ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿನಲ್ಲಿ ಕನ್ನಡದ ಹುಡುಗರು...

Last Updated 28 ಜುಲೈ 2013, 19:59 IST
ಅಕ್ಷರ ಗಾತ್ರ

ಬಿಎಫ್‌ಸಿನಲ್ಲಿ ಬೆಂಗಳೂರಿನ ಮೂವರು ಪ್ರತಿಭಾವಂತ ಆಟಗಾರರು ಸ್ಥಾನ ಪಡೆದಿದ್ದಾರೆ. ಫಾರ್ವರ್ಡ್ ಆಟಗಾರ ಸಂಪತ್ ಕುಮಾರ್ ಗೋವಾದ ನಗೋವಾದಲ್ಲಿರುವ ಫ್ರಾನ್ಸಾ ಪ್ಯಾಕ್ ಕ್ಲಬ್ ಪರ ಹಿಂದೆ ಅತ್ಯುತ್ತಮ ಸಾಮರ್ಥ್ಯ ತೋರಿದ್ದರು. ಅದಕ್ಕೆ ಮೊದಲು ಮೂರು ವರ್ಷಗಳ ಕಾಲ ಬೆಂಗಳೂರಿನ ಐಟಿಐ ಪರ ಆಡಿ ಅನುಭವ ಗಳಿಸಿದ್ದ ಇವರು 2005ರಿಂದ ಎರಡು ವರ್ಷಗಳ ಕಾಲ ಇಲ್ಲಿನ ಏರೋನಾಟಿಕ್ಸ್ ಪರ ರಾಷ್ಟ್ರೀಯ ಲೀಗ್‌ನಲ್ಲಿ ಆಡಿದ್ದರು. ನಂತರ ಮುಂಬೈ, ಪುಣೆ ಕ್ಲಬ್‌ಗಳಲ್ಲಿ 5ವರ್ಷಗಳಿಂದ ಆಡುತ್ತಿದ್ದಾರೆ.  26ರ ಹರೆಯದ ಸಂಪತ್ ಐದು ವರ್ಷಗಳ ಹಿಂದೆ ಭಾರತ ತಂಡದಲ್ಲಿ ಸ್ಥಾನ ಗಳಿಸಿ ಮೂರು ಅಂತರರಾಷ್ಟ್ರೀಯ ಪಂದ್ಯಗಳಲ್ಲಿಯೂ ಆಡಿದ್ದರು.

ಬೆಂಗಳೂರಿನ ಆರ್.ವಿಶಾಲ್ ಕುಮಾರ್  ರಕ್ಷಣಾ ವ್ಯೆಹದಲ್ಲಿ ಸದಾ ಎಚ್ಚರದ ಕಣ್ಣು. ಇವರು ಕೋಲ್ಕತ್ತಾದ ಪೈಲಾನ್ ಆ್ಯರೋಸ್ ಪರ 21 ಪಂದ್ಯಗಳನ್ನು ಆಡಿದ್ದಾರೆ. ಸ್ಯಾಫ್ ಕಪ್ ಮತ್ತು ಒಲಿಂಪಿಕ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಆಡಿದ ಭಾರತ ತಂಡದಲ್ಲಿಯೂ ಇವರು ಇದ್ದರು.

ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರ ಕೇಂದ್ರದಲ್ಲಿ ತರಬೇತಿ ಪಡೆದಿರುವ ಬೆಂಗಳೂರಿನ ಆ್ಯಂಡ್ರೂ ಡಾನ್‌ಬಾಸ್ಕೊ ಅವರು ಗೋವಾ ಸೇಸಾ ಅಕಾಡೆಮಿಯಲ್ಲಿಯೂ ಆಡಿದ ಅನುಭವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT