ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕಾರ್ಯಕರ್ತರಿಂದ ಪೂಜೆ, ರಕ್ತದಾನ

ಅಟಲ್ ಬಿಹಾರಿ ವಾಜಪೇಯಿ 89ನೇ ಜನ್ಮ ದಿನಾಚರಣೆ
Last Updated 26 ಡಿಸೆಂಬರ್ 2012, 9:36 IST
ಅಕ್ಷರ ಗಾತ್ರ

ಹಾವೇರಿ: ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕದ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 89ನೇ ಜನ್ಮ ದಿನವನ್ನು ನಗರದಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು.

ವಾಜಪೇಯಿ ಅವರ ಜನ್ಮ ದಿನವಾದ ಮಂಗಳವಾರ ನಗರದ ದೇವಸ್ಥಾನ, ಬಸದಿಗಳಲ್ಲಿ ವಿಶೇಷ ಪೂಜೆ, ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತಲ್ಲದೇ, ರೋಗಿಗಳಿಗೆ ಹಣ್ಣು ಹಂಪಲ, ಅಂಧ ಶಾಲಾ ಮಕ್ಕಳಿಗೆ ಉಚಿತ ಬಟ್ಟೆ ವಿತರಣೆ ಹಾಗೂ ರಕ್ತದಾನ ಶಿಬಿರ ನಡೆಸಲಾಯಿತು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು, ಬೆಳಿಗ್ಗೆ 8 ಘಂಟೆಗೆ ನಗರದ  ಶ್ರೀರಾಮ ದೇವಸ್ಥಾನ, ಹುಕ್ಕೇರಿಮಠ, ಜೈನ ಬಸದಿ, ದಾನೇಶ್ವರಿ, ವೀರಬಧ್ರೇಶ್ವರ ದೇವಸ್ಥಾನಗಳನ್ನು ವಾಜಪೇಯಿ ಅವರ ಹೆಸರಿನಲ್ಲಿ ಅಭಿಷೇಕ, ವಿಶೇಷ ಪೂಜೆಯನ್ನು ಸಲ್ಲಿಸಿದರೆ, ಸೂಲಮಟ್ಟಿಯ ಹಜರತ್ ದಾವಲ್ ಮಲ್ಲಿಕ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.

ನಂತರ ಜಿಲ್ಲಾ ಆಸ್ಪತ್ರೆಗೆ ತೆರಳಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲ ಮತ್ತು ಪಲಾವು ವಿತರಿಸಿದ ಕಾರ್ಯಕರ್ತರು, ಜಿಲ್ಲಾ ಆಸ್ಪತ್ರೆಯಿಂದ ಮೆರವಣಿಗೆ ಮುಖಾಂತರ ವಾಜಪೇಯಿಯವರಿಗೆ ಜಯಘೋಷವನ್ನು ಕೂಗುತ್ತ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿದರಲ್ಲದೇ ಪಟಾಕಿ ಸಿಡಿಸಿ, ಸಿಹಿ ಹಂಚುವುದರ ಮೂಲಕ ವಾಜಪೇಯಿ ಅವರಿಗೆ ಜನ್ಮದಿನ ಶುಭಾಷಯ ಕೋರಿದರು.
ಅಲ್ಲಿಂದ ನೇರವಾಗಿ ನಗರದ ಜ್ಯೋತಿ ಅಂದ ಮಕ್ಕಳ ಶಾಲೆಗೆ ತೆರಳಿದ ಪಕ್ಷದ ಕಾರ್ಯಕರ್ತರು, ಮಕ್ಕಳಿಗೆ ಹಣ್ಣು, ಸಿಹಿ, ಪಲಾವು ಹಾಗೂ ಬಟ್ಟೆಯನ್ನು ವಿತರಿಸಿದರು.

ತದನಂತರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರ ಜನ್ಮ ದಿನ ಸಮಾರಂಭ ಜರುಗಿತು.
ಸಮಾರಂಭದಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ನಾಗೇಂದ್ರ ಕಟಕೋಳ ಮಾತನಾಡಿ, ಜಿಲ್ಲೆಯಲ್ಲಿ ವಾಜಪೇಯಿಯವರ ತತ್ವ ಸಿದ್ಧಾಂತವನ್ನು ಸಾಮಾನ್ಯ ಮತದಾರರಿಗೂ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕೆಂದು ಕರೆ ನೀಡಿದರು.

ಜಿ.ಪಂ. ಮಾಜಿ ಅಧ್ಯಕ್ಷ ಡಾ. ಮಲ್ಲೇಶಪ್ಪ ಹರಿಜನ ಮಾತನಾಡಿ, ವಾಜಪೇಯಿ ಅವರ ಚತುಷ್ಪಥ ರಸ್ತೆ, ಸರ್ವ ಶಿಕ್ಷಣ ಅಭಿಯಾನ, ಮಾಹಿತಿ ತಂತ್ರಜ್ಞಾನ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮುಂತಾದವುಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.

ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿದ್ಧರಾಜ ಕಲಕೋಟಿ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಅವರಂತಹ ಮಹನೀಯರು ಕಟ್ಟಿ ಬೆಳೆಸಿದ ಪಕ್ಷದ ಚಿಹ್ನೆ ಮೇಲೆ ಆಯ್ಕೆಯಾಗಿ ಅಧಿಕಾರವನ್ನುಂಡು ಈಗ ಪಕ್ಷ ವಿರೋಧಿ ಮಾತುಗಳನ್ನಾಡುವ ಮೂಲಕ ವಾಜಪೇಯಿ ಅವರಿಗೆ ಅವಮಾನ ಮಾಡುತ್ತಿದ್ದಾರೆ. ಅಂತವರಿಗೆ ಬರುವ ಚುನಾವಣೆಯಲ್ಲಿ ಕಾರ್ಯಕರ್ತರು ತಕ್ಕ ಪಾಠ ಕಲಿಸಬೇಕೆಂದು ಮನವಿ ಮಾಡಿದರು.

ಜಿಲ್ಲಾ ಮುಖಂಡರಾದ ಜಗದೀಶ ಬಸೇಗಣ್ಣಿ, ಬಸವರಾಜ ಪೇಲನವರ, ದಾವಲ್‌ಸಾಬ ಹಿರೇಮುಗದೂರ ಮುಂತಾದವರು ಮಾತನಾಡಿದರು.
ಪ್ರಮುಖರಾದ ಮಂಜುನಾಥ ಪುಥಲೇಕರ, ಶಿವಲಿಂಗಪ್ಪ ಕಲ್ಯಾಣಿ, ಬಸವರಾಜ ಗೂರಪ್ಪನವರ, ಪಾಲಾಕ್ಷಗೌಡ ಪಾಟೀಲ, ನಿಂಗಣ್ಣ ಚಳಗೇರಿ, ಮಂಜುಳಾ ಕರಬಸಮ್ಮನವರ, ಲಲಿತಾ ಗುಂಡೇನಹಳ್ಳಿ, ಎಸ್ ಎಸ್ ಖಾಜಿ, ರಫಿಕ್, ಬ್ರಮರಾಂಬಾ ಯಾವಗಲ್‌ಮಠ, ಸೌಭಾಗ್ಯ ಹಿರೇಮಠ, ದಾನಪ್ಪ ಹೂಗಾರ, ರುದ್ರಮುನಿ ಹಿರೇಮಠ, ಶಂಬಣ್ಣ ಗುಂಜಾಳ್, ಆರ್ ಕೆ ದೇಸಾಯಿ, ಬಿ ಎನ್ ಮತ್ತುರ್, ರಮೇಶ ಪಾಲನಕರ, ಚೇತನಾ ಗೂರಪ್ಪನವರ, ಶಶಿಕಲಾ ಚನ್ನಯ್ಯ ಮಠದ, ಭಾಗ್ಯಮ್ಮ ಹಿರೇಮಠ, ಮಾಲತಿ ಪಲ್ಲೇದ, ಗೌರವ್ವ ಬಾರ್ಕಿ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.
ಗಂಗಾಧರ ಮಲೇಬೆನ್ನೂರ ಸ್ವಾಗತಿಸಿದರು. ಪ್ರಭು ಹಿಟ್ನಳ್ಳಿ ವಂದಿಸಿದರು.

ರಕ್ತದಾನ ಶಿಬಿರ: ವಾಜಪೇಯಿ ಅವರ ಜನ್ಮ ದಿನದ ಅಂಗವಾಗಿ ಪಕ್ಷದ ಕಾರ್ಯಾಲಯದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಪಕ್ಷದ 11 ಜನ ಕಾರ್ಯಕರ್ತರು ರಕ್ತದಾನ ಮಾಡಿದರು.ಜಿಲ್ಲಾ ರಕ್ತ ಭಂಡಾರದ ವೈದ್ಯಾಧಿಕಾರಿ ಡಾ ಎನ್. ಮುರಳಿಧರ ಹಾಜರಿದ್ದರು.

ರಾಣೆಬೆನ್ನೂರು ವರದಿ
ರಾಣೆಬೆನ್ನೂರು
: `ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ದೇಶದ ರಾಜಕೀಯ ಇತಿಹಾಸದಲ್ಲಿ ಕಳಂಕ ರಹಿತ ವ್ಯಕ್ತಿ. ಗಂಗಾ ನದಿಯಯ ನೀರನ್ನು ದಕ್ಷಿಣಕ್ಕೆ ಹರಿಸುವ ಕನಸುಗಾರಾಗಿದ್ದು, ಇಂದಿನ ಯುವ ಪೀಳಿಗೆಗೆಅವರ ನಡೆ ದಾರಿ ದೀಪವಾಗಲಿ' ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಬಸವರಾಜ ಕೇಲಗಾರ ಹೇಳಿದರು.

ನಗರದ ಬಸ್ ನಿಲ್ದಾಣ ರಸ್ತೆಯ ಬಿಜೆಪಿ ನೂತನ ಕಾರ್ಯಾಲಯದಲ್ಲಿ ಮಂಗಳವಾರ ಅಟಲ್ ಬಿಹಾರಿ ವಾಜಪೆಯಿಯವರ 89ನೇಯ ಜನ್ಮ ದಿನ ಹಾಗೂ ನೂತನ ಬಿಜೆಪಿ ಕಛೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಾಜಪೇಯಿ ಹಾಗೂ ಇನ್ನಿತರೆ ಮಹಾನ್ ನಾಯಕರ ಜನ್ಮ ದಿನ ಆಚರಿಸಿದರೆ ಸಾಲದು ಅವರ ತತ್ವಾದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಕಾರ್ಯರೂಪಕ್ಕೆ ತಂದಾಗ ಸಾರ್ಥಕವಾಗುತ್ತದೆ ಎಂದರು.

ಜಿ.ಪಂ. ಸದಸ್ಯ ಮಂಜುನಾಥ ಓಲೇಕಾರ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಪೂಜಾರ, ಮಹಿಳಾ ಮೊರ್ಚಾದ ಜಿಲ್ಲಾ ಘಟಕದ ಅಧ್ಯಕ್ಷೆ ಭಾರತಿ ಜಂಬಿಗಿ, ನಗರಸಭಾ ಸದಸ್ಯರಾದ ವೀರಣ್ಣ ಅಂಗಡಿ, ಮಂಜುನಾಥ ಗೌಡಶಿವಣ್ಣನವರ, ವೆಂಕಟೇಶ ಏಕಬೋಟೆ, ವಿಶ್ವನಾಥ ಹೊಳೆಬಾಗಿ, ಎಸ್.ಎಲ್. ಪವಾರ ಮತ್ತಿತರರು ಮಾತನಾಡಿದರು.

ರಾಜಶೇಖರಯ್ಯ ಸುರಳೀಕೇರಿಮಠ, ಥಾನಮಲ್ ಜೈನ್, ಕರಬಸ್ಪ ಏಕಬೋಟೆ, ನೀಲಪ್ಪ ಕುಮಾರೆಪ್ಪನವರ, ದೀಪಕ ಹರಪನಹಳ್ಳಿ, ಕಿರಣ ಅಂಗಡಿ, ಚಂದ್ರಪ್ಪ ಊದಗಟ್ಟಿ, ಅಲ್ತಾಫ್ ಸೌದಾಗರ, ಕೃಷ್ಣ ಬತ್ತಲ, ಮರಡೆಪ್ಪ ಪೂಜಾರ, ಡಾ. ಸಂಜಯ್ ನಾಯಕ, ದೇವರಾಜ, ಶಿವಕುಮಾರ ನರಸಗೊಂಡರ, ಪಾರ್ವತಿ ಹೊಸಮನಿ, ಗಂಗಮ್ಮ ಹಾವನೂರ, ಗೀತಾ ಜಂಬಿಗಿ, ನಗರಸಭಾ ಸದಸ್ಯ ವೀರಣ್ಣ ಅಂಗಡಿ, ಮಂಜುನಾಥ ಗೌಡಶಿವಣ್ಣನವರ, ಬಸವರಾಜ ಲಕ್ಷ್ಮೇಶ್ವರ, ಕಿರಣ ಅಂಗಡಿ, ಎಸ್.ಎಲ್. ಪವಾರ, ಆರ್.ಕೆ. ಮೆಹರವಾಡೆ, ವಿಶ್ವನಾಥ ಹೊಳಬಾಗಲ, ಪ್ರಕಾಶ ಸನ್ನೇರ, ಕೃಷ್ಣಮೂರ್ತಿ ಬಣಕಾರ, ಚಂದ್ರಪ್ಪ ಅಕ್ಕಿ, ಬಸವರಾಜ ಬಳ್ಳಾರಿ, ತಿರ್ಕುಸಿಂಗ್ ಪಾಟೀಲ, ಹೇಮಣ್ಣ ಬುರಡೀಕಟ್ಟಿ, ರೂಪಾ ನಾಯಕ, ಚಂದ್ರಗೌಡ ಪಾಟೀಲ, ಗಂಗಾಧರ ಮಲೆಬೆನ್ನೂರ, ಚಿತ್ರಪ್ಪ ಬೆಲ್ಲದ, ರುದ್ರಪ್ಪ ದಾನಪ್ಪನವರ, ಮಲ್ಲಿಕಾರ್ಜುನ ಪೂಜಾರ, ಸಚಿನ ದಾನಪ್ಪನವರ, ಪ್ರಕಾಶ ನಾಯಕ, ಕುಮಾರ ಜಂಬಿಗಿ, ಮತ್ತಿತರರು ಉಪಸ್ಥಿತರಿದ್ದರು.

ಬ್ಯಾಡಗಿ ವರದಿ
ಬ್ಯಾಡಗಿ:
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ರಾಷ್ಟ್ರೀಯ ಹೆದ್ದಾರಿಗಳನ್ನು ಚತುಸ್ಪಥ ರಸ್ತೆಗಳನ್ನಾಗಿ ಪರಿವರ್ತಿಸುವ ಹಾಗೂ ನದಿ ಜೋಡನೆಯಂತಹ ಕಾರ್ಯಕ್ಕೆ ಚಾಲನೆ ನೀಡುವ ಮೂಲಕ ರೈತರು, ಬಡವರು ಹಾಗೂ ದೀನದಲಿತರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಮಹಾನ್ ವ್ಯಕ್ತಿ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು.

ಭಾನುವಾರ ಪಟ್ಟಣದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ 89ನೇ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೂರ ದೃಷ್ಠಿ ಹಾಗೂ ಉನ್ನತ ವಿಚಾರವಾದಿಯಾಗಿದ್ದ ವಾಜಪೇಯಿ ಎನ್‌ಡಿಎ ಒಕ್ಕೂಟದ ಪ್ರಧಾನ ಮಂತ್ರಿಯಾಗಿ ಕಳಂಕ ರಹಿತ ಆಡಳಿತ ನಡೆಸಿದರು. ವಿಶ್ವಸಂಸ್ಥೆಯಲ್ಲಿ ಹಿಂದಿ ಭಾಷೆಯಲ್ಲಿ ಭಾರತೀಯರ ವಿಚಾರ ಮಂಡಿಸುವ ಮೂಲಕ ದೇಶದ ಉನ್ನತಿಯನ್ನು ಹೆಚ್ಚಿಸಿದ್ದ ಮಹಾನ್ ಚೇತನರಾಗಿದ್ದಾರೆ. ಇಂತಹ ವ್ಯಕ್ತಿಯ ತತ್ವ ಹಾಗೂ ಆದರ್ಶಗಳು ಇಂದಿನ ಯುವ ಜನಾಂಗಕ್ಕೆ ದಾರಿದೀಪವಾಗಿವೆ ಎಂದರು.

ಧಾರವಾಡ ಕೆಎಂಎಫ್ ಬಸವರಾಜ ಅರಬಗೊಂಡ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ಉಕ್ಕುಂದ, ಜಯಣ್ಣ ಮಲ್ಲಿಗಾರ, ಚಂದ್ರಣ್ಣ ಆಲದಗೇರಿ, ಶಂಭಣ್ಣ ಬಿದರಿ, ಗಂಗಣ್ಣ ಎಲಿ, ಶಂಕರಗೌಡ ಪಾಟೀಲ, ಯಸೂಫ್‌ಸಾಬ್ ಬೇಪಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ತಾ.ಪಂ ಉಪಾಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಂ.ಕೆ. ದೊಡ್ಮನಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT