ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಪಿಎಲ್ ಕುಟುಂಬಗಳಿಗೆ ಹೆಚ್ಚುವರಿ ಆಹಾರಧಾನ್ಯ: ಸಂಪುಟ ಒಪ್ಪಿಗೆ

Last Updated 12 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಸಕ್ತ ಆರ್ಥಿಕ ವರ್ಷದಿಂದಲೇ ಅನ್ವಯವಾಗುವಂತೆ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಹೆಚ್ಚುವರಿಯಾಗಿ 50 ಲಕ್ಷ ಟನ್‌ ಆಹಾರಧಾನ್ಯ ವಿತರಿಸಲು ಆರ್ಥಿಕ  ವ್ಯವಹಾರಗಳ ಮೇಲಿನ ಸಂಪುಟ ಸಮಿತಿ ಗುರುವಾರ ಅನುಮೋದನೆ ನೀಡಿದೆ.

ಹೆಚ್ಚುವರಿ ಆಹಾರಧಾನ್ಯ ವಿತರಣೆಯ ನಿರ್ಧಾರದಿಂದಾಗಿ ಸರ್ಕಾರದ ಬೊಕ್ಕಸದ ಮೇಲೆ
ರೂ 9,471 ಕೋಟಿ ಹೊರೆ ಬೀಳಲಿದೆ. ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ದೇಶದ  6.52 ಕೋಟಿ ಕುಟುಂಬ ಇದರ ಲಾಭ ಪಡೆಯಲಿವೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಮನೀಷ್‌ ತಿವಾರಿ  ತಿಳಿಸಿದರು.

ಆರ್ಥಿಕ  ವ್ಯವಹಾರಗಳ ಮೇಲಿನ ಸಂಪುಟ ಸಮಿತಿ ಸಭೆಯ ಬಳಿಕ ಮಾತನಾಡಿದ ಅವರು, 2014 ಮಾರ್ಚ್‌ 31ರವರೆಗೆ ಈ ನೀತಿ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು. 

ಆರ್‌ಬಿಐಗೆ ಅನುಮತಿ:  ವಿಶ್ವಬ್ಯಾಂಕ್‌ನ ವಿಶೇಷ ಬಾಂಡ್ ಯೋಜನೆಯಲ್ಲಿ 27,950 ಕೋಟಿ ರೂಪಾಯಿ ಹೂಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಕೇಂದ್ರ ಸರ್ಕಾರ ಗುರುವಾರ ಅನುಮತಿ ನೀಡಿದೆ.

ಪ್ರತಿಯಾಗಿ ಭಾರತದ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ  ವಿಶ್ವಬ್ಯಾಂಕ್‌  ಆರ್ಥಿಕ ನೆರವು ಮಿತಿ ರೂ 27,950 ಕೋಟಿ ಯಿಂದ
ರೂ 1,36, 500 ಕೋಟಿ ರೂಪಾಯಿಗೆ ಹೆಚ್ಚಲಿದೆ. ಪ್ರಧಾನಿ ಮನಮೋಹನ್‌ ಸಿಂಗ್‌ ನೇತೃತ್ವದ ಕೇಂದ್ರ ಸಚಿವ ಸಂಪುಟ ಈ ಒಪ್ಪಿಗೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT