ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಕಟ್ಟಡ ಸಂಕೀರ್ಣಕ್ಕೆ ನಿರ್ಧಾರ

ದಕ್ಷಿಣ ವಲಯ ಕಚೇರಿಯಲ್ಲಿ ಮಾಹಿತಿ ಫಲಕ ಅನಾವರಣ
Last Updated 3 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜಾಜಿನಗರ ವಿಧಾನ­ಸಭಾ ಕ್ಷೇತ್ರದ ದಯಾನಂದನಗರದಲ್ಲಿ ರೂ. 4.11 ಕೋಟಿ ವೆಚ್ಚದಲ್ಲಿ ವಿವಿಧೋ­ದ್ದೇಶಿತ ಕಟ್ಟಡ ಸಂಕೀರ್ಣವನ್ನು ನಿರ್ಮಿ­ಸಲು ಬಿಬಿಎಂಪಿ ವಾರ್ಡ್‌ ಮಟ್ಟದ ಸಾರ್ವಜನಿಕ ಕಾಮಗಾರಿಗಳ ಸ್ಥಾಯಿ ಸಮಿತಿ ಗುರುವಾರ ನಿರ್ಧರಿಸಿದೆ.

ಸುಮಾರು 1,245 ಚದರ ಮೀಟರ್‌ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿರುವ ಕಟ್ಟಡದ ನೆಲ ಅಂತಸ್ತಿನಲ್ಲಿ ಆಸ್ಪತ್ರೆ, ಶೌಚಾಲಯ, ಡೈನಿಂಗ್‌ ಹಾಲ್‌, ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿ­ದರೆ, ಮೊದಲ ಮಹಡಿಯಲ್ಲಿ ಪಾಲಿಕೆ ಕಚೇರಿಗಳು ಇರಲಿವೆ. 2ನೇ ಮಹಡಿ­ಯಲ್ಲಿ ಸಭಾಂಗಣ, ವಾರ್ಡ್‌ ಕಚೇರಿ, ಅಂಚೆ ಕಚೇರಿ ಮತ್ತು ಪಾಲಿಕೆ ಸದಸ್ಯರ ಕಚೇರಿಗಳಿಗೆ ಸ್ಥಳಾವಕಾಶ ಮಾಡಿ­ಕೊಡಲಾಗುತ್ತದೆ.

ಬಿಬಿಎಂಪಿ ವಾರ್ಡ್‌ ಮಟ್ಟದ ಸಾರ್ವಜನಿಕ ಕಾಮಗಾರಿಗಳ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಎಚ್‌. ಬಸವರಾಜು ವರದಿಗಾರರಿಗೆ ಈ ಮಾಹಿತಿ ನೀಡಿದರು. ಹೆಮ್ಮಿಗೆಪುರ ಪ್ರದೇಶದ ನ್ಯಾಯಾಂಗ ಬಡಾವಣೆಯಲ್ಲಿ ಗ್ರಂಥಾಲಯ ನಿರ್ಮಾಣವೂ ಸೇರಿದಂತೆ ರೂ. 49.10 ಲಕ್ಷ ಮೊತ್ತದ ಕಾಮಗಾರಿಗೆ ಸಮಿತಿ ಅನುಮೋದನೆ ನೀಡಿದೆ ಎಂದು ತಿಳಿಸಿದರು.

ಸಿ.ವಿ. ರಾಮನ್‌ನಗರ ಕ್ಷೇತ್ರದ ಬಿಇಎಂಎಲ್‌ ವೃತ್ತದಲ್ಲಿ ರೂ. 50 ಲಕ್ಷ ಮೊತ್ತದಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ಥಳಿ ನಿರ್ಮಿಸಲೂ ನಿರ್ಧರಿಸಲಾಗಿದೆ ಎಂದು ಹೇಳಿದರು.

ಮಾಹಿತಿ ಫಲಕ: ಬಿಬಿಎಂಪಿ ವ್ಯಾಪ್ತಿ­ಯಲ್ಲಿ ನಾಗರಿಕರಿಗೆ ಜಲಮಂಡಳಿ, ಬೆಸ್ಕಾಂ, ಬಿಎಂಟಿಸಿ, ಪೊಲೀಸ್‌ ಸೇರಿ­ದಂತೆ ಹಲವು ಇಲಾಖೆಗಳು ಸೇವೆ ಒದಗಿಸುತ್ತಿದ್ದು, ಈ ಇಲಾಖೆಗಳ ಅಧಿಕಾರಿಗಳ ಮಾಹಿತಿ ಹಾಗೂ ದೂರವಾಣಿ ಸಂಖ್ಯೆ ಒಳಗೊಂಡ ಮಾಹಿತಿ ಫಲಕ ಪ್ರದರ್ಶಿಸುವ ಕಾರ್ಯಕ್ಕೆ ಗುರುವಾರ ಬಿಬಿಎಂಪಿ ದಕ್ಷಿಣ ವಲಯ ಕಚೇರಿಯಲ್ಲಿ ಚಾಲನೆ ನೀಡಲಾಯಿತು.

ಶಾಸಕ ಬಿ.ಎನ್‌. ವಿಜಯಕುಮಾರ್‌ ಮಾಹಿತಿ ಫಲಕ ಅನಾವರಣ ಮಾಡಿದರು. ಎಂಟು ವಲಯಗಳಲ್ಲಿ ಒಟ್ಟು 191 ಮಾಹಿತಿ ಫಲಕಗಳನ್ನು ಅಳವಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT