ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ನಲ್ಲೇ ಪರೀಕ್ಷೆ

Last Updated 21 ಫೆಬ್ರುವರಿ 2011, 17:15 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮಗಳ ಹಿನ್ನೆಲೆಯಲ್ಲಿ ಬೀದರ್ ಕೇಂದ್ರದ ನರ್ಸಿಂಗ್ ಪರೀಕ್ಷೆಗಳನ್ನು ನಿಯಮ ಬಾಹಿರ ವಾಗಿ ಬೆಂಗಳೂರಿನಲ್ಲಿ ನಡೆಸಿದ್ದು, ಇನ್ನು ಮುಂದೆ ಆಯಾ ಜಿಲ್ಲೆಗಳಲ್ಲೇ ಪರೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದು ಸಚಿವ ಎಸ್.ಎ. ರಾಮ ದಾಸ್ ಹೇಳಿದರು.

2009ರ ಆಗಸ್ಟ್ ತಿಂಗಳಲ್ಲಿ ಬೀದರ್‌ನ ವಿದ್ಯಾರ್ಥಿನಿಲಯಗಳಲ್ಲಿ ರಾತ್ರಿ ವೇಳೆ ಪರೀಕ್ಷೆ ಬರೆದ ಪ್ರಕರಣ ಬೆಳಕಿಗೆ ಬಂದ ನಂತರ ಜಿಲ್ಲಾಧಿ ಕಾರಿಗಳು ಪರೀಕ್ಷೆಯನ್ನು ರದ್ದು ಪಡಿಸಿದ್ದರು. ಅದಾದ ನಂತರ 2010ರ ಫೆಬ್ರುವರಿಯಿಂದ 2011ರ ಫೆಬ್ರುವರಿವರೆಗೆ ಮೂರು ಪರೀಕ್ಷೆಗಳನ್ನು ಬೆಂಗಳೂರಿನಲ್ಲಿ ನಡೆಸ ಲಾಯಿತು. ಇದರಲ್ಲೂ ಸಾಮೂಹಿಕ ನಕಲು ನಡೆದಿದ್ದು, ಈ ಕುರಿತು ತಜ್ಞರ ಸಮಿತಿ ವರದಿ ನೀಡಿದೆ.

2008ರಲ್ಲಿ ಹೊರಡಿಸಿದ್ದ ಸರ್ಕಾರಿ ಆದೇಶಕ್ಕೆ ವ್ಯತಿರಿಕ್ತವಾಗಿ ಪರೀಕ್ಷಾ ಕೇಂದ್ರವನ್ನು ಸ್ಥಳಾಂತರ ಮಾಡಲಾಗಿದೆ. ಪರೀಕ್ಷಾ ಪ್ರಾಧಿ ಕಾರದ ಕಾರ್ಯದರ್ಶಿಗೆ ಜೀವ ಬೆದರಿಕೆ ಇದ್ದ ಕಾರಣಕ್ಕೆ ಪರೀಕ್ಷಾ ಕೇಂದ್ರವನ್ನೇ ಸ್ಥಳಾಂತರ ಮಾಡಿ ರುವುದು ಸಮಿತಿ ಕೊಟ್ಟಿರುವ ವರದಿಯಿಂದ ಸಾಬೀತಾಗಿದೆ. ಸ್ಥಳಾಂತರಕ್ಕೂ ಮುನ್ನ ಅನು ಸರಿಸಬೇಕಾದ ಕ್ರಮಗಳ ಬಗ್ಗೆ ಗಮನಹರಿಸಿರಲಿಲ್ಲ ಎಂದು ಸಚಿವರು ಹೇಳಿದರು.

ಒಟ್ಟಾರೆ ಈ ಎಲ್ಲ ಅಂಶಗಳನ್ನು ಪರಿಶೀಲಿಸಿ, ಇನ್ನು ಮುಂದೆ ಬೀದರ್ ನಲ್ಲೇ ಪರೀಕ್ಷೆ ನಡೆಸಲು ತೀರ್ಮಾ ನಿಸಿದ್ದು, ಈ ಕುರಿತು ಇದೇ 23ರಂದು ಬೀದರ್‌ನಲ್ಲಿ ಜಿಲ್ಲಾಧಿ ಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಸಂಬಂಧ ಪಟ್ಟ ಅಧಿಕಾರಿಗಳ ಸಭೆ ನಡೆಸ ಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT