ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಆಶ್ರಮ ಕಟ್ಟಡಕ್ಕೆ ಶಂಕುಸ್ಥಾಪನೆ

Last Updated 18 ಜೂನ್ 2011, 10:05 IST
ಅಕ್ಷರ ಗಾತ್ರ

ಬೀದರ್: ನಗರದ ಶಿವನಗರದಲ್ಲಿ ಇರುವ ಸಾಮರ್ಥ್ಯ ಸೌಧದ ಪಕ್ಕದಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ನೂತನ ರಾಮಕೃಷ್ಣ ವಿವೇಕಾನಂದ ಆಶ್ರಮ ಕಟ್ಟಡದ ಶಂಕುಸ್ಥಾಪನೆ ಶುಕ್ರವಾರ ನಡೆಯಿತು.

ವಿಜಾಪುರ-ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಹಾರಾಜ್ ಶಂಕುಸ್ಥಾಪನೆ ನೆರವೇರಿಸಿದರು. ತುಮಕೂರು ಆಶ್ರಮದ ಅಧ್ಯಕ್ಷ ಸ್ವಾಮಿ ವಿರೇಶಾನಂದ ಸರಸ್ವತಿ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು.

ಸಮಜ ಸಮಗ್ರ ವಿಕಾಸ ಹಾಗೂ ಇಡೀ ವ್ಯವಸ್ಥೆ ಸೂಕ್ತ ಹಾದಿಯಲ್ಲಿ ನಡೆಯಲು ಧರ್ಮಗುರುಗಳ ಮಾರ್ಗದರ್ಶನ ಅಗತ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ್ ಬೆಳಮಗಿ ಹೇಳಿದರು.

ಬೀದರ್‌ನಲ್ಲಿ ಆಶ್ರಮ ಆರಂಭವಾಗಿ ಏಳು ವರ್ಷಗಳಾಗಿವೆ. ಈ ಅವಧಿಯಲ್ಲಿ ನಿರಂತರ ನಾನಾ ಚಟುವಟಿಕೆಗಳನ್ನು ನಡೆಸುವ ಮೂಲಕ ಸಮಾಜಕ್ಕೆ ಹೊಸ ಚೈತನ್ಯ ತುಂಬುತ್ತಿದೆ. ಆಶ್ರಮಕ್ಕೆ ಸ್ವಂತ ಕಟ್ಟಡ ನಿರ್ಮಾಣ ಆಗುತ್ತಿರುವುದು ಸಂತಸದ ಸಂಗತಿ. ಕಟ್ಟಡ ನಿರ್ಮಾಣ ಶೀಘ್ರದಲ್ಲೇ ಆಗುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸುವ ಅಗತ್ಯವಿದೆ ಎಂದರು.

 ಸಾಧು, ಸಂತರ ಬಗ್ಗೆ ನನಗೆ ಅಪಾರ ಗೌರವ ಇದೆ. ಧಾರ್ಮಿಕ ಗುರುಗಳು ನೀಡಿದ ಮಾರ್ಗದರ್ಶನ ಹಾಗೂ ಆಶೀರ್ವಾದಿಂದಲೇ ನಾನು ಈ ಪದವಿಯಲ್ಲಿ ಇದ್ದೇನೆ ಎಂದರು.

ಬೀದರ್ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಜ್ಯೋತಿರ್ಮಯಾನಂದಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಾನವ ನಿರ್ಮಾಣವೇ ಆಶ್ರಮದ ಧ್ಯೇಯ. ಇಲ್ಲಿ ಮೊದಲನೇ ಹಂತದಲ್ಲಿ ಧ್ಯಾನ ಮಂದಿರ, ಯೋಗ ಕೇಂದ್ರ, ಗ್ರಂಥಾಲಯ, ಪುಸ್ತಕ ಮಳಿಗೆ, ಆಡಳಿತ ಕಚೇರಿ ನಿರ್ಮಿಸಲಾಗುತ್ತಿದೆ ಎಂದರು.

ನಿವೇಶನಕ್ಕೆ 15 ಲಕ್ಷ ರೂಪಾಯಿ ದೇಣಿಗೆ ನೀಡಿರುವ ಜ್ಯೋತಿಷ್ಯತಜ್ಞ ಕಾಶಿನಾಥ ವಿಶ್ವಕರ್ಮ ಹಾಗೂ ಅವರ ಪತ್ನಿ ಪ್ರೇಮಾ ವಿಶ್ವಕರ್ಮ ಅವರಿಗೆ ಸಚಿವರು ಶಾಲು ಹೊದಿಸಿ ಸನ್ಮಾನಿಸಿದರು. ಆಶ್ರಮದ ಸತ್ಕಾರ್ಯಕ್ಕೆ ಅವರು ತೋರಿದ ಔದಾರ್ಯವನ್ನು ಕೊಂಡಾಡಿದರು. ಸ್ವಾಮಿ ಯೋಗೇಶ್ವರಾನಂದ, ಸ್ವಾಮಿ ಮಹೇಶ್ವರಾನಂದ, ಸ್ವಾಮಿ ಚೈತನ್ಯಾನಂದ, ಸ್ವಾಮಿ ಗದಾಧರಾನಂದ, ಸ್ವಾಮಿ ಸುಮೇಧಾನಂದ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕುಶಾಲ ಪಾಟೀಲ್ ಗಾದಗಿ, ಜಿಲ್ಲಾಧಿಕಾರಿ ಸಮೀರ್ ಶುಕ್ಲಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಣಪತಿ ರಾಠೋಡ್ ಉಪಸ್ಥಿತರಿದ್ದರು. ಸ್ವಾಮಿ ಪ್ರಕಾಶಾನಂದ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT