ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ, ಹೈದರಾಬಾದ್‌ಗೆ ಎನ್‌ಐಎ ತಂಡ

ಯಾಸೀನ್‌ ಭಟ್ಕಳ, ಅಖ್ತರ್‌ ವಿಚಾರಣೆ
Last Updated 14 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಪಟ್ನಾ/ಹೈದರಾಬಾದ್‌ (ಪಿಟಿಐ, ಐಎ­ಎನ್‌ಎಸ್‌): ಇಂಡಿಯನ್‌ ಮುಜಾಹಿ­ದೀನ್ ಸಹ ಸಂಸ್ಥಾ­ಪಕ ಯಾಸೀನ್‌ ಭಟ್ಕಳ­ನನ್ನು ಬಿಹಾ­­ರದ ದರ್ಬಾಂಗ ಜಿಲ್ಲೆಗೆ ಮತ್ತು ಆಂಧ್ರ­ದಲ್ಲಿ ಫೆ.21ರಂದು ನಡೆದ ಸ್ಫೋಟ ಪ್ರಕರಣಗಳಿಗೆ ಸಂಬಂಧಿ­ಸಿ­ದಂತೆ ವಿಚಾರಣೆ ನಡೆಸಲು ಭಟ್ಕಳ್‌ನ ಸಹಾಯಕ ಅಸಾ­ದುಲ್ಲಾ ಅಖ್ತರ್‌ನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಶನಿವಾರ ಹೈದರಾಬಾದ್‌ಗೆ ಕರೆ ತಂದಿತು.

ಭಟ್ಕಳ ನೀಡಿದ ಮಾಹಿತಿಯ ಮೇಲೆ ದರ್ಬಾಂಗದ ವಿವಿಧೆಡೆ ಎನ್‌ಐಎ ತಂಡ ಕಾರ್ಯಾಚರಣೆ ನಡೆಸಿ ಇತರೆ ಶಂಕಿತ ಉಗ್ರರಿಗಾಗಿ ಶೋಧ ನಡೆಸಿತು ಎಂದು ಪೊಲೀಸರು ತಿಳಿಸಿದ್ದಾರೆ. ‘ಎನ್‌ಐಎ ಅಧಿಕಾರಿಗಳು ಭಟ್ಕಳ­ನನ್ನು ಬಿಹಾರಕ್ಕೆ ಕರೆತಂದು, ಆತ ಹಿಂದೆ ರಾಜ್ಯಕ್ಕೆ ಭೇಟಿ ನೀಡಿದ ಸಂದಭ­ರ್ದಲ್ಲಿ ವಾಸವಾಗಿದ್ದ ಎನ್ನಲಾದ ಒಟ್ಟು ಆರು ಸ್ಥಳಗಳಿಗೆ ಭೇಟಿ ನೀಡಿತು’ ಎಂದು ಅವರು ಹೇಳಿದ್ದಾರೆ.

‘ಎನ್‌ಐಎ ಭಟ್ಕಳನನ್ನು ದರ್ಬಾಂಗ ಸಮೀಪದ ಸಮಷ್ಟಿ­ಪುರ ಮತ್ತು ಮಧು­ಬನಿ ಜಿಲ್ಲೆಗಳಿಗೂ ಕರೆದು­ಕೊಂಡು ಹೋಗಿ ಇಂಡಿಯನ್‌ ಮುಜಾಹಿದೀನ್‌ಗೆ ಸೇರಿದ ಉಗ್ರರ ತಾಣಗಳ ಬಗ್ಗೆ ಮಾಹಿತಿ ಕಲೆ ಹಾಕಿತು’ ಎಂದು ತಿಳಿಸಿದ್ದಾರೆ. ‘ದರ್ಬಾಂಗ, ಮಧುಬನಿ ಮತ್ತು ಸಮ­ಷ್ಟಿ­­ಪುರ ಜಿಲ್ಲೆಗ­ಳೊಂದಿಗೆ ತನಗಿರುವ ಸಂಬಂಧಗಳ ಬಗ್ಗೆ ಭಟ್ಕಳ ತನಿಖಾಧಿ­ಕಾ­ರಿ­ಗಳಿಗೆ ಮಾಹಿತಿ ನೀಡಿದ್ದಾನೆ’ ಎಂದು ಅವರು ನುಡಿದಿದ್ದಾರೆ.

ತಪ್ಪೊಪ್ಪಿಗೆ: ಈ ಮಧ್ಯೆ ರಾಷ್ಟ್ರೀಯ ತನಿಖಾ ದಳ ಫೆ.21ರಂದು ನಡೆದ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಶಂಕಿತ ಉಗ್ರ, ಭಟ್ಕಳನ ಸಹಾ­ಯಕ ಅಸಾದುಲ್ಲಾ ಅಖ್ತರ್‌ನನ್ನ ‘ಸಂಚಾರಿ ವಾರಂಟ್‌’ ಮೇರೆಗೆ ಶನಿ­ವಾರ ಹೈದರಾಬಾದ್‌ಗೆ ಕರೆತಂ­ದಿತು.  ಕೆಲಕಾಲ ವಾಸವಿದ್ದು ಬಾಂಬ್‌ ತಯಾ­ರಿಸಿದ್ದ ಎನ್ನಲಾದ ಬಹಾದ್ದೂರ­ಪುರದ  ಅಖ್ತರ್‌ ಅಲಿಯಾಸ್‌ ಹದ್ದಿ­ಯನ್ನು ಕರೆದುಕೊಂಡು ಹೋಗಿತ್ತು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT