ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಒಳಗೊಳಗೇ ಖುಷಿ?

Last Updated 5 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆಡಳಿತಾರೂಢ ಬಿಜೆಪಿಯ ಈಗಿನ ಪರಿಸ್ಥಿತಿ ಒಂದು ರೀತಿ `ರೋಗಿ ಬಯಸಿದ್ದೂ ಹಾಲು- ಅನ್ನ, ವೈದ್ಯ ಹೇಳಿದ್ದೂ ಹಾಲು- ಅನ್ನ~ ಎನ್ನುವಂತೆ ಆಗಿದೆ.

ಮಾಜಿ ಸಚಿವ ಬಿ.ಶ್ರೀರಾಮುಲು ಅವರ ರಾಜೀನಾಮೆ `ಬೆದರಿಕೆ~ ನಂತರ ಕಂಗಾಲಾಗಿದ್ದ ಬಿಜೆಪಿಗೆ ಜನಾರ್ದನ ರೆಡ್ಡಿ ಅವರ ಬಂಧನ ಒಳಗೊಳಗೆ ಖುಷಿ ತಂದುಕೊಟ್ಟಿದೆ.

ಲೋಕಾಯುಕ್ತ ವರದಿ ಹಿನ್ನೆಲೆಯಲ್ಲಿ ಸಂಪುಟಕ್ಕೆ ತೆಗೆದುಕೊಳ್ಳದ ಬಿಜೆಪಿ ಕ್ರಮ ಬಳ್ಳಾರಿಯ ರೆಡ್ಡಿ ಸಹೋದರರ ಅಸಮಾಧಾನ ಹೆಚ್ಚಾಗಲು ಕಾರಣವಾಗಿತ್ತು. ಈ ಹಿನ್ನೆಲೆಯಲ್ಲೇ ಶ್ರೀರಾಮುಲು ಅವರನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಅತಂತ್ರಗೊಳಿಸುವ ಲೆಕ್ಕಾಚಾರವನ್ನೂ ಅವರು ಹಾಕಿಕೊಂಡಿದ್ದರು.

ಇದರ ಒಂದು ಭಾಗವಾಗಿ ಭಾನುವಾರ ಶ್ರೀರಾಮುಲು ಪತ್ರಿಕಾಗೋಷ್ಠಿ ನಡೆಸಿ ರಾಜೀನಾಮೆ ನೀಡುವುದಾಗಿ ಹೇಳಿದರು. ಮಡಿಕೇರಿಗೆ ತೆರಳಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರಿಗೆ ರಾಜೀನಾಮೆ ಪತ್ರವನ್ನೂ ನೀಡಿದರು.

ಅದನ್ನು ಅಂಗೀಕಾರ ಮಾಡಬೇಕೊ ಬೇಡವೊ ಎನ್ನುವ ಒತ್ತಡದಲ್ಲಿರುವಾಗಲೇ ಅತ್ತ ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಅವರ ಬಂಧನವಾಗಿದೆ. ಹೀಗಾಗಿ ಶ್ರೀರಾಮುಲು ಅವರ ಸ್ವಾಭಿಮಾನ ಯಾತ್ರೆಗೆ ಪ್ರಾರಂಭದಲ್ಲೆ ಪೆಟ್ಟುಬಿದ್ದಿದೆ.

ಸರ್ಕಾರ ಉಳಿಸಿಕೊಳ್ಳುವ ಒಂದೇ ಕಾರಣದಿಂದ ಮನಸ್ಸಿಲ್ಲದಿದ್ದರೂ ಬಿಜೆಪಿಯ ಮುಖಂಡರು ಬಳ್ಳಾರಿಯ ರೆಡ್ಡಿಗಳನ್ನು ಮನವೊಲಿಸುವ ಕಸರತ್ತಿಗೆ ಕೈಹಾಕಿದರು. ಕೆಲವರು ಹಲವು ಸುತ್ತಿನ ಮಾತುಕತೆ ಕೂಡ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT