ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಕಿನಿ ಒಲ್ಲೆನೆಂದ ಸೋನಾಕ್ಷಿ

Last Updated 22 ಮೇ 2012, 19:30 IST
ಅಕ್ಷರ ಗಾತ್ರ

`ನಾನು ಬಿಕಿನಿ ತೊಟ್ಟು ಕ್ಯಾಮೆರಾ ಎದುರಿಸಲಾರೆ... ಅಷ್ಟೊಂದು ಧೈರ್ಯ ನನಗಿಲ್ಲ~- ಹೀಗೆ ದಬಾಂಗ್ ಸುಂದರಿ ಸೋನಾಕ್ಷಿ ಸಿನ್ಹಾ ಹೇಳಿದ್ದಾರೆ.

`ಸಿನಿಮಾಗೆ ಬರುವಾಗ ನನ್ನ ಸ್ವಭಾವಕ್ಕೆ ಅನುಗುಣವಾಗಿ ಕೆಲವು ನಿಯಮಗಳನ್ನು ರೂಪಿಸಿಕೊಂಡಿದ್ದೇನೆ. ಅದರಲ್ಲಿ ಬಿಕಿನಿ ಧರಿಸಲಾರೆನೆಂಬುದೂ ಒಂದು~ ಎಂಬುದು ಸೋನಾಕ್ಷಿಯ ನಿಲುವು.

ಮೊದಲ ಚಿತ್ರದಲ್ಲಿ ಗ್ರಾಮೀಣ ಪ್ರದೇಶದ ಯುವತಿಯಂತೆ ಉಡುಪು ಧರಿಸಿದ್ದ ಸೋನಾಕ್ಷಿ, ರೌಡಿ ರಾಥೋಡ್ ಚಿತ್ರದಲ್ಲಿಯೂ ಪಾರೊ ಪಾತ್ರ ನಿರ್ವಹಿಸುತ್ತಿದ್ದಾರೆ.

ಚಿತ್ರೀಕರಣಕ್ಕೆ ಸಂಬಂಧಿಸಿದ ಇನ್ನೊಂದು ನಿಯಮವೆಂದರೆ ಶೃಂಗಾರದ ದೃಶ್ಯಗಳಲ್ಲಿ ಸೋನಾಕ್ಷಿಗೆ ನಟಿಸಲಾಗುವುದಿಲ್ಲವಂತೆ.

`ಈಗಾಗಲೇ ಪ್ರೇಕ್ಷಕರು ನನ್ನನ್ನು ಮೈಮುಚ್ಚುವ ಉಡುಪಿನಲ್ಲಿ ಸ್ವೀಕರಿಸಿದ್ದಾರೆ. ಇನ್ನು ಆ ಇಮೇಜ್‌ನಿಂದ ಆಚೆ ಬರುವ ಅಗತ್ಯವೇ ನನಗಿಲ್ಲ. ನಾನು ಬೆಳೆದ ಪರಿಸರದಿಂದಾಗಿ, ನನ್ನವೇ ಆದ ಕೆಲವು ನಿರ್ಬಂಧನೆಗಳೂ ಇವೆ. ಪ್ರೇಮಸಲ್ಲಾಪದ ಹೆಚ್ಚು ದೃಶ್ಯಗಳಲ್ಲಿ ನಟಿಸಲಾರೆ~ ಎಂದು ಸ್ಪಷ್ಟಪಡಿಸಿದ್ದಾರೆ.

ಇಪ್ಪತ್ತನಾಲ್ಕು ವರ್ಷದ ಈ ಯುವತಿ `ಡರ್ಟಿ ಪಿಕ್ಚರ್~ ಚಿತ್ರ ವೀಕ್ಷಿಸಿ, ವಿದ್ಯಾಬಾಲನ್ ನಟನೆಯನ್ನು ಮನಸಾರೆ ಹೊಗಳಿದ್ದಾರೆ. ತಾವು ವಿದ್ಯಾ ಅಭಿಮಾನಿಯೆಂದೂ ಹೇಳಿಕೊಂಡಿದ್ದಾರೆ.

`ತೆರೆಯ ಮೇಲೆ ಮಾದಕವಾಗಿ ಕಾಣಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅಂಥ ಬಟ್ಟೆಗಳಲ್ಲಿ ಮೈಮಾಟ ತೋರಿಸುವುದು ನನಗಂತೂ ಸಾಧ್ಯವೇ ಇಲ್ಲ. ಅಷ್ಟೊಂದು ಧೈರ್ಯವೇ ನನಗಿಲ್ಲ~ ಎಂದೂ ಮಾತು ಸೇರಿಸಿದ್ದಾರೆ.

ಭಾರತೀಯ ಉಡುಪುಗಳು ತಮ್ಮ ಅಂಗಸೌಷ್ಠವಕ್ಕೆ ಒಪ್ಪುತ್ತವೆ. ಚಿತ್ರದ ಪಾತ್ರಗಳನ್ನು ಉಡುಪುಗಳಿಂದ ತೀರ್ಮಾನಿಸುವುದಿಲ್ಲ. ನಿರ್ವಹಿಸಬಲ್ಲೆ ಎನ್ನುವ ಅವರು ವಿಶ್ವಾಸ ಇದ್ದರೆ ಮಾತ್ರ ಪಾತ್ರ ಒಪ್ಪಿಕೊಳ್ಳಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ.

`ಇದಿನ್ನೂ ಚಿತ್ರೋದ್ಯಮದಲ್ಲಿ ಎರಡನೇ ವರ್ಷ. ಸದ್ಯ ದೊರಕಿರುವ ಪಾತ್ರಗಳಿಂದ ಸಂತೋಷವಿದೆ. ಆಧುನಿಕ ಉಡುಗೆಗಳನ್ನು ತೊಡಲು ಸಾಕಷ್ಟು ಅವಕಾಶಗಳಿವೆ.

ಜಾಹೀರಾತು, ಸಮಾರಂಭ, ದಿನನಿತ್ಯದ ಬದುಕು ಹೀಗೆ. ಗ್ರಾಮೀಣ ಸೊಗಡಿನಲ್ಲಿ ಕಾಣಿಸಿಕೊಳ್ಳುವುದು ನನಗೂ ಇಷ್ಟ. ಪ್ರೇಕ್ಷಕರಿಗೂ ಇಷ್ಟವಾದಂತಿದೆ. ಸದ್ಯ ಈಗಿರುವ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ನಿರತಳಾಗಿದ್ದೇನೆ~ ಎನ್ನುತ್ತಾರೆ.

ತಮ್ಮ ನಿಲುವಿನ ಬಗ್ಗೆ ಇಷ್ಟೆಲ್ಲ ಮುಕ್ತವಾಗಿ ಹೇಳಿದಾಗಲೂ ಸೋನಾಕ್ಷಿಗೆ ಅವಕಾಶಗಳ ಕೊರತೆಯಾಗಿಲ್ಲವಂತೆ. ಆ ನಿಟ್ಟಿನಲ್ಲಿ ತಾವು ಅದೃಷ್ಟವಂತರು ಎಂದೂ ಹೇಳಿಕೊಳ್ಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT