ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 22-2-1962

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಭದ್ರತಾ ಸಮಿತಿ ಮುಂದೆ :ಕಾಶ್ಮೀರದ ಬಗ್ಗೆ ಪಾಕ್ ವಾದ

ಕರಾಚಿ, ಫೆ. 21 - ಮುಂದಿನ ತಿಂಗಳು ಭದ್ರತಾ ಸಮಿತಿ ಮುಂದೆ ಪರಿಶೀಲನೆಗೆ ಬರಲಿರುವ ಕಾಶ್ಮೀರ ವಿವಾದದ ಬಗ್ಗೆ ಪಾಕಿಸ್ತಾನವು ನಾಳೆ ತನ್ನ ವಾದವನ್ನು ಅಂತಿಮವಾಗಿ ತಯಾರು ಮಾಡುತ್ತದೆ.

ಭದ್ರತಾ ಸಮಿತಿ ಮುಂದೆ ಈ ವಿವಾದವನ್ನು ಮಂಡಿಸುವ ಮುನ್ನ ವಿಶ್ವರಾಷ್ಟ್ರ ಸಂಸ್ಥೆ ಪಾಕಿಸ್ತಾನ್ ನಿಯೋಗಕ್ಕೆ ಹೊಸ ಸೂಚನೆಗಳನ್ನು ಪಾಕಿಸ್ತಾನ್ ಸರ್ಕಾರವು ನೀಡುವುದಾಗಿ ಪಾಕಿಸ್ತಾನ್ ವಿದೇಶಾಂಗ ಮಂತ್ರಿ ಎಸ್. ಕೆ. ದೆಲ್ವಿ ಪತ್ರಿಕಾ ಪ್ರತಿನಿಧಿಗಳಿಗೆ ತಿಳಿಸಿದರು.

ತಮಗೆ ವಿರಾಮಬೇಕೆಂದು ನೆಹರೂ

ಲಂಡನ್, ಫೆ. 21 - `ಕೆಲಸ ಮುಗಿಸುವುದನ್ನು ನೋಡಬೇಕೆಂದು ನನಗೆ ಇಷ್ಟ. ಆದರೆ ನಾನು ಇನ್ನು ಎಷ್ಟು ಕಾಲ ಇರಬಲ್ಲೆನೋ ವರ್ಷವೋ, ಎರಡು ವರ್ಷವೋ, ಮೂರು ವರ್ಷವೋ - ಯಾರಿಗೆ ಗೊತ್ತು?~ ಎಂದು ಭಾರತದ ಪ್ರಧಾನ ಮಂತ್ರಿ ನೆಹರೂ ಹೇಳಿದುದಾಗಿ `ಡೇಲಿ ಮೇಲ್~ ಪತ್ರಿಕೆ ವರದಿ ಮಾಡಿದೆ.

`ನನಗೆ ಸ್ವಲ್ಪ ವಿರಾಮ - ವಿಶ್ರಾಂತಿ ಬೇಕೆನಿಸುತ್ತದೆ~ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT