ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮುಖಂಡನ ಹತ್ಯೆ: ತನಿಖೆಗೆ ಆದೇಶ

Last Updated 21 ಜುಲೈ 2013, 19:59 IST
ಅಕ್ಷರ ಗಾತ್ರ

ಚೆನ್ನೈ ( ಪಿಟಿಐ): ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವಿ.ರಮೇಶ್ ಅವರ ಬರ್ಬರ ಹತ್ಯೆ ಪ್ರಕರಣದ ತನಿಖೆಗೆ ಮುಖ್ಯಮಂತ್ರಿ ಜಯಲಲಿತಾ ಅವರು ಪೊಲೀಸ್ ಮಹಾನಿರ್ದೇಶಕರ ಅಧೀನದಲ್ಲಿ ವಿಶೇಷ ತನಿಖಾ ವಿಭಾಗ ರಚಿಸಿದ್ದಾರೆ.

` ಇದೊಂದು ಪೈಶಾಚಿಕ ಕೃತ್ಯ. ರಾಜಕೀಯ ಪ್ರೇರಿತವಾಗಿದ್ದರೂ ಸರಿ, ಯಾವುದೇ ರೀತಿಯ ಹಿಂಸೆ, ಅಪರಾಧಗಳಿಗೆ ನಾಗರಿಕ ಸಮಾಜದಲ್ಲಿ ಜಾಗವಿಲ್ಲ. ಸಮಾಜ ವಿರೋಧಿ ಶಕ್ತಿಗಳನ್ನು ದಮನ ಮಾಡಬೇಕು' ಎಂದು ಜಯಲಲಿತಾ ಹೇಳಿದ್ದಾರೆ.

ಆತ್ಮಾಹುತಿ ಯತ್ನ:  ಸೇಲಂ ಹಾಗೂ ಧರ್ಮಪುರಿ ಜಿಲ್ಲೆಗಳ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಅವರು ವಿ.ರಮೇಶ್ ಹತ್ಯೆಗೆ ಮನನೊಂದು ಆತ್ಮಾಹುತಿಗೆ ಯತ್ನಿಸಿ ಗಂಭೀರವಾಗಿ ಗಾಯಗೊಂಡಿದ್ದಾರೆ.

`ರಮೇಶ್ ಹತ್ಯೆ ಸುದ್ದಿ ಕೇಳಿದಾಗಿನಿಂದ ಅವರು ಉಪವಾಸ ಇದ್ದರು' ಎಂದು ಸೇಲಂ ಡಿಸಿಪಿ ಎ.ಬಾಬು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT