ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ಬಿಜೆಪಿ ಶಾಸಕನ ಬಂಡಾಯ

Last Updated 21 ಜುಲೈ 2013, 19:59 IST
ಅಕ್ಷರ ಗಾತ್ರ

ಪಟ್ನಾ (ಐಎಎನ್‌ಎಸ್): ಬಿಜೆಪಿ ಶಾಸಕ ಅಮರನಾಥ್ ಗಾಮಿ ಅವರು ರಾಜ್ಯ ನಾಯಕತ್ವದ ವಿರುದ್ಧ ಭಾನುವಾರ ಬಹಿರಂಗವಾಗಿ ತಿರುಗಿಬಿದ್ದಿದ್ದು, ಶೀಘ್ರವೇ ಆಡಳಿತಾರೂಢ ಜೆಡಿಯು ಸೇರುವ ಸೂಚನೆ ನೀಡಿದ್ದಾರೆ.

ಬಿಜೆಪಿ, ಗಾಮಿ ಅವರನ್ನು  ಪಕ್ಷದಿಂದ ಅಮಾನತು ಮಾಡಿದೆ. ರಾಜ್ಯದ ಹಿರಿಯ ಮುಖಂಡ ಸುಶೀಲ್ ಕುಮಾರ್ ಮೋದಿ ಅವರನ್ನು `ಅಧಿಕಾರ ದಾಹಿ' ಎಂದು ಲೇವಡಿ ಮಾಡಿರುವ ಹಯಘಾಟ್ ಶಾಸಕ ಗಾಮಿ, ಮೋದಿ ಜತೆ ಕೆಲಸ ಮಾಡಲು ನಿರಾಕರಿಸಿದ್ದಾರೆ. `ಬಿಜೆಪಿ ಸಿದ್ಧಾಂತವು ವ್ಯಕ್ತಿ ಕೇಂದ್ರಿತವಾಗುತ್ತಿದೆ' ಎಂದೂ ಆರೋಪಿಸಿದ್ದಾರೆ.

` ಒಂದೆರಡು ದಿನ ಕಾದು ನೋಡಿ. ಎಲ್ಲವೂ ಸ್ಪಷ್ಟವಾಗುತ್ತದೆ' ಎಂದು ಹೇಳುವ ಮೂಲಕ ಜೆಡಿಯು ಸೇರುವ ಸೂಚನೆ ನೀಡಿದ್ದಾರೆ. ಗಾಮಿ ಅವರೊಂದಿಗೆ ಬಿಜೆಪಿಯ ಇನ್ನೂ ಮೂರು ಶಾಸಕರು ಜೆಡಿಯು ಸೇರುತ್ತಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT