ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 4-7-1962

Last Updated 3 ಜುಲೈ 2012, 19:30 IST
ಅಕ್ಷರ ಗಾತ್ರ

ಸ್ವತಂತ್ರ ಆಲ್ಜಿರಿಯ ಉದಯ
ಪ್ಯಾರಿಸ್, ಜುಲೈ 3
- ಫ್ರಾನ್ಸಿನ ಅಧ್ಯಕ್ಷ ಡಿಗಾಲ್ ಅವರು ಆಲ್ಜಿರಿಯದ ಸ್ವಾತಂತ್ರ್ಯವನ್ನು ಇಲ್ಲಿ ಇಂದು ಔಪಚಾರಿಕವಾಗಿ ಘೋಷಿಸಿದರು.

ಈ ಸಂದರ್ಭದಲ್ಲಿ ಅವರು ಸಂದೇಶವೊಂದನ್ನು ಹೊರಡಿಸಿ, “ಆಲ್ಜಿರಿಯದ ಸ್ವಾತಂತ್ರ್ಯಕ್ಕೆ ಫ್ರಾನ್ಸ್ ಮನ್ನಣೆ ನೀಡುವುದೆಂದು ಫ್ರೆಂಚ್ ಗಣರಾಜ್ಯದ ಅಧ್ಯಕ್ಷರು ಘೋಷಿಸುವುದಾಗಿ” ತಿಳಿಸಿದ್ದಾರೆ.

ಮೂಗಿಗಿಂತ ಮೂಗುತಿ ಭಾರ
ಬೆಂಗಳೂರು, ಜುಲೈ 3
- ಹೆಚ್ಚು ಸಿಬ್ಬಂದಿಯ ನೇಮಕವನ್ನು ನಿವಾರಿಸುವ ಹಾಗೂ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಲೆಕ್ಕಾಚಾರ ಮಾಡುವ ಯಂತ್ರ ವ್ಯವಸ್ಥೆಯನ್ನು ಸ್ಥಾಪಿಸುವ ಕಾರಣವಾಗಿ ಭದ್ರಾವತಿಯಲ್ಲಿರುವ ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ 157 ಲಕ್ಷ ರೂ. ನಷ್ಟ ಸಂಭವಿಸಿತೆಂದು ರಾಜ್ಯ ಸರ್ಕಾರದ 1960-61ನೆ ವರ್ಷದ ಲೆಕ್ಕ ಪರಿಶೋಧನೆ ವರದಿ ತಿಳಿಸಿದೆ.

`ಭಾರತಕ್ಕೆ ನೆರವು ನಿಲ್ಲಿಸುವ ಸುದ್ದಿ ಸುಳ್ಳು~
ಲಂಡನ್, ಜುಲೈ 3
- ಭಾರತಕ್ಕೆ ನೆರವು ನೀಡುವ ರಾಷ್ಟ್ರಗಳ ಸಂಘವು ಅಮೆರಿಕದ ಒತ್ತಾಯಕ್ಕೆ ಮಣಿದು ಭಾರತಕ್ಕೆ ನೆರವು ನೀಡುವುದನ್ನು ನಿಲ್ಲಿಸಲು ನಿರ್ಧರಿಸಿದೆಯೆಂಬ ವರದಿಗಳಲ್ಲಿ ಸತ್ಯಾಂಶವೇನೂ ಇಲ್ಲವೆಂದು ಭಾರತದ ಹಣಕಾಸಿನ ಮಂತ್ರಿ ಶ್ರೀ ಮೊರಾರ್ಜಿ ದೇಸಾಯಿ ಅವರು ಇಂದು ಇಲ್ಲಿ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT