ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಇಡಿ ಕೌನ್ಸೆಲಿಂಗ್: ತೀವ್ರ ಸಮಸ್ಯೆ

Last Updated 4 ಅಕ್ಟೋಬರ್ 2012, 5:25 IST
ಅಕ್ಷರ ಗಾತ್ರ

ಬಳ್ಳಾರಿ: ನಗರದಲ್ಲಿ ಬುಧವಾರದಿಂದ ಆರಂಭವಾಗಿರುವ ಪ್ರಸಕ್ತ ಸಾಲಿನ ಬಿ.ಇಡಿ ಪ್ರವೇಶ ಕೌನ್ಸೆಲಿಂಗ್ ಪ್ರಕ್ರಿಯೆ ಯಲ್ಲಿ ಭಾಗವಹಿಸಿರುವ ನೂರಾರು ಜನ ಅಭ್ಯರ್ಥಿಗಳಿಗೆ ಆನ್‌ಲೈನ್ ಮೂಲಕ ಕಾಲೇಜುಗಳ ಆಯ್ಕೆಗೆ ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಸಲು ಸಮರ್ಪಕ ಸ್ಥಳ ನೀಡಿಲ್ಲ ಎಂದು ಅಭ್ಯರ್ಥಿಗಳು ದೂರಿದ್ದಾರೆ.

ಸ್ಥಳೀಯ ಕೌಲ್‌ಬಝಾರ್ ಪ್ರದೇಶ ದಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಆವರಣ ದಲ್ಲಿನ ಕಂಪ್ಯೂಟರ್ ವಿಭಾಗದ ಹಿಂಭಾಗದಲ್ಲಿ ತಿಪ್ಪೆಯಂತೆ ಇರುವ, ಕಲ್ಲು ಗುಂಡುಗಳಿರುವ ಸ್ಥಳದಲ್ಲಿ ನಿಲ್ಲಿಸಿ, ಅರ್ಜಿ ನೀಡಲಾಗುತ್ತಿದೆ. ಅಲ್ಲದೆ, ಆನ್‌ಲೈನ್‌ನಲ್ಲಿನ ವಿವರಗಳನ್ನೂ ಅಲ್ಲೇ ನೀಡುತ್ತಿರುವುದರಿಂದ ಸಮಸ್ಯೆ ಎದು ರಾಗಿದೆ ಎಂದು ಅಭ್ಯರ್ಥಿಗಳ ಪಾಲಕ ರಾದ ಢಣಾಪುರದ ವಿರೂಪಾಕ್ಷಯ್ಯ, ಥಾಮಸ್ ಹಾಗೂ ಅಭ್ಯರ್ಥಿಗಳು ಆರೋಪಿಸಿದ್ದಾರೆ.

ಬೆಳಿಗ್ಗೆ 8ಕ್ಕೆ ಬರಲು ಹೇಳಿದ್ದರಿಂದ ಬಹುತೇಕ ಅಭ್ಯರ್ಥಿಗಳು ನಿಗದಿತ ಅವಧಿಯಲ್ಲೇ ಸ್ಥಳಕ್ಕೆ ಆಗಮಿಸಿದರೂ, ಮಧ್ಯಾಹ್ನ 12ರವರೆಗೆ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಲಿಲ್ಲ. ಅಲ್ಲದೆ, ಅರ್ಜಿ ನಮೂನೆಯನ್ನು ಸಲ್ಲಿಸುವ ಸಂದರ್ಭ ರೂ 50 ಸಂಗ್ರಹಿಸಿಲ್ಲ ಎಂಬ ಕಾರಣ ನೀಡಿ ಬ್ಯಾಂಕ್‌ಗೆ ರೂ 50 ಶುಲ್ಕ ಭರಿಸುವಂತೆ ಸೂಚಿಸಿ, ತೊಂದರೆ ಕೊಡಲಾಗಿದೆ ಎಂದು ಹೇಳಿದ್ದಾರೆ. ಸೂಕ್ತ ಜಾಗೆಯಲ್ಲಿ ಕೌನ್ಸೆಲಿಂಗ್ ನಡೆಸಿ ಅನುಕೂಲ ಮಾಡಿಕೊಡಬೇಕು ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT