ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರದ ಯುವಕ ಕರೋಡ್‌ಪತಿ

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): `ಕೌನ್ ಬನೇಗಾ ಕರೋಡ್‌ಪತಿ~ ಕಾರ್ಯಕ್ರಮದಲ್ಲಿ 5 ಕೋಟಿ ರೂಪಾಯಿಗಳ ಜಾಕ್‌ಪಾಟ್ ಮೊತ್ತವನ್ನು ಗಳಿಸಿರುವ ಬಿಹಾರದ ಸುಶಿಲ್ ಕುಮಾರ್ ಸಾಧನೆ ಒಂದು ಅದ್ಭುತ ಚಮತ್ಕಾರವೇ ಸರಿ ಎಂದು ಕಾರ್ಯಕ್ರಮ ನಿರ್ವಾಹಕ ಮತ್ತು ನಟ ಅಮಿತಾಭ್ ಬಚ್ಚನ್ ಬಣ್ಣಿಸಿದ್ದಾರೆ.

ಶ್ರೀಸಾಮಾನ್ಯನ ಪಾಲಿಗೆ ಕೆಬಿಸಿ ಎಂತಹ ಸದವಕಾಶ ಸೃಷ್ಟಿಸಿದೆ ಎಂಬುದಕ್ಕೆ ಅವರ ಈ ಸಾಧನೆ ನಿಜಕ್ಕೂ ಅತ್ಯುತ್ತಮ ಸಾಕ್ಷಿಯಾಗಿದೆ ಎಂದು ಅವರು ತಮ್ಮ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಕಾರ್ಯಕ್ರಮ ನವೆಂಬರ್ 2ರಂದು ಸೋನಿ ಟಿ.ವಿ.ಯಲ್ಲಿ ಪ್ರಸಾರವಾಗಲಿದೆ.

ಕಂಪ್ಯೂಟರ್ ನಿರ್ವಾಹಕ ಮತ್ತು ಬೋಧಕನಾಗಿರುವ 27 ವರ್ಷದ ಸುಶಿಲ್ ಕುಮಾರ್ ಇತ್ತೀಚೆಗಷ್ಟೇ ಮದುವೆಯಾಗಿದ್ದಾರೆ.

ಅವರ ತಿಂಗಳ ಆದಾಯ ಕೇವಲ 6,500 ರೂಪಾಯಿ. ಈ ಮಹತ್ವಾಕಾಂಕ್ಷಿಯು ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದ ಹಾಟ್‌ಸೀಟ್‌ನಲ್ಲಿ ಆಸೀನರಾಗಿ ಎಲ್ಲ ಪ್ರಶ್ನೆಗಳಿಗೂ ಸರಿ ಉತ್ತರ ನೀಡುವ ಮೂಲಕ ಪಂದ್ಯದ 5 ಕೋಟಿ ರೂಪಾಯಿಗಳ ಜಾಕ್‌ಪಾಟ್ ಮೊತ್ತವನ್ನು ಗಳಿಸಿರುವ ಮೊದಲಿಗ ಎನಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT