ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಜಯ: ಷೇರುಪೇಟೆಗೆ ಬಲ

Last Updated 8 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿರುವ ಕಾರಣ ಈ ವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ದಾಖಲೆ ಏರಿಕೆ ಕಾಣಬಹುದು ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ.

‘ಮತಗಟ್ಟೆ ಸಮೀಕ್ಷೆಯಲ್ಲಿ  ‘ಬಿಜೆಪಿ’ ಜಯದ ಸಾಧ್ಯತೆ ಹೊರಬಿದ್ದಾಗಲೇ ಸೂಚ್ಯಂಕ 21 ಸಾವಿರ ಅಂಶಗಳ ಗಡಿ ದಾಟಿತ್ತು. ಈಗ ಜಯ ಖಚಿತ­ವಾಗಿರುವ ಹಿನ್ನೆಲೆ­ಯಲ್ಲಿ ಅಲ್ಪಾವಧಿ­ಯಲ್ಲಿ ಇದು  ಷೇರುಪೇಟೆಗೆ ದೊಡ್ಡ ಪ್ರಮಾಣದಲ್ಲಿ ಉತ್ತೇಜನ ನೀಡಲಿದೆ. ‘ಗುಜರಾತ್‌ ಮಾದರಿ ಆರ್ಥಿಕ ಅಭಿವೃದ್ಧಿ’ ಬಗ್ಗೆ ಹೂಡಿಕೆದಾರರು ಕೂಡ ವಿಶ್ವಾಸ ಹೊಂದಿದ್ದಾರೆ’ ಎಂದು ಆಶಿಕಾ ಸ್ಟಾಕ್‌ ಬ್ರೊಕರ್ಸ್‌ ಸಂಸ್ಥೆ ಮುಖ್ಯಸ್ಥ ಪರಾಸ್‌ ಭೊತ್ರಾ ಅಭಿಪ್ರಾಯ­ಪಟ್ಟಿದ್ದಾರೆ.

‘ಕಾಂಗ್ರೆಸ್‌ ಅಥವಾ ಬಿಜೆಪಿ ಪಕ್ಷದ ಜಯ ಷೇರುಪೇಟೆ ವಹಿವಾಟು ನಿರ್ಧರಿಸು­ವುದಿಲ್ಲ. ಹೂಡಿಕೆದಾರರಿಗೆ ಬೇಕಿರು­ವುದು ಸ್ಥಿರ ಸರ್ಕಾರ. ಈಗಿರುವ ಸರ್ಕಾರ ಕೈಗೆತ್ತಿಕೊಂಡಿರುವ ಆರ್ಥಿಕ ಸುಧಾ­ರಣಾ ಕ್ರಮಗಳು ಮಂದ­ಗತಿ­ಯ ಲ್ಲಿವೆ ಎಂಬ ಆರೋಪ ಪ್ರಮುಖ­ವಾ ಗಿದೆ’ ಎಂದು ಇನಾಂ ಫೈನಾನ್ಷಿ­ಯಲ್ಸ್‌ನ ವಲ್ಲಭ್‌ ಬನ್ಸಾಲಿ ಹೇಳಿದ್ದಾರೆ.

ಅಕ್ಟೋಬರ್‌ನಲ್ಲಿನ ಕೈಗಾರಿಕಾ ಪ್ರಗತಿ ಸೂಚ್ಯಂಕ(ಐಐಪಿ), ಗ್ರಾಹಕ ಬೆಲೆ ಸೂಚ್ಯಂಕ(ಸಿಪಿಐ) ಆಧರಿಸಿದ ಹಣದು ಬ್ಬರ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಡಿ. 18­ರಂದು ಪ್ರಕ ಟಿಸಲಿರುವ ಹಣ­ಕಾಸು ನೀತಿ ಕೂಡ ಷೇರುಪೇಟೆ ವಹಿವಾಟಿನ ಗತಿ ನಿರ್ಧರಿಸ ಲಿವೆ ಎಂದು ಆಗ್ಮೆಂಟ್‌ ಫೈನಾನ್ಷಿಯಲ್‌ ಸರ್ವಿಸಸ್‌ ‘ಸಿಇಒ’  ಗಜೇಂದ್ರ ನಾಗ್‌ ಪಾಲ್‌ ಅಭಿಪ್ರಾಯ­ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT