ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾವಿಗೆ ಬಿದ್ದ ಚಿರತೆ ರಕ್ಷಣೆ

Last Updated 19 ಏಪ್ರಿಲ್ 2013, 13:24 IST
ಅಕ್ಷರ ಗಾತ್ರ

ಶೃಂಗೇರಿ: ಕುದುರೆಮುಖ ರಾಷ್ಟ್ರೀಯ ಉದ್ಯಾನದ ಕೆರೆ ಗ್ರಾಮ ಪಂಚಾ ಯಿತಿಯ ಕೆರೆಹೊಸ್ತೋಟ ನಾಗರಾಜ್ ಅವರ ತೋಟದ ಬಾವಿಗೆ ಚಿರತೆ ಯೊಂದು ಬಿದ್ದ ಘಟನೆ ಬುಧವಾರ ನಡೆದಿದೆ.

ತೋಟದ ಬಾವಿಯಲ್ಲಿ ಚಿರತೆಯ ನರಳಾಟ ಕೇಳಿಸಿಕೊಂಡ ಶ್ರಿನಿವಾಸ್ ವನ್ಯಜೀವಿ ವಿಭಾಗದ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮಣ ನಾಯಕ್, ವಲಯ ಅರಣ್ಯ ಸಂರಕ್ಷಣಾಧಿಕಾರಿ ಶ್ರಿನಾಥ್ ಕಡೋಲ್ಕರ್ ಮತ್ತು ಸಿಬ್ಬಂದಿ ಬಾವಿಯಿಂದ ಚಿರತೆಯನ್ನು ಹೊರ ತೆಗೆದು ಬೋನಿನಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಾವಿಗೆ ಬಿದ್ದ ಚಿರತೆಯ ಹಿಂಬದಿಯ ಎರಡು ಪಾದಗಳಿಗೆ ಪೆಟ್ಟಾಗಿದ್ದು, ಅದನ್ನು ಬೇಟೆ ಮಾಡುವ ಪ್ರಯತ್ನ ನಡೆದಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಇದೀಗ ಕೆರೆಕಟ್ಟೆಯ ಅರಣ್ಯ ಇಲಾಖೆಯ ಕಚೇರಿಯಲ್ಲಿ ಇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT