ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಟಿ ಹತ್ತಿ ಆಮದು: ಶೀಘ್ರ ವರದಿ

Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಗ್ರಾಹಕರಿಂದ ಯಾವುದೇ ವಿರೋಧ ಇಲ್ಲದಿದ್ದರೂ, ಕೆಲವು ದೇಶಗಳು ಬಿ.ಟಿ ಹತ್ತಿ ಆಮದು ಮೇಲೆ ನಿರ್ಬಂಧ ಹೇರುತ್ತಿವೆ ಎಂದು ಹತ್ತಿ ಉತ್ಪಾದನೆಯಲ್ಲಿ ಜೈವಿಕ ತಂತ್ರಜ್ಞಾನ ಬಳಕೆ ಕುರಿತು ಅಧ್ಯಯನ ನಡೆಸುತ್ತಿರುವ ಅಮೆರಿಕ ಮೂಲದ  ಸಂಸ್ಥೆಯೊಂದು ಹೇಳಿದೆ.

ಈ ಸಂಸ್ಥೆಯಲ್ಲಿ 9 ದೇಶಗಳ ತಜ್ಞರಿದ್ದು, ಈ ಮಾಸಾಂತ್ಯಕ್ಕೆ ನಡೆಯ­ಲಿರುವ 72ನೇ ಅಂತರರಾಷ್ಟ್ರೀಯ ಹತ್ತಿ ಸಲಹಾ ಸಮಿತಿ(ಐಸಿಎಸಿ) ಸಭೆಯಲ್ಲಿ ಈ ಕುರಿತು ವರದಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

1996ರಿಂದ ಬಿ.ಟಿ ಹತ್ತಿ ವಾಣಿಜ್ಯ ಬಳಕೆಗೆ ಅವಕಾಶ ನೀಡಲಾಗಿದೆ. ಇದು­ವರೆಗೆ ಗ್ರಾಹಕರು ಇದನ್ನು ತಿರಸ್ಕರಿ­ಸಿರುವ ಕುರಿತು ಯಾವುದೇ ಸಾಕ್ಷ್ಯ ಆಧಾರ ಇಲ್ಲ. ಹಾಗಿದ್ದರೂ ಕೆಲವು ದೇಶಗಳು ಇದರ ಆಮದು ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿವೆ ಎಂದು ಈ ಸಂಸ್ಥೆ ಆರೋಪಿಸಿದೆ.

ಪ್ರಸಕ್ತ ಸಾಲಿನಲ್ಲಿ ಜಾಗತಿಕ ಹತ್ತಿ ಉತ್ಪಾದನೆ 255 ಲಕ್ಷ ಟನ್‌ಗಳಷ್ಟಾ­ಗುವ ನಿರೀಕ್ಷೆ ಇದೆ. 237 ಲಕ್ಷ ಟನ್‌ಗಳಷ್ಟು ಬೇಡಿಕೆ ಅಂದಾಜು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT