ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ವಿ.ಹಳ್ಳಿ: ಕಾಡಾನೆ ಪ್ರತ್ಯಕ್ಷ

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ರಾಮನಗರ: ಚನ್ನಪಟ್ಟಣದ ಬಿ.ವಿ ಹಳ್ಳಿ ಸುತ್ತಮುತ್ತ ಕಂಡು ಬಂದಿದ್ದ ಮೂರು ಕಾಡಾನೆಗಳು ಶುಕ್ರವಾರ ರಾಮನಗರ ತಾಲ್ಲೂಕಿನ ಅವ್ವೇರಹಳ್ಳಿ, ಎಸ್.ಆರ್.ಎಸ್. ಬೆಟ್ಟ, ಕವಣಾಪುರ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಕಂಡು ಬಂದು ಗ್ರಾಮದ ಜನತೆಯಲ್ಲಿ ಆತಂಕ ಸೃಷ್ಟಿಸಿವೆ.

ಒಂದು ಮರಿ ಆನೆ ಸೇರಿದಂತೆ ಒಂದು ಹೆಣ್ಣು, ಒಂದು ಗಂಡಾನೆ ಕಾಡನ್ನು ತೊರೆದು ನಾಡಿಗೆ ಬಂದಿವೆ. ಮಂಗಳವಾರದಿಂದ ಚನ್ನಪಟ್ಟಣ ತಾಲ್ಲೂಕಿನ ವಿವಿಧ ಪ್ರದೇಶಗಳಲ್ಲಿ ಕಂಡು ಬಂದ ಈ ಆನೆಗಳು ಇದೀಗ ರಾಮನಗರ ತಾಲ್ಲೂಕಿನತ್ತ ದಾವಿಸಿ ಬಂದಿವೆ.

ಈ ಆನೆಗಳ ದಂಡು ತಾನು ಸಾಗಿದ ಮಾರ್ಗದಲ್ಲಿ ಎದುರಾದ ರೈತರ ಬೆಳೆಯನ್ನು ತುಳಿದು ನಾಶ ಮಾಡಿ ಮುಂದೆ ಸಾಗಿವೆ. ಮಾವಿನ ಮರಗಳು, ಬಾಳೆ ತೋಟ, ತೆಂಗಿನ ಮರ ಹಾಗೂ ರಾಗಿ ಮೆದೆ ಆನೆಗಳ ದಾಳಿಯಿಂದ ನಾಶಗೊಂಡಿವೆ. ಈ ಆನೆಗಳನ್ನು ಮತ್ತೆ ಕಾಡಿಗೆ ವಾಪಸು ಕಳುಹಿಸುವ ನಿಟ್ಟಿನಲ್ಲಿ ಕಾರ್ಯ ನಡೆಯುತ್ತಿದೆ ಎಂದು ಡಿಎಫ್‌ಒ (ಪ್ರಭಾರ) ಸತ್ಯನಾರಾಯಣ ಅವರು `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT