ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿ–ಸಲಗಾಂವ್ಕರ್‌ ಪೈಪೋಟಿ

ಐ ಲೀಗ್‌ ಪಂದ್ಯ ಇಂದು; ಪುಟಿದೇಳುವತ್ತ ಆತಿಥೇಯರ ಚಿತ್ತ
Last Updated 20 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದಿನ ಪಂದ್ಯದಲ್ಲಿ ಸೋಲು ಕಂಡಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡದವರು ಐ ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಶನಿವಾರ ಸಲಗಾಂವ್ಕರ್‌ ಫುಟ್‌ಬಾಲ್‌ ಕ್ಲಬ್‌ ಎದುರು ಪೈಪೋಟಿ ನಡೆಸಲಿದ್ದು, ಗೆಲುವಿನ ಹಾದಿಗೆ ಮರಳುವ ವಿಶ್ವಾಸದಲ್ಲಿದ್ದಾರೆ.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂ ಗಣದಲ್ಲಿ ನಡೆಯಲಿರುವ ಈ ಪಂದ್ಯ ದಲ್ಲಿ ಗೆದ್ದು ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳಲು ಬಿಎಫ್‌ಸಿ ಎದುರು ನೋಡುತ್ತಿದೆ. ಈ ತಂಡ ಹಿಂದಿನ ಪಂದ್ಯದಲ್ಲಿ ಈಸ್ಟ್‌ ಬೆಂಗಾಲ್‌ ಎದುರು ಪರಾಭವಗೊಂ ಡಿತ್ತು. ತವರಿನ ಅಂಗಳದಲ್ಲಿ ಎದುರಾದ ಮೊದಲ ಸೋಲು ಅದು. ಸದ್ಯ ಈ ತಂಡದವರು 14 ಪಂದ್ಯಗಳಿಂದ 27 ಪಾಯಿಂಟ್‌ ಹೊಂದಿದ್ದಾರೆ.

ಸಲಗಾಂವ್ಕರ್‌ ತಂಡ 13 ಪಂದ್ಯಗಳಿಂದ 18 ಪಾಯಿಂಟ್‌ ಹೊಂದಿದೆ. ಈ ತಂಡದ ಎದುರಿನ ಹಿಂದಿನ ಪೈಪೋಟಿಯಲ್ಲಿ ಬೆಂಗಳೂರು ತಂಡ ಗೆಲುವು ಸಾಧಿಸಿತ್ತು. ‘ಪ್ರತಿ ಪಂದ್ಯವೂ ಮುಖ್ಯ. ಹಿಂದೆ ಏನಾಗಿತ್ತು ಎಂಬುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಮುಂದಿನ ಪಂದ್ಯದತ್ತ ಚಿತ್ತ ಹರಿಸಿ ಆಡಬೇಕು’ ಎಂದು ಮುಖ್ಯ ಕೋಚ್‌ ಆ್ಯಷ್ಲೆ ವೆಸ್ಟ್‌ವುಡ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT