ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ಆರ್‌ಸಿ ಅಭ್ಯರ್ಥಿ ಗನ್‌ಮ್ಯಾನ್ ಬಂಧನ

Last Updated 26 ಏಪ್ರಿಲ್ 2013, 6:20 IST
ಅಕ್ಷರ ಗಾತ್ರ

ಕುಷ್ಟಗಿ: ಏರ್‌ಗನ್ ಹಿಡಿದುಕೊಂಡು ಮತದಾರರನ್ನು ಬೆದರಿಸುತ್ತಿದ್ದ ಆರೋಪದ ಮೇಲೆ ಈ ವಿಧಾನಸಭಾ ಕ್ಷೇತ್ರದ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರಗೌಡ ಗೋನಾಳ ಅವರ ಖಾಸಗಿ ಗನ್‌ಮ್ಯಾನ್‌ನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಪಂಪಾಪತಿ ಕುರುಬರ ಎಂದು ಗುರುತಿಸಲಾಗಿದ್ದು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬುಧವಾರ ರಾತ್ರಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ನೀಲಪ್ಪ ಓಲೇಕಾರ ಗುರುವಾರ ಸಂಜೆ ಸ್ಪಷ್ಟಪಡಿಸಿದ್ದಾರೆ.
ಅಭ್ಯರ್ಥಿ ವಾಹನದಲ್ಲಿ ಇರುತ್ತಿದ್ದ ಈ ಗನ್‌ಮ್ಯಾನ್ ಮೇಲೆ ಜನರನ್ನು ಹೆದರಿಸುತ್ತಿದ್ದ ಎಂಬ ಆರೋಪ ಹೊರಿಸಲಾಗಿದೆ.

ಕಾರು ವಶಕ್ಕೆ: ಚುನಾವಣಾ ಆಯೋಗದ ಪರವಾನಗಿ ಹಾಜರುಪಡಿಸದ ಕಾರಣ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರಗೌಡ ಗೋನಾಳ ಅವರ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಬುಧವಾರ ಸಂಜೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ತಪಾಸಣೆ ನಡೆಸಿದಾಗ ಪರವಾನಗಿ ಇರಲಿಲ್ಲ ಎನ್ನಲಾಗಿದೆ. ಸದರಿ ಕಾರನ್ನು ಸ್ಥಳೀಯ ಪೊಲೀಸ್‌ಠಾಣೆಯಲ್ಲಿ ಇಡಲಾಗಿದೆ.

ಈ ಕುರಿತು ಪ್ರಕರಣ ದಾಖಲಾಗಿಲ್ಲವಾದರೂ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸದರಿ ಕಾರನ್ನು ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಪೊಲೀಸರ ವಶದಲ್ಲಿ ಇರಿಸಲಾಗಿದೆ ಎಂಬುದನ್ನು ಚುನಾವಣಾ ವಿಭಾದ ಅಧಿಕಾರಿಗಳು ಸ್ಪಷ್ಪಪಡಿಸಿದ್ದಾರೆ.

ಆರೋಪ: ತಮ್ಮ ಪಕ್ಷದ ವಾಹನಗಳ ತಪಾಸಣೆ ನಡೆಸುವುದು ವಶಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿದ ಪಕ್ಷದ ಮುಖಂಡ ನಾಗರಾಜ ಗೋನಾಳ ಮತ್ತು ತಾಲ್ಲೂಕು ಘಟಕದ ಅಧ್ಯಕ್ಷ ನಾಗಪ್ಪ ಸೂಡಿ, ಹನಮಂತ ನಾಯಕ ಮತ್ತಿತರರು, ಸಕಾರಣವಿಲ್ಲದೇ ವಾಹನ ವಶಪಡಿಸಿಕೊಳ್ಳಲಾಗುತ್ತಿದೆ ಎಂದು ದೂರಿದರು.

ರಾಜಶೇಖರಗೌಡ ಗೋನಾಳ ಅವರ ವಾಹನ ತಪಾಸಣೆ ನಡೆಸಿದ ಜಿಲ್ಲಾಧಿಕಾರಿ ಪರವಾನಗಿ ಪತ್ರ ಇದ್ದರೂ ಅದನ್ನು ತೋರಿಸುವುದಕ್ಕೂ ಅವಕಾಶ ನೀಡಲಿಲ್ಲ, ಬಿಜೆಪಿ ಅಭ್ಯರ್ಥಿ ದೊಡ್ಡನಗೌಡರ ಕುಮ್ಮಕ್ಕಿನಿಂದ ಅಧಿಕಾರಿಗಳು ಈ ರೀತಿ ವರ್ತಿಸುತ್ತಿದ್ದಾರೆ, ತಮ್ಮ ಪಕ್ಷದ ವಾಹನಗಳನ್ನೇ ಗುರಿಯಾಗಿಟ್ಟುಕೊಂಡು ವಿನಾಕಾರಣ ತಪಾಸಣೆ ನಡೆಸುವ ಮೂಲಕ ಹಿಂಸಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅಲ್ಲದೇ ಈ ಬಗ್ಗೆ ಕಾನೂನು ಮೊರೆ ಹೋಗುವುದಾಗಿಯೂ ಬಿಎಸ್‌ಆರ್ ಮುಖಂಡರು ತಿಳಿಸಿದರು. ಮುಖಂಡ ನಾಗಪ್ಪ ಉಪ್ಪಾರ ಮತ್ತಿರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT