ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮುಸ್ಲಿಂ-ದಲಿತ ದ್ವೇಷಿಯಲ್ಲ

Last Updated 6 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): `ಬಿಜೆಪಿ ಎಂದಿಗೂ ಮುಸ್ಲಿಂ ಅಥವಾ ದಲಿತರ ವಿರೋಧಿಯಾಗಿರಲಿಲ್ಲ. ಆದರೆ, ತಮ್ಮ ಪಕ್ಷಕ್ಕೆ `ಮುಸ್ಲಿಂ ಮತ್ತು ದಲಿತ ವಿರೋಧಿ~ ಎಂಬ ಹಣೆಪಟ್ಟಿ ಹಚ್ಚಲಾಯಿತು~ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಶನಿವಾರ ಕಳವಳ ವ್ಯಕ್ತಪಡಿಸಿದರು.

ಬಿಜೆಪಿ ಮಹಿಳಾ ಮೋರ್ಚಾ ಮತ್ತು ಆಡಳಿತ ನಿರ್ವಹಣಾ ಘಟಕ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪಕ್ಷಕ್ಕೆ ಅಂಟಿಸಲಾಗಿರುವ ಹಣೆಪಟ್ಟಿಯನ್ನು ತೆಗೆದು ಹಾಕಲು ಕಾರ್ಯಕರ್ತರು ಶ್ರಮಿಸಬೇಕು ಎಂದರು.

`ನಾವು ಕೋಮುವಾದಿ ಅಥವಾ ಜಾತಿವಾದಿಗಳಲ್ಲ. ದಲಿತ ಮತ್ತು ಮುಸ್ಲಿಂ ವಿರೋಧಿಗಳಲ್ಲ. ಮಹಿಳೆಯರು ಮತ್ತು ಬುಡಕಟ್ಟು ಜನಾಂಗ, ಆದಿವಾಸಿಗಳು ಸೇರಿದಂತೆ ಎಲ್ಲರ ಶ್ರೇಯ ಬಯಸುತ್ತೇವೆ. ಆದರೂ ಬಿಜೆಪಿ ಅಪಪ್ರಚಾರಕ್ಕೆ ತುತ್ತಾಗಿರುವುದು ದುರ್ದೈವ~ ಎಂದು ವಿಷಾದ ವ್ಯಕ್ತಪಡಿಸಿದರು.    

 ಸಮರ್ಥನೆ: ವಿವಾದಿತ ಗೋಸಿಖುರ್ದ್ ನೀರಾವರಿ ಯೋಜನೆಯನ್ನು ಬೇಗ ಮುಗಿಸುವಂತೆ ತಾವೊಬ್ಬರೆ ಅಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಮತ್ತು ಕಾಂಗ್ರೆಸ್ ಮುಖ್ಯಸ್ಥ ಮಾಣಿಕ್‌ರಾವ್ ಠಾಕ್ರೆ ಕೂಡ ಪತ್ರ ಬರೆದಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿದ್ದಾರೆ.

`ನನ್ನ ಕ್ಷೇತ್ರದಲ್ಲಿಯೇ ಇರುವ ಈ ಯೋಜನೆ ವಿಳಂಬವಾಗುತ್ತಿರುವುದಾಗಿ ಜನರು ನನ್ನ ಬಳಿ ದೂರು ತಂದಿದ್ದರು. ಹೀಗಾಗಿ ನಾನು ಪತ್ರ ಬರೆದಿದ್ದೆ. ಇದು ದೊಡ್ಡ ಅಪರಾಧವೇ~ ಎಂದು ಅವರು ಪ್ರಶ್ನಿಸಿದ್ದಾರೆ.

ಬಿಜೆಪಿ ಆರ್ಥಿಕ ಘಟಕದ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, `ಮಹಾರಾಷ್ಟ್ರದಿಂದ ಆಯ್ಕೆಯಾಗಿರುವ ಕೇಂದ್ರ ಸಚಿವ ಮುಕುಲ್ ವಾಸ್ನಿಕ್ ಸೇರಿದಂತೆ ಅನೇಕ ಕಾಂಗ್ರೆಸ್ ಸಂಸದರು, ಶಾಸಕರು ಯೋಜನೆಯನ್ನು ಬೇಗ ಪೂರ್ಣಗೊಳಿಸುವಂತೆ ಕೋರಿ ಪತ್ರ ಬರೆದಿದ್ದಾರೆ~ ಎಂದರು.

`ಯೋಜನೆಯ ಗುತ್ತಿಗೆದಾರರ ಜತೆ ಗಡ್ಕರಿ ಅವರಿಗೆ ಸಂಬಂಧವಿರುವ ಕಾರಣದಿಂದಲೇ ಅವರು ಈ ರೀತಿಯ ಪತ್ರ ಬರೆದಿದ್ದಾರೆ. ಅವರೇ ಅಧ್ಯಕ್ಷರಾಗಿ ಮುಂದುವರೆದರೆ ಬಿಜೆಪಿ ತನ್ನ ಗೋರಿಯನ್ನು ತಾನೇ ತೋಡಿಕೊಂಡಂತೆ~ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಶುಕ್ರವಾರ ಟೀಕಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT