ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧ ವಿಹಾರ: ಪ್ರೇಮಿಗಳ ಮದುವೆ

Last Updated 7 ಫೆಬ್ರುವರಿ 2011, 10:25 IST
ಅಕ್ಷರ ಗಾತ್ರ

ಮೈಸೂರು: ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಯುವಕ, ಯುವತಿ ಪೋಷಕರ ವಿರೋಧದ  ನಡುವೆಯೂ ನಗರದ ಬುದ್ಧ ವಿಹಾರ ದಲ್ಲಿ ಭಾನುವಾರ ವಿವಾಹವಾದರು.
ಹುಣಸೂರು ತಾಲ್ಲೂಕು ಆಲ ಗೋಡಿನ ಜಯಕುಮಾರ್ ಮತ್ತು ತಿ.ನರಸೀಪುರ ತಾಲ್ಲೂಕಿನ ನಾಗರತ್ನ  ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಪ್ರೇಮಿಗಳು.

ಖಾಸಗಿ ಕಂಪೆನಿಯಲ್ಲಿ ನೌಕರ ನಾಗಿರುವ ಜಯಕುಮಾರ್, ನಾಗರತ್ನ ಅವರನ್ನು ಪ್ರೀತಿಸುತ್ತಿದ್ದನು. ಇಬ್ಬರು  ಅನ್ಯ ಜಾತಿಗೆ ಸೇರಿದ್ದರಿಂದ ಇವರ ವಿವಾಹಕ್ಕೆ ಪೋಷಕರು ಅಡ್ಡಗಾಲಾ ಗಿದ್ದರು.ಇದರಿಂದ ಬೇಸತ್ತ ಯುವ  ಮನಸ್ಸುಗಳು ಜ.23ರಂದು ನಗರ ದಲ್ಲಿರುವ ಬಸವ ಕೇಂದ್ರದ ಮೊರೆ ಹೋಗಿದ್ದರು. ಅಂದಿನಿಂದಲೇ ಪ್ರೇಮಿ ಗಳನ್ನು ಒಂದು ಮಾಡಿಸುವ ಪ್ರಯತ್ನ ಶುರುವಾಯಿತು. ಭಾನುವಾರ ಬುದ್ಧ ವಿಹಾರದ ಕಲ್ಯಾಣ ಸಿರಿ  ಬಂತೇಜಿ ಅವರ ಮೊರೆ ಹೋದ ಪ್ರೇಮಿಗಳು ಅವರ ಸಮ್ಮುಖದಲ್ಲಿ ತಾಳಿ ಕಟ್ಟಿ, ಹಾರ ಬದಲಿಸಿಕೊಳ್ಳುವ ಮೂಲಕ ಸರಳ ವಾಗಿ ವಿವಾಹವಾದರು.

ಪ್ರೇಮಿಗಳ ವಿವಾಹಕ್ಕೆ ಮಾಜಿ ಮೇಯರ್ ಎಂ.ಪುರುಷೋತ್ತಮ್, ಸೋಮಯ್ಯ ಮಲೆಯೂರು, ಕೆ.ರವಿ ,  ಡಾ.ರಾಜಾನಂದಮೂರ್ತಿ ಅವರು ಸಾಕ್ಷಿಯಾದರು. ಜಯಕುಮಾರ್ ಅವರ ತಂದೆ ರಾಜು ಆರಂಭದಲ್ಲಿ  ವಿರೋಧ ವ್ಯಕ್ತಪಡಿಸಿದರಾದರೂ ಕೊನೆಗೆ ಒಪ್ಪಿಗೆ ಸೂಚಿಸಿ ವಿವಾಹದಲ್ಲಿ ಪಾಲ್ಗೊಂಡಿದ್ದರು. ಹುಡುಗಿಯ  ಪೋಷಕರು ಹೊರತುಪಡಿಸಿ ಸಂಬಂಧಿ ಕರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT