ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಶಾಸಕರಿಂದ ಮೋಜು: ಆರೋಪ

Last Updated 22 ಫೆಬ್ರುವರಿ 2012, 9:15 IST
ಅಕ್ಷರ ಗಾತ್ರ

ಮುಂಡರಗಿ: ಬರಗಾಲದಿಂದಾಗಿ ರಾಜ್ಯದ ಜನಸಾಮಾನ್ಯರು ತತ್ತರಿಸುತ್ತಿದ್ದು, ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರಕಾರವು ಆಡಳಿತವನ್ನು ಸಂಪೂರ್ಣವಾಗಿ ಕಡೆಗಣಿಸಿ, ವಿಧಾನ ಸಭೆಯಲ್ಲಿ ನೀಲಿ ಚಿತ್ರ ನೋಡುತ್ತಾ ಮೋಜು ಮಾಡಲು ಹಾತೊರೆಯುತ್ತಲಿದೆ~ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಜಿ. ವಡ್ಡಟ್ಟಿ ದೂರಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಬರಗಾಲ ನಿರ್ವಹಣೆ ಕುರಿತಂತೆ ಸರಕಾರ ಕೇವಲ ಅಂಕಿ ಅಂಶಗಳನ್ನು ನೀಡಿ ಕೈತೊಳೆದುಕೊಳ್ಳುತ್ತಲಿದ್ದು, ವಾಸ್ತವವಾಗಿ ರಾಜ್ಯದಲ್ಲಿ ಯಾವುದೇ ಬರಗಾಲ ಕಾಮಗಾರಿಯನ್ನು ಜಾರಿಗೆ ತಂದಿಲ್ಲ~ ಎಂದು ಆರೋಪಿಸಿದರು.

ಬಡ ಜನತೆಯ ಉದ್ಧಾರಕ್ಕಾಗಿ ಈಗಾಗಲೇ ಜಾರಿಗೆ ತಂದಿದ್ದ ವಿಧವಾ ಮಾಸಾಶನ, ವೃದ್ಧಾಪ್ಯ ವೇತನ, ಅಂಗವಿಕಲ ವೇತನ ಮೊದಲಾದವುಗಳನ್ನು ಕಡಿತಗೊಳಿಸಿ ಜಿಲ್ಲೆಯ ಕೆಲವೇ ಕೆಲವು ಜನರಿಗೆ ಅವುಗಳನ್ನು ಸೀಮಿತಗೊಳಿಸಿದ್ದು, ಅರ್ಹ ಫಲಾನುಭವಿಗಳಿಗೆ ತೊಂದರೆಯಾಗಲಿದೆ. ಸರಕಾರ ಅದನ್ನು ಪುನರ್ ಪರಿಶೀಲಿಸಿ ರಾಜ್ಯದ ಎಲ್ಲ ಬಡ ಜನತೆಗೆ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು~ ಎಂದು ಆಗ್ರಹಿಸಿದ್ದಾರೆ.

`ದಾವಣಗೆರೆಯಲ್ಲಿ ಏಪ್ರಿಲ್ 22ರಂದು ಜರುಗಲಿರುವ `ನವ ಶಕ್ತಿಯ ಸಂಚಲನ, ದಾವಣಗೇರಿಯಲ್ಲಿ ಮಿಲನ; ಅದೇ ಜೆಡಿಎಸ್‌ನ ಯುವ ಚೇತನ~ ಎಂಬ ಜೆಡಿಎಸ್ ಯುವ ಸಮಾವೇಶದಲ್ಲಿ ಪಾಲ್ಗೊಳ್ಳುವ ಕುರಿತಂತೆ ಇದೇ  25ರಂದು ಮುಂಜಾನೆ 11ಗಂಟೆಗೆ ಸ್ಥಳೀಯ ಪುರಸಭೆ ಗಾಂಧಿ ಭವನದಲ್ಲಿ ಜೆಡಿಎಸ್ ಪೂರ್ವಭಾವಿ ಸಭೆಯನ್ನು ಕರೆಯಲಾಗಿದ್ದು, ತಾಲ್ಲೂಕಿನ ಎಲ್ಲ ಜೆಡಿಎಸ್ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಬೇಕು~ ಎಂದು ಅವರು ಮನವಿ ಮಾಡಿಕೊಂಡರು.

 `ಸರಕಾರ ತಕ್ಷಣ ಸಾಲ ಮರುಪಾವತಿಯನ್ನು ಸ್ಥಗಿತಗೊಳಿಸಿ ರೈತರ ನೆರವಿಗೆ ಧಾವಿಸಬೇಕು~ ಎಂದು ತಾ.ಪಂ.ಮಾಜಿ ಸದಸ್ಯ ಹಾಲಪ್ಪ ಹರ್ತಿ ಮನವಿ ಮಾಡಿದರು.ಜೆಡಿಎಸ್ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಬಿ.ಎಸ್. ಹಿರೇಗೌಡರ, ಟಿ.ಎಲ್. ನಾಯಕ, ಪುರಸಭೆ ಉಪಾಧ್ಯಕ್ಷ ಶಿವನಗೌಡ್ರ ಗೌಡ್ರ, ಪುರಸಭೆ ಸದಸ್ಯ ಚನ್ನಬಸವರಾಜ ಇಟಗಿ, ಉಮೇಶ ಹಿರೇಗೌಡ್ರ, ಕಾರ್ಯದರ್ಶಿ ದೇವಪ್ಪ ಇಟಗಿ, ಮಾರುತಿ ಕವಲೂರ, ಅಡಿವೆಪ್ಪ ಕಟ್ಟಿಮನಿ, ಚಂದ್ರಕಾಂತ ಉಳ್ಳಾಗಡ್ಡಿ, ಹಾಲಪ್ಪ ಹರ್ತಿ, ಮಹಮ್ಮದರಫಿ  ಹವಾಲ್ದಾರ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT