ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಇಎಂಎಲ್‌ಗೆ ಮಣಿದ ಇಸ್ರೋ

Last Updated 17 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸರಾಗವಾಗಿ ಗೋಲು ಕಲೆ ಹಾಕಿದ ಬಿಇಎಂಎಲ್ ತಂಡದವರು ಬಿಡಿಎಫ್‌ಎ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಸುಲಭ ಗೆಲುವು ಪಡೆದರು.

ಅಶೋಕ ನಗರ ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಬಿಇಎಂಎಲ್ ತಂಡ 6-2ಗೋಲುಗಳಿಂದ ಇಸ್ರೋ ತಂಡವನ್ನು ಸುಲಭವಾಗಿ ಮಣಿಸಿತು.

ವಿಜಯಿ ತಂಡದ ಕಾರ್ತಿಗೇಯನ್ 22ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಮತ್ತೊಂದು ಗೋಲನ್ನು 65ನೇ ನಿಮಿಷದಲ್ಲಿ ತಂದಿತ್ತರು. ನಂತರ ಇದೇ ತಂಡದ ಸ್ಟಿಫನ್ (24 ಹಾಗೂ 50ನೇ ನಿಮಿಷ) ಗೋಲು ಗಳಿಸಿ ಗೆಲುವಿನ ಅಂತರ ಹೆಚ್ಚಿಸಿದರು.

ಶರತ್ ಹಾಗೂ  ಮಧುಕರನ್ ತಲಾ ಒಂದು ಗೋಲು ಗಳಿಸಿದರು. ಆ ಗೋಲುಗಳು ಕ್ರಮವಾಗಿ 43 ಹಾಗೂ 60ನೇ ನಿಮಿಷದಲ್ಲಿ ಬಂದವು. ಇದರಿಂದ ಬಿಇಎಂಎಲ್ ತಂಡ ಸುಲಭ ಗೆಲುವು ಪಡೆಯಲು ಸಾಧ್ಯವಾಯಿತು.

ಅಷ್ಟೇನೂ ಪ್ರಭಾವಿ ಆಟವಾಡದ ಇಸ್ರೋ ತಂಡದ ಅಶೋಕ್ ಕುಮಾರ್ ಹಾಗೂ ಜಿ. ಮಂಜು ಅವರು  ತಲಾ ಒಂದೊಂದು ಗೋಲು ಕಲೆ ಹಾಕಿದರು. ಆದರೆ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಲು ನಡೆಸಿದ ಯತ್ನ ಸಾಕಾಗಲಿಲ್ಲ.
 
ಡಿವೈಎಸ್‌ಎಚ್ ಜಯಭೇರಿ: ಗೋಲಿನ ಸುರಿಮಳೆ ಸುರಿಸಿದ ಡಿವೈಎಸ್‌ಎಚ್ ಫುಟ್‌ಬಾಲ್ ಕ್ಲಬ್ ತಂಡದವರು `ಎ~ ಡಿವಿಷನ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಲೀಗ್ ಪಂದ್ಯದಲ್ಲಿ ಭಾರಿ ಅಂತರದ ಗೆಲುವು ಪಡೆದರು.
ಡಿವೈಎಸ್‌ಎಚ್ ತಂಡ 9-0ಗೋಲುಗಳಿಂದ ರಾಯಲ್ ತಂಡವನ್ನು ಭರ್ಜರಿಯಾಗಿ ಮಣಿಸಿತು.

ಯು. ಕುಮಾರ್ ಹಾಗೂ ಕಲೈಲ್‌ವನನ್ ಅವರು ಸೊಗಸಾಗಿ ಆಟವಾಡಿ ಡಿವೈಎಸ್‌ಎಚ್ ತಂಡಕ್ಕೆ ಮೇಲಿಂದ ಮೇಲೆ ಗೋಲುಗಳನ್ನು ಗಳಿಸಿ ಎದುರಾಳಿ ತಂಡಕ್ಕೆ ಭಾರಿ ಪೈಪೋಟಿ ಒಡ್ಡಿದರು. ಇದರಿಂದ ಒತ್ತಡಕ್ಕೆ ಒಳಗಾದ ರಾಯಲ್ ತಂಡ ಗೋಲು ಗಳಿಸಲು ನಡೆಸಿದ ಪ್ರಯತ್ನವನ್ನು ವಿಜಯಿ ತಂಡ ವಿಫಲಗೊಳಿಸಿತು.

ಕುಮಾರ್ ಆಟಕ್ಕೆ ಬೆಂಬಲ ನೀಡಿದ ಹರೀಷ್ (75ನೇ ನಿ.), ಬಿಜೊಯ್ (81ನೇ ನಿ.) ಹಾಗೂ ರವಿ ಕಿರಣ್ (83ನೇ ನಿ.) ತಲಾ ಒಂದು ಗೋಲು ಗಳಿಸಿದರು.

ಶನಿವಾರದ ಪಂದ್ಯಗಳು: ಎಜಿಒಸಿ-ಸರ್ಕಾರಿ ಮುದ್ರಣಾಲಯ (ಮಧ್ಯಾಹ್ನ 2ಗಂಟೆಗೆ) ಹಾಗೂ ಎಂಇಜಿ-ಎಸ್‌ಎಐ (ಸಂಜೆ 4ಕ್ಕೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT