ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳಿಕೂದಲು ಆರೋಗ್ಯವಂತ ಮನುಷ್ಯರ ಲಕ್ಷಣ...!

Last Updated 22 ಜುಲೈ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ):  ಬಾಲಕರಾಗಿದ್ದಾಗ ತಲೆಗೂದಲು ಬೆಳ್ಳಗಾದರೆ ಅದನ್ನು ಬಾಲ ನೆರೆ ಎನ್ನುತ್ತಾರೆ. ವಯಸ್ಸಾದ ಮೇಲೆ ತಲೆಕೂದಲು ಬೆಳ್ಳಗಾದರೆ, ಅವರಿಗೆ `ಹಿರಿಯ ವ್ಯಕ್ತಿತ್ವ~ದ ಗೌರವ. ಆದರೆ ಯೌವನದಲ್ಲಿ ಬಿಳಿಕೂದಲು ಕಂಡರೆ... ?

`ಅಯ್ಯೋ, ಇವರಿಗೆ ವಯಸ್ಸಾಯ್ತು~ ಅಂತ ಮೂದಲಿಸಬೇಡಿ. ಏಕೆಂದರೆ ತಲೆಯಲ್ಲಿ ಬಿಳಿಕೂದಲು ಇದ್ದರೆ ಅದು ಆರೋಗ್ಯವಂತ ಮನುಷ್ಯರ ಲಕ್ಷಣ ಎಂದು ಸಂಶೋಧನೆ  ತಿಳಿಸಿದೆ.  

ಇತ್ತೀಚೆಗೆ ಸ್ಪೇನ್ ವಿಜ್ಞಾನಿಗಳು `ಬಿಳಿ ಕೂದಲು ಮತ್ತು ಆರೋಗ್ಯವಂತ ಲಕ್ಷಣ~ ಕುರಿತು ಸಂಶೋಧನೆ ನಡೆಸಿದ್ದಾರೆ. ಬೂದುಬಣ್ಣದ ಕೂದಲುಗಳನ್ನು ಹೊಂದಿರುವ ಕಾಡು ಹಂದಿಗಳನ್ನು ಅಧ್ಯಯನಕ್ಕಾಗಿ ಆಯ್ಕೆ ಮಾಡಿಕೊಂಡಿದ್ದರು. ಅಂಥ ಹಂದಿಗಳು ಹೆಚ್ಚು ಆರೋಗ್ಯವಾಗಿರುವುದನ್ನು ದಾಖಲಿಸಿದ್ದಾರೆ.

ದೇಹದಲ್ಲಿ `ಮೆಲನಿನ್~ ಅಂಶ ಕಡಿಮೆಯಾದಾಗ ತಲೆಕೂದಲು ಬೆಳ್ಳಗಾಗುತ್ತದೆ ಎಂಬುದು ವೈಜ್ಞಾನಿಕ ಕಾರಣ. ಅದೇ ರೀತಿ ಅಧ್ಯಯನಕ್ಕೊಳಪಟ್ಟ ಕಾಡುಹಂದಿಗಳ ದೇಹದಲ್ಲಿ `ಮೆಲನಿನ್~ ಅಂಶ ಕಡಿಮೆ ಇತ್ತು.

ಆದ್ದರಿಂದಲೇ ಅವುಗಳ ಕೂದಲು ಬೂದುಬಣ್ಣದಲ್ಲಿದ್ದವು. ಜೊತೆಗೆ ಅವುಗಳ ಆರೋಗ್ಯವೂ ಉತ್ತಮವಾಗಿತ್ತು~ ಎಂದು ಸಂಶೋಧಕರು ಸಂಶೋಧನೆಯ ಫಲಿತಾಂಶವನ್ನು ಸಮರ್ಥಿಸಿಕೊಂಡಿದ್ದಾರೆ.

ಸ್ಪೇನ್‌ನ ಮ್ಯುಸಿಯೊ ನ್ಯಾಷನಲ್ ದಿ ಸೈನ್ಸಸ್ ನ್ಯಾಚುರಲ್ಸ್ ಸಂಸ್ಥೆಯ ಸಂಶೋಧಕ ಇಸ್ಮಾಯಿಲ್ ಗಾಲ್ವಾನ್ ಮತ್ತು ತಂಡ ಈ ಸಂಶೋಧನೆ ನಡೆಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT