ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧನ ಆದರ್ಶ ಅಳವಡಿಸಿಕೊಳ್ಳಿ

Last Updated 12 ಜೂನ್ 2011, 19:30 IST
ಅಕ್ಷರ ಗಾತ್ರ

ಹಾಸನ:  `ಪ್ರಜ್ಞಾವಂತ ಸಮಾಜ ಇಂದು ಬುದ್ಧ ತತ್ವದೆಡೆಗೆ ನಡೆಯುತ್ತಿದೆ. ನಾವೂ ಅದನ್ನು ಅನುಸರಿಸುವುದು ಅಗತ್ಯ. ಪ್ರಬುದ್ಧ ಸಮಾಜ ನಿರ್ಮಾಣಕ್ಕೆ ಬುದ್ಧನ ತತ್ವಗಳನ್ನು ಅನುಸರಿಸುವುದು ಅನಿವಾರ್ಯ~ ಎಂದು ಬೆಂಗಳೂರಿನ ಸ್ಫೂರ್ತಿಧಾಮದ ಬೋಧಿದತ್ತ ಬಂತೇಜಿ ನುಡಿದರು.

2555ನೇ ಬುದ್ಧ ಜಯಂತಿ ಅಂಗವಾಗಿ ದಲಿತ ಸಂಘರ್ಷ ಸಮಿತಿಯು ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಬೌದ್ಧ ಸಮಾವೇಶದ ಸಾನ್ನಿಧ್ಯ ವಹಿಸಿ   ಮಾತನಾಡಿದರು.`ಅಂಬೇಡ್ಕರ್ ಬಲಿಷ್ಠ ರಾಷ್ಟ್ರ ನಿರ್ಮಾಣದ ಕನಸು ಕಂಡಿದ್ದರು. ಬುದ್ಧನ ಮಾರ್ಗದಲ್ಲಿ ನಡೆಯುವ ಮೂಲಕ ಅದನ್ನು ಸಾಕಾರಗೊಳಿಸಬಹುದು ಎಂಬ ನಂಬಿಕೆ ಇಟ್ಟಿದ್ದರು.

ಬುದ್ಧನ ಮಾರ್ಗದಲ್ಲೇ ನಡೆಯುವ ಮೂಲಕ ನಾವು ಯಾವ ಮಾರ್ಗವನ್ನು ಅನುಸರಿಸಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದೇ  ಮೊದಲ ಬಾರಿ ರಾಜ್ಯಮಟ್ಟದಲ್ಲಿ ಬೌದ್ಧ ಸಮಾವೇಶ ನಡೆಯುತ್ತಿರುವುದು ಸಂತೋಷದ ವಿಚಾರ. ಇಂಥ ಸಮಾವೇಶಗಳು ಅಂಬೇಡ್ಕರ್ ಅವರ ಕನಸನ್ನು  ನನಸಾಗಿಸಬಲ್ಲವು. ಸಮುದಾಯವನ್ನು ದಲಿತತ್ವದಿಂದ ಬುದ್ಧತ್ವದೆಡೆಗೆ ಎತ್ತುವ ಕೆಲಸವನ್ನು ಸಮಾವೇಶ ಮಾಡಬೇಕು~ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಂ. ದೇವದಾಸ್ ಸಮಾವೇಶವನ್ನು ಉದ್ಘಾಟಿಸಿದರು. ರಾಜ್ಯ ಸಂಚಾಲಕ ಸತ್ಯ  ಭದ್ರಾವತಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಪ್ರತಿನಿಧಿಗಳು  ಪಾಲ್ಗೊಂಡರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT