ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಗೆಲುವು

Last Updated 10 ಫೆಬ್ರುವರಿ 2011, 9:05 IST
ಅಕ್ಷರ ಗಾತ್ರ

ಕೊಪ್ಪ: ತಾಲ್ಲೂಕಿನ ಹೇರೂರು ಗ್ರಾಮ ಪಂಚಾಯಿತಿಯ 16 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿ ದಾಖಲೆ ನಿರ್ಮಿಸಿದ್ದಾರೆ.ಗ್ರಾಮ ಪಂಚಾಯಿತಿಯ 16 ಸ್ಥಾನಗಳಿಗೆ ಇದೇ ತಿಂಗಳ 6 ರಂದು ಚುನಾವಣೆ ನಡೆದಿತ್ತು. ತಾಲ್ಲೂಕು ಕಚೇರಿಯಲ್ಲಿ ಬುಧವಾರ ಮತ ಎಣಿಕೆ ಕಾರ್ಯ ನಡೆಯಿತು. ಹೇರೂರು ಕ್ಷೇತ್ರದಿಂದ ಸುಧಾಕರ್, ಸಿ.ವಿ.ನಟರಾಜ್, ಕೆ.ಎಸ್.ಪ್ರೇಮಾ, ಶಾಂತಾ, ಸುನಂದಾ, ದೇವಗೋಡು ಕ್ಷೇತ್ರದಿಂದ ಡಿ.ಎನ್.ಜಗದೀಶ್, ರಾಧಾ, ಪಾರ್ವತಿ, ವಿನೋದಾ, ವಿನೋಧಿನಿ, ಎಲೆಮಡಲು ಕ್ಷೇತ್ರದಿಂದ ಶಂಕರ, ಬಾಲಚಂದ್ರ, ಸಂಜೀವ, ಶಾಂತಾ, ಮೈನಾ, ಸ್ಥಿರೂರು ಕ್ಷೇತ್ರದಿಂದ ವಿಠಲ ಆಯ್ಕೆಯಾದರು.

ಕಳೆದ ಬಾರಿ ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದ ಸಂಜೀವ ಹಾಗೂ ಬಾಲಚಂದ್ರ ಪುನರಾಯ್ಕೆಯಾಗಿ ಗಮನ ಸೆಳೆದಿದ್ದಾರೆ. ಕಳೆದ ಬಾರಿ ಪಂಚಾಯಿತಿಯ 15 ಸ್ಥಾನ ಜೆಡಿಎಸ್ ಹಾಗೂ ಒಂದು ಸ್ಥಾನ ಕಾಂಗ್ರೆಸ್ ಪಾಲಾಗಿತ್ತು. ಈ  ಭಾಗದ ಪ್ರಮುಖ ಜೆಡಿಎಸ್ ನಾಯಕ ಕುಕ್ಕುಡಿಗೆ ರವೀಂದ್ರ ಬಿಜೆಪಿ ಸೇರ್ಪಡೆಯೊಂದಿಗೆ ಪಂಚಾಯಿತಿ ಸದಸ್ಯರೆಲ್ಲ ಬಿಜೆಪಿ ಪಕ್ಷ ಸೇರಿದ್ದರು. 

 ಕಳೆದ ಬಾರಿ ಆಯ್ಕೆಯಾಗಿದ್ದ ಸದಸ್ಯರ ಪ್ರಾಮಾಣಿಕ ಸೇವೆಯಿಂದ ಜನ ಬೆಂಬಲ ನೀಡಿದ್ದಾರೆ. ಐದು ವರ್ಷದ ಹಿಂದಿನ ಬೆಂಬಲವನ್ನು ಉಳಿಸಿಕೊಂಡು ಮುಂದುವರೆಯಲು ಬಿಜೆಪಿ ಪಕ್ಷ ಸಮರ್ಥವಾಗಿದೆ ಎಂದು ಜಿ.ಪಂ.ಸದಸ್ಯ ಕುಕ್ಕುಡಿಗೆ ರವೀಂದ್ರ ಹೇಳಿದರು.  ಮತ ಎಣಿಕೆ ಕಾರ್ಯ ಬೆಳಿಗ್ಗೆ 8 ರಿಂದ ಆರಂಭವಾಗಿ 4 ಗಂಟೆವರೆಗೆ ಮುಂದುವರೆದಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅಭ್ಯರ್ಥಿಗಳು ತಾಲ್ಲೂಕು ಆಡಳಿತ ಚುರುಕಿನ ಮತ ಎಣಿಕೆ ಕಾರ್ಯಮಾಡುವಲ್ಲಿ ವಿಫಲವಾಗಿದೆ ಎಂದು ದೂರಿದರು.

ಅಜ್ಜಂಪುರ ಗ್ರಾ.ಪಂ: ವಿಜೇತರು
ಅಜ್ಜಂಪುರ: ಇಲ್ಲಿನ ಗ್ರಾಮ ಪಂಚಾಯಿತಿಯ 9 ವಾರ್ಡ್‌ಗಳಿಗೆ ಇದೇ ತಿಂಗಳ 6ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ.  9 ವಾರ್ಡ್‌ಗಳ 26 ಜನ ನೂತನ ಸದ ಸ್ಯರ ವಿವರ ಕೆಳಗಿನಂತಿದೆ.  1ನೇ ವಾರ್ಡ್: ಸೀತಮ್ಮ ಶ್ರೀನಿವಾಸ್, ಎ.ಸಿ. ಚಂದ್ರ ಪ್ಪ, ಟಿ. ಮಂಗಳ. 2ನೇ ವಾರ್ಡ್: ಲಕ್ಷ್ಮಿ, ಜಯಮ್ಮ, ಶಿವಾನಂದ್, ಕೃಷ್ಣಪ್ಪ, ಶಾವರಿಬೇಗಂ. 3ನೇ ವಾರ್ಡ್: ಕುಮಾರಪ್ಪ, ಬಿ.ಹೇಮಾವತಿ, ಮಂಜುಳ. 4ನೇ ವಾರ್ಡ್: ಶಂಕರ್, ನಟ ರಾಜ್, ಚಿತ್ರಾವತಿ. 5ನೇ ವಾರ್ಡ್: ನಾಗ ರತ್ನಮ್ಮ, ಜೋಗಿಪ್ರಕಾಶ್. 6ನೇ ವಾರ್ಡ್: ಶಿವಕುಮಾರ್, ಸಾವಿತ್ರಮ್ಮ. 7ನೇ ವಾರ್ಡ್: ಅನ್ನಪೂರ್ಣ ಬಸವರಾಜ್, ಭದ್ರಪ್ಪ, 8ನೇ ವಾರ್ಡ್: ರಂಗಸ್ವಾಮಿ, ಇಂದ್ರಮ್ಮ, ಬಿ. ಮಂಜುಳ. 9ನೇ ವಾರ್ಡ್: ಮೋಹನ್ ದಾಸ್, ಗೀತಾ ಆಯ್ಕೆಯಾಗಿದ್ದಾರೆ.

ಕುಂದೂರು ಗ್ರಾ.ಪಂ: ವಿಜೇತರು
ಮೂಡಿಗೆರೆ: ತಾಲ್ಲೂಕಿನ ಕುಂದೂರು ಗ್ರಾಮ ಪಂಚಾಯಿತಿಗೆ ಕಳೆದ ಭಾನುವಾರ ಚುನಾವಣೆ ನಡೆದಿದ್ದು, ಬುಧವಾರ ತಾಲ್ಲೂಕು ಕಚೇರಿಯಲ್ಲಿ ಮತ ಎಣಿಕೆ ಮಾಡಲಾಯಿತು.ಕುಂದೂರು ಒಂದನೇ ವಾರ್ಡ್‌ನಲ್ಲಿ 3 ಸ್ಥಾನಗಳಿಗೆ 5 ಜನರು ಸ್ಪರ್ಧಿಸಿದ್ದು, ವಿಜೇತರು: ನಾರ್ಬಟ್ ಸಾಲ್ಡಾನ (653 ಮತ),ರೇವತಿ ಸುಬ್ಬಯ್ಯ (396), ಕೆ.ಟಿ.ಸರೋಜಾ (420) ಮತ ಪಡೆದಿದ್ದಾರೆ.

ಕುಂದೂರು ಎರಡನೇ ವಾರ್ಡ್‌ನಲ್ಲಿ 3 ಸ್ಥಾನಗಳಿಗೆ 6 ಜನರು ಸ್ಪರ್ಧಿಸಿದ್ದು, ವಿಜೇತರು: ಶಕುಂತಲ (209),ಲಲಿತ (270),ಲಕ್ಷಮ್ಮ(243) ಮತ ಪಡೆದಿದ್ದಾರೆ.
ಒಟ್ಟು ಆರು ಸ್ಥಾನಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಬೆಂಬಲಿತರಿಗೆ 3 ಸ್ಥಾನ, ಬಿಜೆಪಿ ಬೆಂಬಲಿತರಿಗೆ 3 ಸ್ಥಾನ ಲಭಿಸಿವೆ.ಚುನಾವಣಾಧಿಕಾರಿ ಬಿ.ಎಲ್.ಶರಶ್ಚಂದ್ರ, ಸಹಾಯಕ ಚುನಾವಣಾಧಿಕಾರಿ ಬಿ.ಆರ್.ರಮೇಶ್, ತಹಸೀಲ್ದಾರ್ ಶಿವೇಗೌಡ, ಶಿರಸ್ತೇದಾರ್ ಮುನೀರ್ ಅಹಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT