ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಕ್ರಮ್ ಸಿಂಗ್ ಭೂ ಸೇನಾ ನೂತನ ಮುಖ್ಯಸ್ಥ

Last Updated 31 ಮೇ 2012, 6:45 IST
ಅಕ್ಷರ ಗಾತ್ರ

ನವದೆಹಲಿ, (ಪಿಟಿಐ): ಪೂರ್ವ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಬಿಕ್ರಮ್ ಸಿಂಗ್ ಗುರುವಾರ ಭಾರತೀಯ ಭೂ ಸೇನೆಯ 25ನೇ ನೂತನ ಮುಖ್ಯಸ್ಥರಾಗಿ ನೇಮಕಗೊಂಡರು.

2010ರ ಮಾಚ್ 31ರಂದು ಭೂಸೇನೆ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡು ಸರ್ಕಾರದೊಂದಿಗೆ ಸಂಘರ್ಷ, ಜನ್ಮ ದಿನಾಂಕ ತಿದ್ದುಪಡಿ, ಪ್ರಧಾನಿಗೆ ಬರೆದ ರಹಸ್ಯ ಪತ್ರ ಸೋರಿಕೆ... ಹೀಗೆ ತಮ್ಮ ಅಧಿಕಾರ ಅವಧಿಯ ಉದ್ದಕ್ಕೂ ಒಂದಾದ ನಂತರ ಒಂದು ವಿವಾದಕ್ಕೆ ಕಾರಣರಾಗುತ್ತಲೇ ಬಂದ ಭೂಸೇನೆ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ (62) ಅವರು ಗುರುವಾರ ತಮ್ಮ 26 ತಿಂಗಳ ಸೇವಾವಧಿಯನ್ನು ಪೂರ್ಣಗೊಳಿಸಿದರು. ಇದರ ಬೆನ್ನಲ್ಲಿಯೇ ಬಿಕ್ರಮ್ ಸಿಂಗ್ ಅವರು ನೇಮಕವಾದರು.

59 ವರ್ಷದ ಪೂರ್ವ ಸೇನಾ ಕಮಾಂಡರ್ ಜನರಲ್ ಬಿಕ್ರಮ್ ಸಿಂಗ್ ಅವರು ವಿ.ಕೆ.ಸಿಂಗ್ ಅವರಿಂದ ಭೂ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. 1.3 ದಶಲಕ್ಷ ಯೋಧರನ್ನು ಒಳಗೊಂಡ ಪ್ರಪಂಚದ ಬಲಿಷ್ಠ ಸೇನೆಗೆ ಅವರು ಎರಡು ವರ್ಷ ಮೂರು ತಿಂಗಳ ಅವಧಿವರೆಗೆ ಮುಖ್ಯಸ್ಥರಾಗಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT