ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 10-7-1963

Last Updated 9 ಜುಲೈ 2013, 19:59 IST
ಅಕ್ಷರ ಗಾತ್ರ

`ಭಾರತಕ್ಕೆ ನೆರವಿತ್ತರೆ ಕಮ್ಯೂನಿಸಂ ಪ್ರಸಾರಕ್ಕೆ ಪ್ರೋತ್ಸಾಹವಿತ್ತಂತೆ'
ರಾವಲ್ಪಿಂಡಿ, ಜುಲೈ 9 - ಭಾರತದ ಸೇನಾ ಸಾಮರ್ಥ್ಯವನ್ನು ಬಲಪಡಿಸುವ ಪಶ್ಚಿಮ ರಾಷ್ಟ್ರಗಳ ನೀತಿಯಿಂದ ಏಷ್ಯದ ಸಣ್ಣ ರಾಷ್ಟ್ರಗಳು ಭಾರತದಿಂದ ದೂರವಾಗಿ ಚೀಣಿ ಆಶ್ರಯವನ್ನರಸ ಬೇಕಾದೀತೆಂದು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನರು ನಿನ್ನೆ ಇಲ್ಲಿ ಎಚ್ಚರಿಕೆಯಿತ್ತರು.

ಅಪಪ್ರಚಾರದಿಂದ `ಅಪಾಯಕರ ಪರಿಣಾಮ'
ಮಾಸ್ಕೊ, ಜುಲೈ 9 - ರಷ್ಯ, ಚೀಣಗಳ ನಡುವಣ ಸಂಬಂಧವನ್ನು ಉದ್ದೇಶಪೂರ್ವಕವಾಗಿ ಕೆಡಿಸಲು ಚೀಣ ನಡೆಸುತ್ತಿರುವ ಪ್ರಚಾರದಿಂದ `ಅಪಾಯಕರ ಪರಿಣಾಮಗಳು' ಉಂಟಾಗುವುದೆಂದು ಸೋವಿಯತ್ ರಷ್ಯ ಇಂದು ಜನತಾ ಚೀಣಕ್ಕೆ ಎಚ್ಚರಿಕೆಯಿತ್ತರು.

ಈ ಪರಿಣಾಮಗಳೇನೆಂಬುದನ್ನು ಸೋವಿಯತ್ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿ ಸ್ಪಷ್ಟಪಡಿಸಲಿಲ್ಲ `ಪ್ರಾವ್ಡಾ' ಪತ್ರಿಕೆಯಲ್ಲಿ ಪ್ರಥಮ ಪುಟದಲ್ಲಿ ಪ್ರಕಟಿಸಿದ ಹೇಳಿಕೆಯೊಂದರಲ್ಲಿ ಸಮಿತಿ ಈ ರೀತಿ ಎಚ್ಚರಿಕೆಯಿತ್ತಿದೆ.

ಮಗುವಿನ ಹೃದಯಕ್ಕೆ ಕವಾಟದ ಜೋಡಣೆ
ನ್ಯೂಯಾರ್ಕ್, ಜುಲೈ 9
- ಜೂನ್ 18 ರಂದು ಇಲ್ಲಿನ ಆಸ್ಪತ್ರೆಯೊಂದರಲ್ಲಿ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಹನ್ನೊಂದು ತಿಂಗಳ ಶಿಶುವೊಂದರ ಹೃದಯದಲ್ಲಿ ಅತಿ ಚಿಕ್ಕ ಕವಾಟಗಳನ್ನು (ವಾಲ್ವ್ಸ್) ಅಳವಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT