ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿನಾಯಿ ಹಾವಳಿ: 15 ಮಂದಿಗೆ ಗಾಯ

Last Updated 11 ಸೆಪ್ಟೆಂಬರ್ 2013, 9:55 IST
ಅಕ್ಷರ ಗಾತ್ರ

ಕುಣಿಗಲ್: ಪಟ್ಟಣದಲ್ಲಿ ಬೀದಿ ನಾಯಿ­ಗಳ ಹಾವಳಿ ಹೆಚ್ಚಾಗಿದ್ದು, ಕಳೆದ ಎರಡು ದಿನಗಳಿಂದ ಹದಿನೈದಕ್ಕೂ ಹೆಚ್ಚು ಮಂದಿ ನಾಯಿ ಕಡಿತದಿಂದ ಗಾಯ­ಗೊಂ­ಡಿದ್ದಾರೆ. ತೀವ್ರವಾಗಿ ಗಾಯ­ಗೊಂಡ ಬಾಲಕಿಯನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸ­ಲಾಗಿದೆ.

ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ವಾಸವಿರುವ ಖಾಸಗಿ ಶಾಲೆಯೊಂದರ ಪ್ರಾಚಾರ್ಯ ಶಿವಪ್ಪ ಅವರ ಪುತ್ರಿ ಮಧುಮಿತ (10), ಅಂಗಡಿ­ಯಿಂದ ಮನೆಗೆ ತೆರಳುತ್ತಿದ್ದ ಸಂದರ್ಭ ಬೀದಿ ನಾಯಿ ಕಚ್ಚಿ ಗಾಯಗೊಳಿಸಿದೆ.

ನಾಯಿ ಕಡಿತದಿಂದಾಗಿ ತಲೆ, ಮುಖ, ಕೈ, ತೊಡೆ ಭಾಗಕ್ಕೆ ಗಾಯವಾಗಿದೆ. ಪಟ್ಟಣದ ಸರ್ಕಾರಿ ಆಸ್ಪತ್ರೆ­ಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗ­ಳೂರು ಆಸ್ಪತ್ರೆಗೆ ಕಳಿಸಲಾಗಿದೆ. ಇದೆ ಬಡಾ­ವಣೆ­ಯ ಜಾಹಿದುನ್ನಿಸಾ, ಕೋಟೆ ಪ್ರದೇಶದ ಪ್ಯಾರೆಜಾನ್ (6), ದಸ್ತಗೀರ್, ನವಾಬ್, ಗುಜ್ಜಾರಿ ಮೊಹಲ್ಲಾ ಬಡಾವಣೆಯ ರಿಜ್ವಾನ್, ಪುರಸಭೆ ಬಸ್‌ನಿಲ್ದಾಣ ಬಳಿ ನಾಗರಾಜ್, ಸುರೇಶ್ ಎಂಬುವವರಿಗೆ ಬೀದಿ ನಾಯಿ­ಗಳು ಕಚ್ಚಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಬೀದಿ ನಾಯಿ ನಿಯಂತ್ರಿಸುವಲ್ಲಿ ಪುರಸಭೆ ಅಧಿಕಾರಿಗಳು ವಿಫಲ­ರಾ­ಗಿದ್ದು, ಕೂಡಲೆ ಅಗತ್ಯ ಕ್ರಮ ಕೈಗೊಳ್ಳ­ಬೇಕೆಂದು ವಕೀಲರಾದ ರೆಹಮಾನ್, ಶುಕೂರುಲ್ಲ ಮತ್ತು ಸಾರ್ವಜನಿಕರು ಎಚ್ಚರಿಸಿದ್ದಾರೆ.

ಮುಖ್ಯಾಧಿಕಾರಿ ಅನ್ನದಾನಿ ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಬೀದಿನಾಯಿ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT