ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಚ್‌ಇಎಲ್‌ಗೆ ಮಹಾರತ್ನ ಸ್ಥಾನ?

Last Updated 5 ಫೆಬ್ರುವರಿ 2011, 17:10 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ):ಸರ್ಕಾರಿ  ಸ್ವಾಮ್ಯದ ವಿದ್ಯುತ್ ಉಪಕರಣಗಳ ತಯಾರಿಕಾ ಕಂಪೆನಿ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್) ‘ಮಹಾರತ್ನ’ ಸ್ಥಾನ ಪಡೆಯಲಿರುವ ಮುಂದಿನ ಕಂಪೆನಿ ಎಂದು ಬೃಹತ್ ಉದ್ದಿಮೆ ಸಚಿವ ಪ್ರಫುಲ್ ಪಟೇಲ್ ಹೇಳಿದ್ದಾರೆ.

ಇಲ್ಲಿ ಆಯೋಜಿಸಲಾಗಿದ್ದ ‘ಎಐಎಂಎ’  ಸಮ್ಮೇಳನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ ಪ್ರಫುಲ್, ‘ಬಿಎಚ್‌ಇಎಲ್’ ಅತ್ಯುತ್ತಮ ಹಣಕಾಸು ಸಾಧನೆ  ಹೊಂದಿದ್ದು, ‘ಒಎನ್‌ಜಿಸಿ’, ‘ಇಂಡಿಯಲ್ ಆಯಿಲ್’, ‘ಎಸ್‌ಎಐಎಲ್’ ಮತ್ತು ‘ಎನ್‌ಟಿಪಿಸಿ’ ನಂತರ ಮಹಾರತ್ನ ಸ್ಥಾನ ಪಡೆಯಬಹುದಾದ ಐದನೆಯ ಕೇಂದ್ರೋದ್ಯಮವಾಗಲಿದೆ ಎಂದರು. ‘ಮಹಾರತ್ನ’ ಸ್ಥಾನ ಪಡೆಯಲಿರುವ ಕಂಪೆನಿಗಳು ಯೋಜನೆಯೊಂದಕ್ಕೆ ಸ್ವತಂತ್ರವಾಗಿ ್ಙ 5 ಸಾವಿರ ಕೋಟಿ ಹೂಡಿಕೆ ಮಾಡಿರಬೇಕು ಹಾಗೂ ಸತತ ಮೂರು ವರ್ಷ ್ಙ 5 ಸಾವಿರ ಕೋಟಿ ನಿವ್ವಳ ಲಾಭ ದಾಖಲಿಸಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT