ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಿ–ಸೌಂದರ್ಯದ ಸಂಗಮ ತಾರಕೇಶ್ವರಿ ಸಿನ್ಹಾ

Last Updated 9 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕೇವಲ 26 ವಯಸ್ಸಿನಲ್ಲಿ 1952ರ  ಬಿಹಾರದ  ಬರ್ಹದಿಂದ  ಮೊದಲ ಲೋಕಸಭೆಗೆ ಪ್ರವೇಶ ಪಡೆದು ಹಲವರು ಮೂಗಿನ ಮೇಲೆ ಕೈ ಇಟ್ಟುಕೊಳ್ಳು­ವಂತೆ ಮಾಡಿದವರು. 1942ರ  ಚಲೇಜಾವ್ ಚಳವಳಿಗೆ ಬಿಹಾರದಿಂದ ಪ್ರವೇಶಿಸಿದ ಸಿನ್ಹಾ, ಮದುವೆ­ಯಾಗಿ ಕೋಲ್ಕತ್ತಗೆ ಹೋದರು. ಆದರೆ, ಐಎನ್‌ಎ ಸೈನ್ಯದ ವಿಚಾರಣೆಯು ಇವರಲ್ಲಿ ಕುತೂಹಲ ಕೆರಳಿಸಿ ಮತ್ತೆ ರಾಜಕೀಯದತ್ತ ಮುಖ ಮಾಡಿದರು. ದೇಶ ವಿಭಜನೆಯ ಬಳಿಕ ಗಾಂಧೀಜಿ ನಳಂದಾಗೆ ಬಂದಾಗ ಅವರನ್ನು ಸ್ವಾಗತಿಸಿ­ದ ತಂಡ­ದಲ್ಲಿ ಸಿನ್ಹಾ ಇದ್ದರು.

ಮುಂದೆ ಲಂಡನ್‌ ಸ್ಕೂಲ್‌ ಆಫ್‌ ಇಕನಾಮಿಕ್ಸ್‌­ನಲ್ಲಿ  ಸ್ವಲ್ಪ ಸಮಯ ಅಧ್ಯಯನ ಮಾಡಿದರು.
ವಾದ ಕೌಶಲಕ್ಕೆ ಹೆಸರಾಗಿದ್ದ ಅವರು ತಮ್ಮ ಭಾಷಣ­ಗಳಿಂದ  ಸಂಸತ್ತಿನಲ್ಲಿ ಎಲ್ಲರ ಗಮನ ಸೆಳೆದರು. 1958ರಲ್ಲಿ ನೆಹರೂ ಸಂಪುಟದಲ್ಲಿ ಮೊದಲ ಮಹಿಳಾ ಉಪಹಣಕಾಸು ಸಚಿವೆಯಾದರು.

1969ರಲ್ಲಿ ಕಾಂಗ್ರೆಸ್ ಇಬ್ಭಾಗವಾದಾಗ ರಾಜಕೀಯ ಜೀವನದ ಉತ್ತುಂಗ­ದಲ್ಲಿದ್ದ ಸಿನ್ಹಾ, ಮೊರಾರ್ಜಿ ಗುಂಪಿನ ಜತೆ ಹೋದರು.  ಈ ನಿರ್ಧಾರ ಅವರ ರಾಜಕೀಯ ಜೀವನ­ ಮೊಟಕು­ಗೊಳಿಸಿತು.

ಸತತ ನಾಲ್ಕು ಸಲ 1952,1957, 1962, 1967ರಲ್ಲಿ  ಲೋಕ­ಸಭೆಗೆ ಆಯ್ಕೆ­ಯಾಗಿದ್ದರು. ಹಿಂದಿ ಸಿನಿಮಾ ‘ಆಂಧಿ’ ಇಂದಿರಾ ಮತ್ತು ಭಾಗಶಃ ಸಿನ್ಹಾ ಅವರ ಬದುಕನ್ನು ಆಧರಿಸಿದ ಚಲನಚಿತ್ರ.

ಇಂದಿರಾ ಅವರು ರಾಜ­ಕೀಯ­ವಾಗಿ  ಪ್ರಭಾವಶಾ­ಲಿಯಾಗಿದ್ದ ಸಂದರ್ಭದಲ್ಲಿ  ಮೊರಾರ್ಜಿ ಮತ್ತು ಕೆ.ಕಾಮರಾಜ್‌ ಬಣ ಸೇರಿದ ಇವರು ರಾಜಕೀಯ­ದಲ್ಲಿ ಮತ್ತೆ ಮೇಲೇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT