ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ದೂರ ಇಡಲು ಮುಸ್ಲಿಂ ಮುಖಂಡರ ತೀರ್ಮಾನ

Last Updated 13 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದ ಬುನಾದಿಯನ್ನು ದುರ್ಬಲ­ಗೊಳಿಸಲು ಪಿತೂರಿ ನಡೆಸಿ­ರುವ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳಿಂದ ಮುಸ್ಲಿಮರು ಮತ್ತು ನಮ್ಮ ಇತರ ಸಹೋದರರು ದೂರವಿರಬೇಕು ಎಂದು ಕೋರಲು’ ಅಮೀರ್‌ ಎ ಷರಿ­ಯತ್‌ನ ರಾಜ್ಯ ಘಟಕದ ಮುಖಂಡ ಮೌಲಾನಾ ಮುಫ್ತಿ ಮಹ­ಮದ್‌ ಅಶ್ರಫ್‌ ಆಲಿ ಬಕ್ವಿ ಅವರ ನೇತೃತ್ವದಲ್ಲಿ ನಡೆದ ವಿವಿಧ ಮುಸ್ಲಿಂ ಸಂಘಟನೆಗಳ ಸಭೆ ನಿರ್ಣಯ ಕೈಗೊಂಡಿದೆ.

‘ಬಿಜೆಪಿ ತನ್ನ ಚುನಾವಣಾ ಪ್ರಣಾ­ಳಿಕೆ­­ಯಲ್ಲಿ, ಸಮಾನ ನಾಗರಿಕ ಸಂಹಿತೆ ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬದ್ಧವಾ­ಗಿ­ರು­ವುದಾಗಿ ಹೇಳಿದೆ.

ಈ ನಿಲುವು ಸಂವಿ­ಧಾನಕ್ಕೆ ವಿರುದ್ಧ, ಮುಸ್ಲಿಂ ವೈಯಕ್ತಿಕ ಕಾನೂನು ಮತ್ತು ಇಸ್ಲಾ­-ಮಿಕ್ ಷರಿ­ಯಾಕ್ಕೆ ವಿರುದ್ಧ. ದೇಶವನ್ನು ಮತ್ತೆ ವಿಭ­ಜನೆ­ಯತ್ತ ಕೊಂಡೊಯ್ಯುವ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಕುರಿತು ದೇಶದ ಶಾಂತಿಪ್ರಿಯ ನಾಗರಿ­ಕರು ಎಚ್ಚರ ವಹಿಸಬೇಕು’ ಎಂದು ನಿರ್ಣಯದಲ್ಲಿ ಹೇಳಲಾಗಿದೆ. ಟಿಪ್ಪು ಸುಲ್ತಾನ್‌ ಸಂಯುಕ್ತ ರಂಗ ಸೇರಿದಂತೆ ವಿವಿಧ ಮುಸ್ಲಿಂ ಸಂಘಟನೆಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT