ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 12–5–1965

Last Updated 11 ಮೇ 2015, 19:30 IST
ಅಕ್ಷರ ಗಾತ್ರ

ಶ್ರೀಮತಿ ಗಾಂಧಿಯವರಿಂದ ಕ್ಷಮಾಪಣೆ ಬೇಡಿಕೆ
ನವದೆಹಲಿ, ಮೇ 11–
ಷೇಕ್‌ ಅಬ್ದುಲ್ಲಾರ ಮೇಲಿನ ನಿರ್ಬಂಧದ ಬಗ್ಗೆ ರೇಡಿಯೋ ವಾರ್ತಾ ಪ್ರಸಾರ ತಡವಾದುದಕ್ಕೆ ಕೇಂದ್ರ ಪ್ರಸಾರ ಮತ್ತು ವಾರ್ತಾ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಲೋಕಸಭೆಯಲ್ಲಿ ಕ್ಷಮಾಪಣೆ ಬೇಡಿದರು.

ವಿಶೇಷ ಕಾರಣಗಳಿಂದಾಗಿ ಈ ವಾರ್ತೆಯನ್ನು ತಡವಾಗಿ ಪ್ರಸಾರ ಮಾಡಲಾಯಿತೆಂದು ಅವರು ನುಡಿದರು.

ಅಕ್ರಮವಾಗಿ ಷೇಕ್‌ರ ಸಂದರ್ಶನ ಪಡೆದ ಬ್ರಿಟಿಷ್‌ ಪತ್ರಕರ್ತನ ಬಂಧನ
ಕೊಯಮತ್ತೂರು, ಮೇ 1–
ಉದಕ ಮಂಡಲದಲ್ಲಿ ಷೇಕ್‌‌ ಅಬ್ದುಲ್ಲಾರ ಬಂಗಲೆಯಲ್ಲಿ ಅವರ ಅಕ್ರಮ ಸಂದರ್ಶನ  ಪಡೆದನೆಂದು ಹೇಳಲಾಗಿರುವ ಬ್ರಿಟನ್‌ ಪೌರ ಮತ್ತು ಲಂಡನ್ನಿನ ಪತ್ರಕರ್ತ ಟಿ.ಸಿ.ಜಿ. ಸ್ಟೇಸಿ ಎಂಬಾತನನ್ನು ನಿನ್ನೆ ಬಂಧಿಸಲಾಗಿದೆ. ಇಲ್ಲಿನ ಪ್ರಥಮದರ್ಜೆ ಮ್ಯಾಜಿಸ್ಟ್ರೇಟರು ಇಂದು ಆತನನ್ನು 14 ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಿದರು.

ಕೊಯಮತ್ತೂರಿನ ಸೆಂಟ್ರಲ್‌ ಜೈಲಿನಲ್ಲಿ ಸ್ಟೇಸಿಯನ್ನು ಇರಿಸಲಾಗಿದೆ. ಆರೋಪ ವ್ಯಕ್ತಗೊಳ್ಳುವಂತಹ ಪ್ರಕರಣಕ್ಕೆ ಆತ ಸಂಬಂಧಿಸಿದ್ದಾನೆಂಬ ಗುಮಾನಿ ಮೇಲೆ ಕೇಂದ್ರ ಗುಪ್ತ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಷೇಕ್‌‌ ಮನೆಯವರೆಲ್ಲರ ಸ್ನೇಹಿತನಾದ ತಾನು ಅನೇಕ ವರ್ಷಗಳಿಂದ ಷೇಕ್‌‌ ಅಬ್ದುಲ್ಲಾರೊಡನೆ ನಿಕಟ ಸಂಪರ್ಕ ಹೊಂದಿರುವುದಾಗಿ ಸ್ಟೇಸಿ ತಮಗೆ ತಿಳಿಸಿದ್ದನೆಂದು ಉದಕಮಂಡಲದ ಜಿಲ್ಲಾ ಕಲೆಕ್ಟರ್‌ ಶ್ರೀ ಎಚ್‌.ಎಂ. ಸಿಂಗ್‌ ತಿಳಿಸಿದರು.

‘ಸ್ಟೇಸಿ, ಲಂಡನ್‌ ಪ್ರಕಟಣಾ ಸಂಸ್ಥೆಯೊಂದರ ಸದಸ್ಯ ಮತ್ತು ವ್ಯಾಪಾರಿ ಸಂಸ್ಥೆಯೊಂದರ ಅಧಿಕಾರಿ ಎಂದು ಆತನ ಪಾಸ್‌ಪೋರ್ಟಿನಿಂದ ತಿಳಿದುಬಂದಿದೆ. ಆತನ ಪಾಸ್‌ಪೋರ್ಟ್‌ ವಶಪಡಿಸಿಕೊಳ್ಳಲಾಗಿದೆ’ ಎಂದು ಅವರು ನುಡಿದರು.

‘ಷೇಕ್‌ ಅಬ್ದುಲ್ಲಾ ವಿರುದ್ಧ ಕ್ರಮ ಅನೈತಿಕ’
ಮದ್ರಾಸ್‌, ಮೇ 11
– ಷೇಕ್‌‌ ಅಬ್ದುಲ್ಲಾರ ವಿರುದ್ಧ ಸರ್ಕಾರ ಕೈಗೊಂಡಿರುವ  ಕ್ರಮ ‘ಅನೈತಿಕ ಮತ್ತು ರಾಜಕಾರಣಕ್ಕೆ ತಕ್ಕದ್ದಲ್ಲ’ ಎಂದು ಸ್ವತಂತ್ರ ಪಕ್ಷದ ಸಂಸ್ಥಾಪಕ ಸಿ. ರಾಜಗೋಪಾಲಾಚಾರಿ ಅವರು ‘ಸ್ವರಾಜ’ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದ ರಲ್ಲಿ ಹೇಳಿದ್ದಾರೆ.
‘ಅಭಿಪ್ರಾಯ ವ್ಯಕ್ತಗೊಳಿಸಲು ಅವಕಾಶ ನೀಡದೆ, ಹೇಳಿಕೆಗಳು ಮತ್ತು ಅವುಗಳಿಗೆ ಇತರರು ಕಲ್ಪಿಸಿದ ಅರ್ಥದ ಆಧಾರದ ಮೇಲೆ ವ್ಯಕ್ತಿಯೊಬ್ಬನಿಗೆ ಶಿಕ್ಷೆ ವಿಧಿಸುವುದು ಸರಿಯಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT