ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಂದ್ರಾ ಆರೋಪ ಅಲ್ಲಗಳೆದ ಲಂಕಾ

Last Updated 3 ಜೂನ್ 2013, 20:06 IST
ಅಕ್ಷರ ಗಾತ್ರ

ಕೊಲಂಬೊ (ಪಿಟಿಐ): ಭಾರತದ ಕ್ರಿಕೆಟಿಗರು 2010ರಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾಗ ಐಸಿಸಿಯ ಭ್ರಷ್ಟಾಚಾರ ನಿಗ್ರಹ ದಳದ ನಿಯಮಗಳನ್ನು ಉಲ್ಲಂಘಿಸಿದ್ದರು ಎಂದು ಪಂಜಾಬ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಐ.ಎಸ್.ಬಿಂದ್ರಾ ಮಾಡಿರುವ ಆರೋಪಗಳನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಲ್ಲಗಳೆದಿದೆ.

`ನಿಯಮ ಉಲ್ಲಂಘನೆಯ ವಿಷಯವನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಲಂಕಾ ಕ್ರಿಕೆಟ್ ಮಂಡಳಿ ಮೇಲೆ ಬಿಸಿಸಿಐ ಒತ್ತಡ ಹೇರಿ ಅದನ್ನು ತೆಗೆಸಿತ್ತು' ಎಂದೂ ಬಿಂದ್ರಾ ಆರೋಪಿಸಿದ್ದರು.

`ಈ ರೀತಿಯ ಪ್ರಕರಣವೇ ನಡೆದಿಲ್ಲ. ಯಾರಿಗೂ ವರದಿ ನೀಡಿಲ್ಲ. ಈಗ ಮಾಡಲಾಗಿುವ ಆರೋಪ ಸುಳ್ಳಿನ ಕಂತೆ' ಎಂದು ಲಂಕಾ ಕ್ರಿಕೆಟ್ ಮಂಡಳಿಯ ಸಿಇಒ ಆ್ಯಷ್ಲೆ ಡಿ ಸಿಲ್ವಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದರೆ, ತಮ್ಮ ಹೇಳಿಕೆಗೆ ಬದ್ಧರಿರುವುದಾಗಿ ಬಿಂದ್ರಾ ಸೋಮವಾರ ಮತ್ತೊಮ್ಮೆ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT