ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ಪೊಲೀಸರಿಂದ ಸಾಮೂಹಿಕ ರಜೆ ಬೆದರಿಕೆ

Last Updated 7 ಅಕ್ಟೋಬರ್ 2012, 9:10 IST
ಅಕ್ಷರ ಗಾತ್ರ

ಪಟ್ನಾ (ಐಎಎನ್‌ಎಸ್): ವೇತನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಅಕ್ಟೋಬರ್ 10 ರಿಂದ 5 ದಿನಗಳ ಕಾಲ ಸಾಮೂಹಿಕ ರಜೆ ಮೇಲೆ ತೆರಳುವ ಬೆದರಿಕೆ ಒಡ್ಡಿರುವ ಬಿಹಾರದ ಸುಮಾರು 65,000 ಪೊಲೀಸ್ ಪೇದೆಗಳು ಭಾನುವಾರ ತಮ್ಮ `ಬಿಹಾರ್ ಪೊಲೀಸರ ಸಂಘ~ದಿಂದ (ಬಿಪಿಎ) ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ.

ಇತರೆ ರಾಜ್ಯಕ್ಕಿಂತ 2000 ರೂಪಾಯಿ ವೇತನ ಹೆಚ್ಚಳ, ನಾಲ್ಕು ಪೊಲೀಸ್ ಪೇದೆಗಳಿಗೊಬ್ಬ ಹವಾಲ್ದಾರ್ ನೇಮಕ ಮತ್ತು 12 ಪೊಲೀಸ್ ಪೇದೆಗಳಿಗೊಬ್ಬ ಸಹಾಯಕ ಸಬ್-ಇನ್ಸ್‌ಪೆಕ್ಟರ್ ನೇಮಕ ಮಾಡುವುದು ಸೇರಿದಂತೆ ತನ್ನ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಬಿಪಿಎ ಆಗ್ರಹಿಸಿದೆ.

`ಸಾಮೂಹಿಕ ರಜೆ ನಿರ್ಧಾರ ಬೆಂಬಲಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಇರುವ ಎಲ್ಲ ಪೊಲೀಸ್ ಸಿಬ್ಬಂದಿ ಸಹಿ ಸಂಗ್ರಹಿಸಲು ನಾವು ಸಹಿ ಪತ್ರಗಳನ್ನು ಒದಗಿಸಿದ್ದೇವೆ~ ಎಂದು ಬಿಪಿಎ ಅಧ್ಯಕ್ಷ ಜಿತೇಂದ್ರ ಕುಮಾರ್ ಸಿಂಗ್ ತಿಳಿಸಿದರು.

ಬೇಡಿಕೆಗಳ ಕುರಿತಂತೆ ಕಳೆದ ವಾರ ಸರ್ಕಾರದ ಜತೆ ನಡೆಸಿದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಬಿಪಿಎ ಸರ್ಕಾರಕ್ಕೆ ಸಾಮೂಹಿಕ ರಜೆಯ ಬೆದರಿಕೆ ಒಡ್ಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT