ ಮನುಷ್ಯರ ‘ಜೋಡಿ ನೃತ್ಯ’ದಂತೆಯೇ ನಿಪುಣ ಡ್ಯಾನ್ಸ್ ಮಾಡುತ್ತವೆ ಎಂಬ ಸ್ವಾರಸ್ಯಕರ ವಿಷಯವನ್ನು ತಂಡ ಹೊರಗೆಡಹಿದೆ.
ಮನುಷ್ಯರು ಪ್ರಣಯದ ನಂತರ ಸಂಗಾತಿಯಿಂದ ದೂರಸರಿಯಲು ಬಣ್ಣ ಬದಲಿಸಿದರೆ, ಈ ಹಕ್ಕಿಗಳು ಪ್ರಣಯಕ್ಕಾಗಿ ಸಂಗಾತಿಯನ್ನು ಸೆಳೆಯಲು ಬಣ್ಣ ಬದಲಿಸಿ ಆಕರ್ಷಣೆ ಹೆಚ್ಚಿಸಿ ನೃತ್ಯವಾಡುವುದು ನಿಸರ್ಗ ಇವುಗಳಿಗೆ ನೀಡಿದ ವೈಶಿಷ್ಟ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT