ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ಹಂದಿಗಳನ್ನು ಸೆರೆಹಿಡಿದು ಮಾರಾಟ ಮಾಡಲು ಪಾಲಿಕೆ ನಿರ್ಧಾರ...

Last Updated 25 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೀದಿ ನಾಯಿಗಳ ಹಾವಳಿಯನ್ನು ಸಂಪೂರ್ಣ ನಿಯಂತ್ರಿಸಲು ಸಾಧ್ಯವಾಗದ ಬಿಬಿಎಂಪಿಯು ಇದೀಗ ಬೀದಿ ಹಂದಿಗಳ ಹಾವಳಿ ನಿಯಂತ್ರಿಸಲು ಮುಂದಾಗಿದೆ. ಈ ಉದ್ದೇಶಕ್ಕಾಗಿ ಅದು ಇದೀಗ ಇ-ಟೆಂಡರ್ ಕರೆದಿದೆ.

ನಗರದಲ್ಲಿ ಸುಮಾರು 1000ದಿಂದ 1,500ರಷ್ಟು ಬೀದಿ ಹಂದಿಗಳಿದ್ದು, ಅವುಗಳ ಹಾವಳಿ ಮಿತಿ ಮೀರಿದೆ.
`ಹಂದಿಗಳನ್ನು ಸಾಕುವಂತಹ ಜನ ಅವುಗಳನ್ನು ಬೀದಿಗೆ ಬಿಡುತ್ತಿದ್ದಾರೆ.
 
ಇದರಿಂದ ನಗರದಲ್ಲಿ ಬೀದಿ ಹಂದಿಗಳ ಹಾವಳಿ ಮಿತಿ ಮೀರಿದೆ. ಇಂತಹ ಬೀದಿ ಹಂದಿಗಳನ್ನು ಸೆರೆಹಿಡಿದು ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಪಾಲಿಕೆ ನಿರ್ಧರಿಸಿದೆ~ ಎಂದು ಬಿಬಿಎಂಪಿಯ ಪಶು ಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ ಡಾ. ಪರ್ವೀಜ್ ಅಹಮದ್ ಪೀರನ್ ತಿಳಿಸಿದ್ದಾರೆ.

`ಸಾಕು ಹಂದಿಗಳನ್ನು ಬೀದಿಗೆ ಬಿಡದಂತೆ ಸೂಚಿಸಿ ಈಗಾಗಲೇ ಸಂಬಂಧಪಟ್ಟ ಹಂದಿ ಸಾಕಣೆದಾರರಿಗೆ ನೋಟಿಸ್ ಜಾರಿಗೊಳಿಸಿ 15 ದಿನ ಕಾಲಾವಕಾಶ ನೀಡಿದ್ದೇವೆ. ಆನಂತರವೂ ಬೀದಿಗಳಲ್ಲಿ ಹಂದಿಗಳು ಕಾಣಿಸಿಕೊಂಡಲ್ಲಿ ಅವುಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಪ್ರಾರಂಭಿಸುತ್ತೇವೆ~ ಎಂದರು.

ಈ ಉದ್ದೇಶಕ್ಕಾಗಿ ಪಾಲಿಕೆ ಅಲ್ಪಾವಧಿ ಇ-ಟೆಂಡರ್ ಕರೆದಿದೆ. ಸೆ. 30 ಕಡೇ ದಿನ. ಬೀದಿ ಹಂದಿಗಳನ್ನು ಸೆರೆಹಿಡಿಯಲು ಗುತ್ತಿಗೆದಾರರಿಗೆ 3 ಲಕ್ಷ ರೂಪಾಯಿ ಮೊತ್ತ ನಿಗದಿಪಡಿಸಲಾಗಿದೆ.

ಒಮ್ಮೆ ಬೀದಿ ಹಂದಿಗಳನ್ನು ಸೆರೆ ಹಿಡಿದ ನಂತರ ಅವುಗಳನ್ನು ಮಾರಾಟ ಮಾಡಲಾಗುವುದು. ಇದರಿಂದ ಪಾಲಿಕೆ 9 ಲಕ್ಷ ರೂಪಾಯಿ ವರಮಾನ ನಿರೀಕ್ಷಿಸಿದೆ ಎಂದು ಪೀರನ್ ತಿಳಿಸಿದ್ದಾರೆ.ಯಾರು ಟೆಂಡರ್‌ನಲ್ಲಿ ಕಡಿಮೆ ಮೊತ್ತ ನಮೂದಿಸುತ್ತಾರೋ ಅಂತಹವರಿಗೆ ಗುತ್ತಿಗೆ ನೀಡಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT